ರೈಲು ನಿಲುಗಡೆ ಸಮಯ ಏನು?ರೈಲು ಸಂಖ್ಯೆ 12781 ಹೊಳೆನರಸೀಪುರ ನಿಲ್ದಾಣಕ್ಕೆ ರಾತ್ರಿ 9:30/9:31 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.ರೈಲು ಸಂಖ್ಯೆ 12782 ಹೊಳೆನರಸೀಪುರ ನಿಲ್ದಾಣಕ್ಕೆ ರಾತ್ರಿ 11:51/11:52 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
ರೈಲ್ವೆ ಕಾಮಗಾರಿ ವಿವಿಧ ರೈಲುಗಳ ಸಂಚಾರ ವ್ಯತ್ಯಯಬೆಳಗಾವಿ ಜಿಲ್ಲೆಯ ಉಗಾರ ಖುರ್ದ-ಕುಡಚಿ ಭಾಗದ ನಡುವಿನ ಜೋಡಿ ಮಾರ್ಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆ.4ರಿಂದ 8ವರೆಗೆ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಹುಬ್ಬಳ್ಳಿ-ಮಿರಜ್-ಹುಬ್ಬಳ್ಳಿ ಡೇಲಿ ಎಕ್ಸ್‌ಪ್ರೆಸ್ (17332/31), ಮೀರಜ್ – ಕ್ಯಾಸಲ್ ರಾಕ್ ಡೈಲಿ ಎಕ್ಸ್‌ಪ್ರೆಸ್ ರೈಲು(17333) ಸಂಚಾರವನ್ನು ರದ್ದುಗೊಳಿಸಲಾಗುತ್ತಿದೆತಿರುಪತಿ – ಕೊಲ್ಲಾಪುರ -ತಿರುಪತಿ(17415) ಎಕ್ಸ್‌ಪ್ರೆಸ್ ರೈಲು ಸೆ.4ರಿಂದ 7 ರವರೆಗೆ ಬೆಳಗಾವಿವರೆಗೆ ಮಾತ್ರ ಸಂಚರಿಸಲಿದೆ. ಸೆ.4ರಿಂದ 8ರವರೆಗೆ ತಿರುಪತಿಗೆ ತೆರಳುವ ಕೊಲ್ಲಾಪುರ-ತಿರುಪತಿ(17416)ರೈಲು ಬೆಳಗಾವಿ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
ಮೀರಜ್-ಬೆಂಗಳೂರು ರಾಣಿ ಚೆನ್ನಮ್ಮಾ ಎಕ್ಸ್‌ಪ್ರೆಸ್ ರೈಲು ಮೀರಜ್ ನಿಲ್ದಾಣದಿಂದ ಸೆ.3,4,5ರಂದು 40 ನಿಮಿಷ ಹಾಗೂ 60 ನಿಮಿಷ ತಡವಾಗಿ ಸಂಚಾರ ಆರಂಭಿಸಲಿದೆ. ಅದೇ ರೀತಿ ಪಂಢರಪುರ ನಿಲ್ದಾಣದಿಂದ ಫಂಡರಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು(16542)
ಸೆ. 8ರಂದು 60 ನಿಮಿಷ ತಡವಾಗಿ ಸಂಚಾರ ಆರಂಭಿಸಲಿದೆ. ಪಂಢರಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (16542) ರೈಲು
ಸೆಪ್ಟೆಂಬರ್ 8 ರಂದು ಪಂಢರಪುರ ನಿಲ್ದಾಣದಿಂದ 60 ನಿಮಿಷ ಕಾಲ ತಡವಾಗಿ ಹೊರಡಲಿದೆ. ಸೆ. 4 ರಂದು ಎರ್ನಾಕುಲಂ ನಿಲ್ದಾಣದಿಂದ ಹೊರಡುವ ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್ ರೈಲು(11098) ಮಾರ್ಗ ಮಧ್ಯ 30 ನಿಮಿಷ ಕಾಲ ನಿಲುಗಡೆಯಾಗಲಿದೆ. ಅದೇ ದಿನದಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ಹಜರತ್ ನಿಜಾಮುದ್ದೀನ್-ಮೈಸೂರು ಸೂಪರ್‌ಫಾಸ್ಟ್ ಎಕ್ಸಪ್ರೆಸ್ (12782) ರೈಲನ್ನು ಮಾರ್ಗ ಮಧ್ಯೆ 30 ನಿಮಿಷ ನಿಲುಗಡೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ ಎರಡನೇ ವಾರದಿಂದ ನಿಲುಗಡೆ ಆರಂಭಮೈಸೂರಿನಿಂದ ಸೆಪ್ಟೆಂಬರ್ 8, 2023 ರಿಂದ ಮಾರ್ಚ್ 8, 2024 ರವರೆಗೆ ಹಾಗೂ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಸೆಪ್ಟೆಂಬರ್ 9, 2023 ರಿಂದ ಮಾರ್ಚ್ 11, 2024 ರವರೆಗೆ ಜಾರಿಗೆ ಬರುವಂತೆ ರೈಲುಗಳ ಸಂಖ್ಯೆ 12781/12782 ಮೈಸೂರು ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳ ನಡುವೆ ಸಂಚರಿಸುವ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲುಗಳು ಹೊಳೆನರಸೀಪುರ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆಗೆ ಅವಕಾಶ ನೀಡಲಾಗುತ್ತಿದೆ.
ಬೆಂಗಳೂರು: ಮೈಸೂರು – ದೆಹಲಿ ನಡುವೆ ವಾರದಲ್ಲಿ ಒಮ್ಮೆ ಸಂಚರಿಸುವ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲು ಹಾಸನದ ಹೊಳೆನರಸೀಪುರದಲ್ಲಿ ನಿಲುಗಡೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. , ಈ ರೈಲು ಹೊಳೆನರಸೀಪುರ ನಿಲ್ದಾಣದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಆರು ತಿಂಗಳ ಅವಧಿಗೆ ಒಂದು ನಿಮಿಷ ಕಾಲ ರೈಲುಗಳ ನಿಲುಗಡೆಗೆ ತಾತ್ಕಾಲಿಕ ಅವಕಾಶ ನೀಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ