ಸಕಲೇಶಪುರದಲ್ಲಿ ನಿನ್ನೆ ನಡೆದ ಪಿಕಪ್ ಓಮ್ನಿ ಅಪಘಾತದಲ್ಲಿ ಮೃತ ಪಟ್ಟ ಡಾರ್ವಿನ್ ಡಿಸೋಜ ಸಕಲೇಶಪುರ ಪುರಸಭಾ ಮಾಜಿ ಸದಸ್ಯರಾದ ಜೆ. ಬಿ ಡಿಸೋಜ ರ ಹಾಗೂ ಮೆರೋನಿಕ ದಂಪತಿಗಳ ಪ್ರಥಮ ಪುತ್ರ ಎಂದು ತಿಳಿದು ಬಂದಿದೆ.
ಡಾರ್ವಿನ್ ಡಿಸೋಜಾ ಹಾಸನ ಡಾನ್ ಬೋಸ್ಕೊ ಐ ಟಿ ಐ ಕಾಲೇಜಿನಲ್ಲಿ ಎರಡನೇ ವರ್ಷ ವಿದ್ಯಾರ್ಥಿ.
ಈತನೇ ವಾಹನ ಚಾಲನೆ ಮಾಡುತ್ತಿದ್ದ. ಇತರೆ 3 ಮಂದಿ ಧೀರಜ್, ಮುತ್ತುರಾಜ್, ಕರಣ್ ಕುಲದೀಪ್ ಗಾಯ ಗೊಂಡಿದ್ದಾರೆ.
ತರಕಾರಿ ಕ್ಯಾಂಟರ್ ಮತ್ತು ಮಾರುತಿ ಓಮಿನಿ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು ಮೂವರು ತೀವ್ರ ರೀತಿಯಲ್ಲಿ ಗಾಯಗೊಂಡಿರುವ ಘಟನೆ ಪಟ್ಟಣದ ಶ್ರೀನಿವಾಸ್ ಕಲ್ಯಾಣ ಮಂಟಪದ ಎದುರಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ಬೆಂಗಳೂರು ಕಡೆಯಿಂದ ಮಂಗಳೂರಿಗೆ ತರಕಾರಿ ಸಾಗಿಸುತ್ತಿದ್ದ ಪಿಕಪ್ ಮತ್ತು ಮಾರುತಿ ಓಮಿನಿ
ಡಿಕ್ಕಿ ಹೊಡೆದ ಪರಿಣಾಮ
ಈ ಘಟನೆ ಸಂಭವಿಸಿದೆ.
ತಾಲೂಕಿನ ಆಚಂಗಿ ಗ್ರಾಮದ ನಿವಾಸಿಗಳಾದ ಡಾರ್ವಿನ್ ಡಿಸೋಜಾ ಮೃತಪಟ್ಟು ಜೀರಾಜ್ , ಮುತ್ತು ರಾಜ್, ಅಭಿಷೇಕ್ ಗಾಯಗೊಂಡಿರುವ ವ್ಯಕ್ತಿಗಳಾಗಿದ್ದಾರೆ. ಇಬ್ಬರ ತಲೆಗೆ ಪೆಟ್ಟು ಬಿದ್ದಿದ್ದು, ಇನ್ನೊಬ್ಬರ ಕೈ ಕಾಲಿಗೆ ಪೆಟ್ಟು ಬಿದ್ದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮಾರುತಿ ಓಮಿನಿ ನುಜ್ಜುಗುಜ್ಜಾಗಿದ್ದು , ತರಕಾರಿ ತುಂಬಿದ ವಾಹನ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ
ಉಪವಿಭಾಗಾಧಿಕಾರಿ ಪ್ರತೀಕ್ಯ ಬಾಯಲ್ , ಡಿವೈಎಸ್ಪಿ ಮಿಥುನ್ , ಸಬ್ ಇನ್ಸ್ ಪೆಕ್ಟರ್
ಶಿವಶಂಕರ್ ಅಫಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.
ಡಿಕ್ಕಿ ಹೊಡೆದ ರಭಸಕ್ಕೆ ಮಾರುತಿ ಓಮಿನಿ ನುಜ್ಜುಗುಜ್ಜಾಗಿದ್ದು , ತರಕಾರಿ ತುಂಬಿದ ವಾಹನ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ.