Holenarasipura

ಹೊಳೆನರಸೀಪುರ : ಸ್ವತಂತ್ರ ಚಳುವಳಿಯಲ್ಲಿ ಭಾಗಿಯಾಗಿದ್ದ ಶ್ರೀನಿವಾಸ್ ಭಾರತದ‌ 75ನೇ ಸ್ವಾತಂತ್ರ್ಯ ‌ಸಂಭ್ರಮದಲ್ಲಿ

By

August 14, 2022

ಹೊಳೆನರಸೀಪುರ: ಭಾರತ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಗಳಿಗೆಯಲ್ಲಿ ಸ್ವತಂತ್ರ ದೊರೆಯಲು ಬಲಿದಾನ ಮಾಡಿದಂತಹ ಮಹನೀಯರನ್ನು ನೆನೆಯುವ ಸುದಿನ ಎಂದು ಸ್ವತಂತ್ರ ಚಳುವಳಿಯಲ್ಲಿ ಭಾಗಿಯಾಗಿದ್ದ ಹಿರಿಯರಾದ ಮಾಜಿ ಪುರಸಭಾ ಅಧ್ಯಕ್ಷ ಶ್ರೀನಿವಾಸ್ ನುಡಿದರು.ಪುರಸಭೆಯ ಕಾರ್ಯಾಲಯದ ಮುಂಭಾಗ ಏರ್ಪಡಿಸಿದ್ದ ದೇಶ ವಿಭಜನೆಯ ಸಂದರ್ಭದಲ್ಲಿ ಜರುಗಿದ ಭಯಾನಕ ಘಟನೆಗಳನ್ನು ನೆನಪಿಸುವ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಸ್ವತಂತ್ರ ಪಡೆಯಲು ನಡೆದಂತ ಘಟನಾವಳಿಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿದರು. ಈ ಪುಣ್ಯ ಕೆಲಸಕ್ಕೆ ಭಾಗಿಯಾದ ರಾಷ್ಟ್ರ ನಾಯಕರುಗಳನ್ನ ಸ್ಮರಿಸಿದರು.ಸ್ವತಂತ್ರ ಹೋರಾಟದ ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯರಾದ ಶ್ರೀನಿವಾಸ, ಗುರುದೇವಪ್ಪ, ಕೃಷ್ಣಮೂರ್ತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು .

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಸುಧಾ ನಳಿನಿ ,ಮುಖ್ಯ ಅಧಿಕಾರಿ ವಿ ಡಿ ಶಾಂತಲಾ ,ಉಪಾಧ್ಯಕ್ಷೆ ಸುಲೋಚನಾ ಹಾಗೂ ಪುರಸಭಾ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು .ಇದೇ ಸಂದರ್ಭದಲ್ಲಿ ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಪ್ರದರ್ಶಿಸುವಂತಹ ಎಲ್ಇಡಿ ಸ್ಕ್ರೀನ್ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಹೊಳೆನರಸೀಪುರ : 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತೋತ್ಸವದ ಅಂಗವಾಗಿ ಸೈಕಲ್ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಸ್ವರ್ಣ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಮಂಜೇಶ್ ಸಿಎ ತಿಳಿಸಿದರು.

ಪಟ್ಟಣದ ಸ್ವರ್ಣ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಸೈಕಲ್ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಲಭಿಸಿ 75 ವರ್ಷಗಳಾಗಿದೆ. ಈ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಗಳ ಮೂಲಕ ಜಾಗೃತಿ ಮೂಡಿಸುವ ಜಾತ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ಸೈಕಲ್ ಗಳಿಗೆ ರಾಷ್ಟ್ರಧ್ವಜವನ್ನ ಕಟ್ಟಿಕೊಂಡು ಸಾಲಾಗಿ ಸಂಚರಿಸುವ ಮೂಲಕ ದೇಶಭಕ್ತಿಯನ್ನು ಸಾರಿದರು. ದೇಶಭಕ್ತಿಯ ಕಿಚ್ಚು ಎಲ್ಲ ಮಕ್ಕಳಲ್ಲಿ ಮೇಳೈಸಿದ್ದು ಗೋಚರಿಸಿತು. ಎಲ್ಲ ವಿದ್ಯಾರ್ಥಿಗಳ ಕೈಯಲ್ಲಿ ಹಿಡಿದ ತಿರಂಗ ಮನಮೋಹಕವಾಗಿ ಕಾಣಿಸುತ್ತಿತ್ತು.

ಜಾತ ಕಾರ್ಯಕ್ರಮದಲ್ಲಿ ಆಡಳಿತ ವ್ಯವಸ್ಥಾಪಕ ಅಭಿಲಾಶ್, ಕಾರ್ಯದರ್ಶಿ ಶೋಭಾ ಬಾಲಕೃಷ್ಣ ಶಿಕ್ಷಕರಾದ ದೇವರಾಜು ಜಿಡಿ, ಭಾರತಿ ಹೆಚ್ಎಲ್ , ಆಶಾ, ಒಳಗೊಂಡಂತೆ ಶಿಕ್ಷಕರಿಂದ ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

ಫೋಟೋ :75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸ್ವರ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸೈಕಲ್ ಜಾತ ನಡೆಸುತ್ತಿರುವುದು.