ಶಿರಾಡಿ ಘಾಟ್ ಮೆಗಾ ಸುರಂಗ ಯೋಜನೆ: 12 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆ

0

ಶಿರಾಡಿ ಘಾಟ್ ನಲ್ಲಿ ಸುರಂಗಮಾರ್ಗ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಮೆಗಾ ಸುರಂಗ ಮಾರ್ಗಕ್ಕೆ ನೀಲನಕಾಶೆ ತಯಾರಿಸಲಾಗಿದ್ದು, ಸುಮಾರು 12,000 ಕೋಟಿ ರೂಪಾಯಿ ಖರ್ಚು ತಗುಲಬಹುದೆಂದು ಅಂದಾಜಿಸಲಾಗಿದೆ. ಈ ಕುರಿತಂತೆ 12 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆಯಾಗಿದೆ.

ಕರಾವಳಿಯ ಹೆಬ್ಬಾಗಿಲು ಮಂಗಳೂರು ಮತ್ತು ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಸಂಚಾರವನ್ನು ಸುಲಲಿತಗೊಳಿಸುವ ದೂರಗಾಮಿ ಯೋಜನೆಯೊಂದು ಸಿದ್ಧಗೊಂಡಿದೆ. ಪಶ್ಚಿಮಘಟ್ಟದ ಬೆಟ್ಟ ಶ್ರೇಣಿಯನ್ನು ಸೀಳಿಕೊಂಡು ಹೋಗುವ ಮೆಗಾ ಸುರಂಗ ಮಾರ್ಗಕ್ಕೆ ನೀಲನಕಾಶೆ ತಯಾರಿಸಲಾಗಿದ್ದು, ಸುಮಾರು 12,000 ಕೋಟಿ ರೂಪಾಯಿ ಖರ್ಚು ತಗುಲಬಹುದೆಂದು ಅಂದಾಜಿಸಲಾಗಿದೆ.ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿದ್ದು, ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ.

ಬೆಂಗಳೂರು- ಚೆನ್ನೈ ಹಾಗೂ ಬೆಂಗಳೂರು-ಮಂಗಳೂರು ನಡುವೆ ಸಮಾನ ಅಂತರವಿದ್ದರೂ, ಚೆನ್ನೈಗೆ ಇರುವ ಸುಲಲಿತ ರಸ್ತೆಯಿಂದಾಗಿ ಮಹಾನಗರಗಳ ನಡುವೆ ಆರ್ಥಿಕ ಚಟುವಟಿಕೆ ವ್ಯಾಪಕವಾಗಿದೆ. ಇದೇ ಪ್ರಮಾಣದ ಆರ್ಥಿಕ ಚಟುವಟಿಕೆಯನ್ನು ಮಂಗಳೂರು ಜತೆ ನಡೆಸಲು ಸಾಧ್ಯವಿದ್ದರೂ ರಸ್ತೆ ಸಮರ್ಪಕವಿಲ್ಲದಿರುವುದು ಹಿನ್ನೆಡೆಯಾಗಿದೆ.ಈ ಸಮಸ್ಯೆ ಇಲ್ಲವಾಗಿಸಲು, ಘಾಟಿಯಲ್ಲಿರುವ ರೈಲು ಹಳಿ ಮಾದರಿಯಲ್ಲೇ ಸುರಂಗ ಭೂಮಾರ್ಗ ನಿರ್ಮಿಸಲು ಯೋಜಿಸಲಾಗಿದೆ.

ಹಾಸನ ಜಿಲ್ಲೆಯ ಮರೇನಹಳ್ಳಿಯಿಂದ ದ.ಕ. ಜಿಲ್ಲೆಯ ಶಿರಾಡಿಯ ಅಡ್ಡಹೊಳೆಯವರೆಗೆ 23.4 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸುವುದು ಉದ್ದೇಶ. ಇದರಲ್ಲಿ ಸುರಂಗ ಮಾತ್ರವಲ್ಲದೆ, ಅಂಡರ್‌ ಪಾಸ್‌, ಓವರ್‌ಬ್ರಿಜ್‌, ಮುಕ್ತ ರಸ್ತೆಯೂ ಸೇರಿದೆ. ಮಾರ್ನಹಳ್ಳಿ- ಅಡ್ಡಹೊಳೆ ಮಧ್ಯೆ 27 ಕಿ.ಮೀ. ಕಾಂಕ್ರೀಟ್‌ ರಸ್ತೆ ಇದ್ದು, ಸುರಂಗ ಮಾರ್ಗ ಪ್ರತ್ಯೇಕವಾಗಿರಲಿದೆ.ಸುರಂಗ ಯೋಜನೆಗೆ ಡಿಪಿಆರ್‌ ಮಾಡಲಾಗಿದ್ದು, ಕೇಂದ್ರಕ್ಕೆ ಸಲ್ಲಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದು ಎನ್‌ಎಚ್‌ಎಐನ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ರಮೇಶ್‌ ಬಾಬು ತಿಳಿಸಿದ್ದಾರೆ. ಕೇಂದ್ರ ಭೂಸಾರಿಗೆ ಇಲಾಖೆ ಒಪ್ಪಿಗೆ ನೀಡಿದ ಮೇಲೆ ಯೋಜನೆ ಅನುಷ್ಠಾನಕ್ಕೆ ಬರಲಿದೆ.ರಾ.ಹೆ. 75ರಲ್ಲಿ

ಹಾಸನದಿಂದ ಮಾರ್ನಹಳ್ಳಿಯವರೆಗೆ 46 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ನಿರ್ವಹಿಸುತ್ತಿದ್ದ ಐಸೋಲೆಕ್ಸ್‌ ಕಂಪನಿ ಗುತ್ತಿಗೆಯಿಂದ ಹಿಂದೆ ಸರಿದಿದೆ. ಇದನ್ನು ರಾಜ್‌ಕಮಲ್‌ ಕಂಪನಿ ನಡೆಸಲಿದೆ. ಬಂಟ್ವಾಳದಿಂದ ಶಿರಾಡಿಯ ಅಡ್ಡಹೊಳೆಯವರೆಗೆ ಮಳೆಹಾನಿ ನಿರ್ವಹಣಾ ಕಾಮಗಾರಿ 17 ಕೋಟಿ ರೂ. ವೆಚ್ಚದಲ್ಲಿನಡೆಯುತ್ತಿದೆ. ಈ ಭಾಗದಲ್ಲಿ ಚತುಷ್ಪಥ ಕಾಮಗಾರಿ ಸ್ಥಗಿತಗೊಂಡಿದೆ. ಇದಕ್ಕೆ ಪ್ರತ್ಯೇಕ ಟೆಂಡರ್‌ ಕರೆಯಲಾಗಿದೆ. ಕಾಮಗಾರಿಯನ್ನು ವಿಭಾಗಿಸಲಾಗಿದೆ. ಬಂಟ್ವಾಳದಿಂದ ಪೆರಿಯಶಾಂತಿವರೆಗೆ 1600 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ನಡೆಯಲಿದೆ. ಪೆರಿಯಶಾಂತಿಯಿಂದ ಅಡ್ಡಹೊಳೆಯವರೆಗಿನ ಕಾಮಗಾರಿಗೆ ಪರಿಸರ ಇಲಾಖೆಯ ಮಾರ್ಗದರ್ಶಿ ಸೂತ್ರದ ಪ್ರಕಾರ ಪ್ರತ್ಯೇಕ ಡಿಪಿಆರ್‌ ತಯಾರಿಸಲಾಗುತ್ತದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here