60ದೇವಾಲಯ ಜೀರ್ಣೋದ್ಧಾರ

0

ನೀರಾವರಿ ಇಲಾಖೆ ಹಣದಲ್ಲಿ ದೇಗುಲಗಳ ಅಭಿವೃದ್ಧಿ: ಶಾಸಕ ಎಚ್.ಡಿ.ರೇವಣ್ಣ

ಹೊಳೆನರಸೀಪುರ: ತಾಲೂಕಿನ ಗ್ರಾಮೀಣ ಪ್ರದೇಶದ 60ಕ್ಕೂ ಹೆಚ್ಚು ದೇಗುಲ ಪುನರುಜೀವನಕ್ಕೆ ನೀರಾವರಿ ಇಲಾಖೆಯಿಂದ ಹಣ – ನೀಡಲಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ.

ತಾಲೂಕಿನ ಹಳೇಕೋಟೆ ಹೋಬಳಿ ಚನ್ನಾಪುರ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆ ಹಾಗೂ ದೇವತಾ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಾಪುರ ತಮ್ಮ ತಂದೆಯವರ ರಾಜಕೀಯ ಜೀವನಕ್ಕೆ ಹೆಚ್ಚು ಒತ್ತಾಸೆ ನೀಡಿದ ಗ್ರಾಮ. ಅದೇ ರೀತಿ ತಮಗೂ 30 ವರ್ಷಗಳಿಂದ ಒತ್ತಾಸೆ ನೀಡುತ್ತಿದೆ ಎಂದು ತಿಳಿಸಿದರು.

ಇತರೆ ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಇಲಾಖೆಯ ಅನುದಾನದಲ್ಲಿ ದೇವಾ ಲಯಗಳ ಅಭಿವೃದ್ಧಿ ಆಗಿಲ್ಲ, ಆ ಕಾರ್ಯ ಹೊಳೆನರಸೀಪುರದಲ್ಲಿ ನೆರವೇರಿದೆ. ತಾವು, ತಮ್ಮ ಕುಟುಂಬ ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ. ಅದರಲ್ಲೂ ಪಟ್ಟಣದಲ್ಲಿರುವ ಕಾಲೇಜುಗಳು, ಬೇರೆ ದೊಡ್ಡ ನಗರಗಳಲ್ಲೂ ಇರಲು ಸಾಧ್ಯವಿಲ್ಲ, ಅಂತಹ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವ ನೆಪದಲ್ಲಿ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿವೆ. ಇದನ್ನು ಅರಿತ ತಾವು , ಸರ್ಕಾರಿ ಕಾಲೇಜುಗಳನ್ನು ತಂದು, ಗ್ರಾಮೀಣಪ್ರದೇಶದ ಶ್ರೀಸಾಮಾನ್ಯನ ಮಕ್ಕಳು ಸಹ ಉನ್ನತ ವ್ಯಾಸಂಗ ಮಾಡಿ, ಅವರಿಗೂ ಸೂಕ್ತ ಸ್ಥಾನಮಾನ ಸಿಗಲಿ ಎಂಬುದು ತಮ್ಮ ಆಶಯ ತಮ್ಮದಾಗಿದೆ ಎಂದು ಹೇಳಿದರು.

ಶ್ರೀಗುರು ಸಿದ್ದರಾಮೇಶ್ವರ, ಶ್ರೀರಾಮಯೋಗೇಶ್ವರ, ಬೇಬಿ ಮಠದ ಮಲ್ಲಿಕಾರ್ಜನ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಪೂಜಾ ಕಾರ್ಯದ ನೇತೃತ್ವವನ್ನು ತೇಜೂರು ಸಿದ್ದರಾಮೇಶ್ವರ ಶಿವಯೋಗಿ ಮಠದ ಕಲ್ಯಾಣ ಸ್ವಾಮೀಜಿ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಎಚ್.ಎನ್. ದೇವೇಗೌಡ, ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್, ತಾಲೂಕು ಪಂಚಾಯಿತಿ ಇಒ ಕೆ.ಯೋಗೇಶ್, ಹಳ್ಳಿಮೈಸೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ಪ್ರಭುಶಂಕರ್, ಗ್ರಾಮ’ ಮುಖಂಡ, ಗ್ರಾಪಂ ಸದಸ್ಯ ವಿರೂಪಾಕ್ಷ ಸಿ.ಎನ್.ಬಸಪ್ಪ, ವಿಶ್ವನಾಥ್, ಗುರುರಾಜ್ ಮತ್ತಿತರರು ಭಾಗಹಿಸಿದ್ದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ ಅವರು ಆಶೀರ್ವಚನನೀಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಭಕ್ತರಿಗೆ ತೊಂದರೆ ಆಗದಂತೆ ಪೂಜೆಕಾರ್ಯ ಮುಂದುವರಿಸಿ

ಮುಜರಾಯಿ ದೇವಾಲಯಗಳ ಅರ್ಚಕರು ಭಕ್ತರಿಗೆ ತೊಂದರೆ ಆಗದಂತೆ ಮ್ಮ ದೈನಂದಿನ ಕರ್ತವ್ಯ ನಡೆಸಿಕೊಂಡು ಹೋಗಬೇಕೆಂದು ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ನುಡಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ತಾಲೂಕಿನ 188 ದೇವಾಲಯಗಳ ಅರ್ಚಕರಿಗೆ 36 ಲಕ್ಷ ರೂ. ತಸ್ಥಿಕ್ ಹಣ ವಿತರಣೆ ಮಾಡಿ ಮಾತನಾಡಿದ ಅವರು,ಅರ್ಚಕರು ಭಕ್ತರಿಗೆ ತೊಂದರೆ ಆಗದಂತೆ ಉತ್ತಮವಾಗಿ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್, ಗ್ರೇಡ್-2 ತಹಶೀಲ್ದಾರ್ ರವಿ, ಕಂದಾಯ ಮತ್ತು ಮುಜರಾಯಿ ಇಲಾಖೆ ಸಂಬಂಧಿ, ಕಂದಾಯ ಇಲಾಖೆ ಸಂಬಂಧಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here