ವಿಶ್ವ ಪರಿಸರ ದಿನ OXYGEN CHALLENGE ಆರಂಭಿಸಿದ ಹಾಸನ ABVP ವಿದ್ಯಾರ್ಥಿ ಘಟಕ

0

ಹಾಸನ / ಕರ್ನಾಟಕ : ABVP ಕರ್ನಾಟಕ ವತಿಯಿಂದ ಜೂನ್ 5 ವಿಶ್ವ ಪರಿಸರ ದಿನದಂದು ಪ್ರಾರಂಭವಾದ OXYGEN CHALLENGE, ಹೆಸರಿನಲ್ಲಿ ಕರ್ನಾಟಕದ 31 ಜಿಲ್ಲೆಗಳಲ್ಲಿ ಗಿಡಗಳನ್ನು ನೆಡುವ ಅಭಿಯಾನ ಆರಂಭವಾಗಿದೆ.

ಒಬ್ಬರು ಗಿಡಗಳನ್ನ ನೆಟ್ಟರೆ ಇತರರೆ ವಿದ್ಯಾರ್ಥಿ ಘಟಕಕ್ಕೆ ಚಾಲೆಂಜ್ ಕೊಟ್ಟು , ಹೀಗೆ 5ಲಕ್ಷ ಗಿಡಗಳನ್ನು ನೆಡಬೇಕು ಹಾಗೂ ಒಂದು ವರ್ಷ ಸಂಶೋಷಣೆ ಮಾಡಬೇಕೆನ್ನುವ OXYGEN CHALLENGE ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ ಐಎಎಸ್ ಆಫೀಸರ್ ಗಳು ಪೊಲೀಸ್‌ ಅಧಿಕಾರಿಗಳು ಪೂಜ್ಯ ಸ್ವಾಮೀಜಿಗಳು, ವಿವಿ ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಅನೇಕ ಗಣ್ಯ ವ್ಯಕ್ತಿಗಳು, ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿ ಈ ಅಭಿಯಾನಕ್ಕೆ ಸಹಕರಿಸಿದ್ದಾರೆ.

ಮುಂದಿನ ದಿನಗಳಲ್ಲಿ 5 ಲಕ್ಷ ಗುರಿಯನ್ನು ತಲುಪುವ ಹಿನ್ನೆಲೆಯಲ್ಲಿ, ಸಾರ್ವಜನಿಕರು, ವಿದ್ಯಾರ್ಥಿಗಳು, ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಕೃತಿಮಾತೆಯ ಈ ಅರ್ಥಪೂರ್ಣ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು

ಇಂದು ಹಾಸನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಆಕ್ಸಿಜನ್ ಚಾಲೆಂಜ್ ಕಾರ್ಯಕ್ರಮಕ್ಕೆ ಬೇಲೂರು ಬಿಜಿಎಸ್ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್ ಗುರುಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆರ್.ಎಫ್.ಒ. ಶ್ರೀ ಪ್ರವೀಣ್ .ಸಿ. ಅರಮನಿ. ಸಾಥ್ ನೀಡಿದರು. ಉಪನ್ಯಾಸಕರಾದ ಶ್ರೀ ಗೋಪಾಲ್. ಎಬಿವಿಪಿ ಜಿಲ್ಲಾ ಪ್ರಮುಖರಾದ ವಿನಯ್.ಕೆ.ವಿ., ವಿಭಾಗ ಸಂಚಾಲಕರಾದ ಭರತ್.ಡಿ. ನಗರ ಸಹ ಕಾರ್ಯದರ್ಶಿಯಾದ ಲೋಕೇಶ್, ಕಾರ್ಯಕರ್ತರಾದ ಶ್ರೀನಿವಾಸ, ದಿಲೀಪ್, ಸುಹಾಸ, ಯೋಗೇಶ್, ಮನೋಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here