ಪುಟ್‌ಬಾತ್‌ನಲ್ಲಿ ರಸ್ತೆಯಿಂದ ದೂರ ನಿಂತಿದ್ದರು ಯುವತಿಗೆ ವಾಹನ ಡಿಕ್ಕಿ : ಸಾವು

0

ಹಾಸನ : ರಸ್ತೆಯ ಪುಟ್‌ಬಾತ್‌ನಲ್ಲಿ ನಿಂತಿದ್ದ ಯುವತಿಯೋರ್ವಳಿಗೆ ವಾಹನ ಡಿಕ್ಕಿಯಾಗಿ ಸಾವಪ್ಪಿರುವ ಘಟನೆ ನಡೆದಿದೋಗಿದೆ . , ಹಾಸನ ತಾಲ್ಲೂಕಿನ ಆಂಜನೇಯಪುರ ಧನಲಕ್ಷ್ಮೀ (ಐಶ್ವರ್ಯ) ಎಂಬುವಳು ರಸ್ತೆಯಿಂದ ದೂರ ,  ಬದಿಯಲ್ಲಿ ನಿಂತಿದ್ದರೂ ಪುಟ್‌ಬಾತ್‌ನಲ್ಲಿ ನಿಲ್ಲಿಸಿದ್ದ ಸ್ಕೂಟಿಯ ಪಕ್ಕದಲ್ಲಿ ನಿಂತಿದ್ದ ಆ ಸಂದರ್ಭದಲ್ಲಿ ಗೂಡ್ಸ್ ( ಅಶೋಕ್ ಲೇಲ್ಯಾಂಡ್ ) ವಾಹನವೊಂದು ಯಮನಂತೆ ಅಪ್ಪಳಿಸಿ

ಸ್ಕೂಟಿಗೆ ಡಿಕ್ಕಿಮಾಡಿ , ಅಲ್ಲೇ ಪಕ್ಕದಲ್ಲೇ ನಿಂತಿದ್ದ ಧನಲಕ್ಷ್ಮಿ ಅವರಿಗೆ ಗುದ್ದಿಸಿ, ಅದಲ್ಲದೇ ಕರೆಂಟ್ ಕಂಬಕ್ಕೂ ಗುದ್ದಿಸಿದ ಪರಿಣಾಮ ತೀವ್ರ ಪೆಟ್ಟಾಗಿ ವಿದ್ಯಾರ್ಥಿನಿ ಮೃತಪಟ್ಟಳು . ,ಗ್ರಾಮದ ಶಿವಣ್ಣ ಎಂಬುವರ ಪುತ್ರಿ ಧನಲಕ್ಷ್ಮಿ ಜಿ.ಎಸ್‌ (17) ಕೋಡರಾಮನಹಳ್ಳಿಯ ಚೌಲ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯನ್ನು ಮಾತನಾಡಿಸ ಲೆಂದು ಬಂದಿದ್ದ ವೇಳೆ

ಗೂಡ್ಸ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯವಾದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಈ ಘಟನೆ ಹಾಸನ ಜಿಲ್ಲೆಯ  ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

LEAVE A REPLY

Please enter your comment!
Please enter your name here