ಹಿಮ್ಸ್ ಆಸ್ಪತ್ರೆಯಲ್ಲಿ ಬೆಡ್‌ಗಳ ಸಂಖ್ಯೆ 600 ಕ್ಕೆ ಏರಿಕೆಗೆ: ಸೂಚನೆ

0

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಜನರು ಅಸಹಾಯಕರಾಗುತ್ತಿದ್ದಾರೆ ಅಂತಹವರಲ್ಲಿ ತಕ್ಷಣ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕು ಹಾಗಾಗಿ ಮೊದಲ ಪ್ರಯತ್ನವಾಗಿ ಗುರುವಾರ ಸಂಜೆಯೊಳಗೆ ನಗರದ ಹಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್‌ಗಳ ಸಂಖ್ಯೆ 600ಕ್ಕೆ ಏರಿಕೆ ಮಾಡಬೇಕು ಎಂದು ಶಾಸಕರಾದ ಪ್ರೀತಂ ಜೆ ಗೌಡ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು ನಾಳೆಯಿಂದಲೇ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸಾ ಹಾಗೂ ನಿಯಂತ್ರಣ ಕ್ರಮಗಳ ಸುಧಾರಣೆ ಪ್ರಾರಂಭವಾಗಬೇಕು ಎಂದರು.

ಹಿಮ್ಸ್ನಲ್ಲಿ ಲಭ್ಯವಿರುವ ಸೌಲಭ್ಯ ಬಳಸಿ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿ, ಪ್ರಾರಂಭದಲ್ಲಿ 400 ಆಮ್ಲಜನಕ ಬೆಡ್ ಹಾಗೂ 200 ವಿಶೇಷ ನಿಗಾ ಇರುವ ಆಮ್ಲಜನಕ ರಹಿತ ಬೆಡ್ ಸೌಲಭ್ಯ ಕಲ್ಪಿಸಿ ಲಭ್ಯ ಅನುದಾನ ಬಳಸಿ, ಹೆಚ್ಚುವರಿ ಹಣ ಬೇಕಿದ್ದಲ್ಲಿ ಸರ್ಕಾರದಿಂದ ಒದಗಸಿಕೊಡಲಾಗುವುದು ಎಂದು ಅವರು ಹೇಳಿದರು
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಈವರೆಗಿನ ವ್ಯವಸ್ಥೆ, ತುರ್ತು ಅಗತ್ಯಗಳ ಬಗ್ಗೆ ವಿವರಿಸಿದರು.ಆಮ್ಲಜನಕ ,ರೆಮ್ ಡಿಸಿವರ್ ಪೂರೈಕೆ ಅಗತ್ಯಗಳ ಬಗ್ಗೆ ಅವರು ವಿವರಿಸಿದರು ನಾಳೆಯಿಂದಲೇ ಕೋವಿಡ್ ಕೇರ್ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.

ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರದಲ್ಲಿ 150 ಆಮ್ಲಜನಕ ಬೆಡ್ ವ್ಯವಸ್ಥೆ ಮಾಡಬೇಕು ರೆಮ್‌ಡಿಸಿವರ್ ಚುಚ್ಚುಮದ್ದು ನಿರ್ವಹಣೆಗೆ ತಜ್ಞರ ಸಮಿತಿ ನೇಮಿಸಿ ಯಾವುದೇ ತಾರತಮ್ಯ ಮಾಡದೆ ಅವಶ್ಯಕತೆ ಇರುವವರಿಗೆ ನೀಡಬೇಕು ಬೋರಿಂಗ್ ಆಸ್ಪತ್ರೆ ನೆರವಿನೊಂದಿಗೆ ಎಲ್ಲಾ ಸೋಂಕಿತರ ಸ್ಯಾಂಪ್ ಟೆಸ್ಟ್ ಮಾಡಿ 24-36 ಗಂಟೆಯೊಳಗೆ ವರದಿ ನೀಡಬೇಕು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಸಿಲಿಂಡರ್ ಪೂರೈಕೆ ಯಾಗಬೇಕು. ಕೈಗಾರಿಕಾ ಸಿಲಿಂಡರ್ ಗಳನ್ನು ವಶಪಡಿಸಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗೆ ಬಳಸಿಕೊಳ್ಳಬೇಕು ಇದಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.

ಆಸ್ಪತ್ರೆಗಳಲ್ಲಿ ಬೆಡ್ ಸಾಮಾರ್ಥ್ಯ ಹೆಚ್ಚಳ, ರೆಮ್ ಡಿಸಿವರ್ ಚುಚ್ಚುಮದ್ದು ಆಮ್ಲಜನಕ ಬಳಕೆಯ ಜವಾಬ್ದಾರಿಯುತ ನಿರ್ವಹಣೆಗೆ ಹಾಗೂ ಸೋಂಕಿತರ ಪತ್ತೆ ಮತ್ತು ಕೋವಿಡ್ ಕೇರ್ ಕೇಂದ್ರ ಹೆಚ್ಚಿಸುವ ಬಗ್ಗೆ ಶಾಸಕರಾದ ಪ್ರಿತಂ ಜೆ ಗೌಡ ಅವರು ಹಲವು ಸಲಹೆ ಸೂಚನೆಗಳನ್ನು ನೀಡಿದರು

ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಯಾವುದೇ ತಾರತಮ್ಯ ಮಾಡಬಾರದು. ತೀವ್ರ ನಿಗಾ ಅಗತ್ಯ ಇರುವವರಿಗೆ ಆಸ್ಪತ್ರೆ ಚಿಕಿತ್ಸೆ ದೊರೆಯುವಂತಾಗಬೇಕು . ರೋಗ ಲಕ್ಷಣ ಇರುವ ಆದರೆ ಹೆಚ್ಚು ಅಪಾಯ ಇಲ್ಲದವರನ್ನು ಹೋಂ ಐಸೋಲೇಷನ್ ಮಾಡಿ ಔಷಧಿ ನೀಡಿ ಪ್ರತಿನಿತ್ಯ ಆರೋಗ್ಯ ವಿಚಾರಿಸಬೇಕು ಮನೆಯಲ್ಲಿ ಸೂಕ್ತ ಸೌಲಭ್ಯ ಇಲ್ಲದ ಎಲ್ಲರನ್ನೂ ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರ ಮಾಡಿ ಎಂದು ಶಾಸಕರು ಸೂಚಿಸಿದರು.

ಶೀತ, ಜ್ವರ ಇರುವವರೆಲ್ಲನ್ನೂ ತಪಾಸಣೆಗೆ ಒಳಪಡಿಸಿ ವರದಿ ಬರುವವಗೆ ಅವರನ್ನು ಕೋವಿಡ್ ಕೇರ್ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಿ ಎಂದು ಅವರು ಹೇಳಿದರು.

ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮವಾರು ಇರುವ ಸೋಂಕಿತರು ರೋಗ ಲಕ್ಷಣ ಇರುವವರ ವರದಿ ಪ್ರತಿ ದಿನ ನೀಡಬೇಕು ಎಂದರು.

ಎಲ್ಲಾ ಆಶಾ, ಅಂಗನವಾಡಿ ಕಾರ್ಯಕರ್ತರು ಸಕ್ರಿಯರಾಗಬೇಕು, ಹಾಸ್ಟೆಲ್ ಕಾಲೇಜು ಕಟ್ಟಡ ಬಳಸಿ ಕೊವಿಡ್ ಕೇರ್ ಕೇಂದ್ರಗಳನ್ನು ಹೆಚ್ಚಿಸಬೇಕು , ಅಲ್ಲಿ . ನಾಳೆಯಿಂದಲೇ ಊಟೋಪಚಾರ ವ್ಯವಸ್ಥೆ ಮಾಡಬೇಕು ಸೋಂಕು ಲಕ್ಷಣ. ಇರುವವೆಲ್ಲರನ್ನೂ ಈ ಕೇಂದ್ರಗಳಿಗೆ ಸ್ಥಳಾಂತರ ಮಾಡಿ, ತಪಾಸಣೆ ಮಾಡಿ. ಪಾಸಿಟಿವ್ ಬಂದವರನ್ನು ಚಿಕಿತ್ಸೆಯ ಅಗತ್ಯಕ್ಕೆ ಅನುಗುಣವಾಗಿ ಆಯಾಯ ಆಸ್ಪತ್ರೆಗೆ ಕಳುಹಿಸಿಕೊಡಿ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ಹಿಮ್ಸ್ನಲ್ಲಿ ಆಮ್ಲಜನಕ ಅಗತ್ಯ ಇಲ್ಲದ ಸೊಂಕಿತರ ಪತ್ಯೇಕ ಕಟ್ಟಡಕ್ಕೆ ಸ್ಥಳಾಂತರ ಮಾಡಿ. ಆಮ್ಲಜನಕ ಕಡಮೆ ಅಗತ್ಯ ಇರುವವರನ್ನು ಒಂದು ಕಡೆ ಇರಿಸಿ, ತೀವ್ರ ನಿಗಾ ಅಗತ್ಯ ಇರುವವರನ್ನು ಒಂದು ಕಡೆ ಸ್ಥಳಾಂತರ ಮಾಡಿ ಬೆಡ್ ಗಳ ಸಮರ್ಪಕ ನಿರ್ವಹಣೆ ಮಾಡಿ ಎಂದು ಅವರು ಸಲಹೆ ನೀಡಿದರು.

LEAVE A REPLY

Please enter your comment!
Please enter your name here