ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದ ಗಾಯಾಳು ಮಗುವೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯಿತು : ರಸ್ತೆ ಅಪಘಾತ ಹಾಸನ

0

ಚನ್ನರಾಯಪಟ್ಟಣ : ಸುನಿಲ್‌ ದಂಪತಿ ಮತ್ತು ಮಕ್ಕಳು ಹೊಸ ವರ್ಷದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಸಂಭ್ರಮದಲ್ಲಿದ್ದ ಅವರ ಕುಟುಂಬಕ್ಕೆ ಅಪಘಾತ ಬರಸಿಡಿಲಿನಂತೆ ಬಡಿದಿತ್ತು , ಜನವರಿ 1 ರಂದು ಬೆಳಗಿಹಳ್ಳಿ ಗೇಟ್ ಬಳಿ ಬೈಕ್‌ ಮತ್ತು ಕಾರು ನಡುವೆ ಅಪಘಾತ ಸಂಭವಿಸಿತ್ತು. ಸುನಿಲ್‌ (32) ಅವರು ತಮ್ಮ ಪತ್ನಿ ದಿವ್ಯಾ (26), ಎಂಟು ವರ್ಷದ ಮಗ ಅಜಿತ್‌ ಮತ್ತು ಪುಟ್ಟ ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವಾಗ ಕಾರಿಗೆ ಡಿಕ್ಕಿ ಹೊಡೆದು ಅವಘಡ ನಡೆದಿತ್ತು. ಈ ವೇಳೆ

ಸುನಿಲ್‌ ಅಂದೇ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು ಮೃತಪಟ್ಟರೆ, ದಿವ್ಯಾ ಅವರು ಜನವರಿ 2ರಂದು ಕೊನೆಯುಸಿರೆಳೆದಿದ್ದರು. , ಇಬ್ಬರು ಮಕ್ಕಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಗಾಯಗೊಂಡಿದ್ದ ಎಂಟು ವರ್ಷದ ಬಾಲಕ ಅಜಿತ್ ಗೌಡ (8) ಕೂಡಾ ಪ್ರಾಣ ಕಳೆದುಕೊಂಡಿದ್ದಾನೆ. ಅಪಘಾತದಲ್ಲಿ ಗಾಯಗೊಂಡಿದ್ದ ಮೃತ ದಂಪತಿಯ ಕಿರಿಯ ಪುತ್ರಿ

ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಅಷ್ಟೇ , ಈಗ ಆ ಕುಟುಂಬದ ಪೈಕಿ ಗಂಡು ಮಗುವೂ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿರೋದ್ರಿಂದ . ಒಂದೇ ಕುಟುಂಬದ ಮೂವರು ಈಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಂತಾಗಿದೆ. , ಹೊಸ ವರ್ಷದ ಸಂಭ್ರಮ ಈ ಘಟನೆಯಿಂದ ಅವರ ನೆಂಟರು ಸ್ನೇಹಿತರಿಗೆ ಅಪಘಾತ ಬರಸಿಡಿಲಿನಂತೆ ಬಡಿದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಎಲ್ಲರಿಗೂ ಕರಳು ಚಿವುಟುವಂತಾಗಿದೆ .

LEAVE A REPLY

Please enter your comment!
Please enter your name here