Sakleshpur

ಅಪಘಾತದಲ್ಲಿ ಪ್ರಯಾಣಿಕರಿಗೆ ಗಾಯಗಳಾದರೆ ತಕ್ಷಣ ಆಸ್ಪತ್ರೆಗೆ ಹೋಗಬೇಕೋ / ಬಸ್ ನಿಲ್ದಾಣಕ್ಕೆ ಹೋಗಿ ಆಸ್ಪತ್ರೆಗೆ ಹೋಗಬೇಕೆ?

By Hassan News

January 25, 2023

ಹಾಸನ / ಸಕಲೇಶಪುರ : ಅಪಘಾತ ಆಗಿ ಜನರಿಗೆ ಗಾಯ ಆದ ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯಬೇಕಾದುದು ಕರ್ತವ್ಯ. ಆದರೆ ಇಂದು ಸಕಲೇಶಪುರ ತಾಲೂಕು ವ್ಯಾಪ್ತಿಯಲಲ್ಲಿ ನಡೆದ ಬಸ್ ಅಪಘಾತ ಬಳಿಕ ಮೂಗು, ಬಾಯಿಯಲ್ಲಿ ರಕ್ತ ಸುರಿಯುತ್ತಿದ್ದವರನ್ನು ಆಸ್ಪತ್ರೆಗೆ ಕೊಂಡೊಯ್ಯೋ ಬದಲಾಗಿ ಸುತ್ತಾಟ ಮಾಡಿ ರಸ್ತೆಯಲ್ಲಿ ಬಿಟ್ಟ ಅಮಾನವೀಯ ಘಟನೆ ವರದಿ ಆಗಿದೆ.

ಇಂದು ಬೆಳಿಗ್ಗೆ ಕುಂದಾಪುರ ದಿಂದ ಬೆಂಗಳೂರು ನತ್ತ ಹೊರಟ ಬಸ್ ಸಕಲೇಶಪುರ ದ ಮಾರನ ಹಳ್ಳಿ ಬಳಿ ಅಪಘಾತಕ್ಕೆ ಈಡಾಗಿದೆ. ಈ ಸಂದರ್ಭದಲ್ಲಿ ಆ ಬಸ್ ನಲ್ಲಿದ್ದ ಸುಮಾರು 12 ಮಂದಿಯ ಮುಖ, ತುಟಿ, ಮೂತಿ ಎಲ್ಲಾ ಒಡೆದಿದೆ.

ಈ ಘಟನೆ ನಡೆದ ಬಳಿಕ ಅದರ ಹಿಂದಿದ್ದ ಬಸ್ ನಲ್ಲಿ ಗಾಯಾಳುಗಳನ್ನು ಕರೆದುಕೊಂಡು ಬರಲಾಗಿದೆ. ಆದರೆ ಆ ಬಸ್ ಚಾಲಕ ಅವರೆಲ್ಲಾರನ್ನು ತುರ್ತಾಗಿ ಆಸ್ಪತ್ರೆಗೆ ಕೊಂಡೊಯ್ಯ ಬೇಕಿತ್ತು. ಅದರ ಬದಲಾಗಿ ಆತ ಅವರನ್ನು ಸಕಲೇಶಪುರ ಬಸ್ ನಿಲ್ದಾಣದ ಒಳಗೆ ಕೊಂಡೊಯ್ದಿದ್ದಾರೆ . , ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ 10 ನಿಮಿಷ ಕಳೆದ ಬಳಿಕ ಬಸ್ ನ್ನು ಚಲಾಯಿಸಿ ಸಕಲೇಶಪುರ ಸರಕಾರಿ ಆಸ್ಪತ್ರೆಗೆ ಹೋಗುವ ರಾಷ್ಟೀಯ ಹೆದ್ದಾರಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಕೆ ಎಸ್ ಆರ್ ಟಿ ಸಿ ಸಂಸ್ಥೆಯ ಈ ಅಮಾನವೀಯ ಪ್ರವೃತ್ತಿ ಬಗ್ಗೆ ಗಾಯಾಳುಗಳು ತಿಳಿಸಿದ್ದು, ಪ್ರಯಾಣಿಕರ ಬಗ್ಗೆ ಕಾಳಜಿ ಇಲ್ಲದೆ ವರ್ತನೆ ಮಾಡಿರುವುದು ತೀರಾ ಬೇಸರಗೊಳಿಸಿದೆ .

ಈ ಬಗ್ಗೆ ಕೆ ಎಸ್ ಆರ್ ಟಿ ಸಿ ಉತ್ತರ ನೀಡಬೇಕಿದೆ , ಹಾಗೂ ಪ್ರಯಾಣಿಕರ ಹಾಗೂ ಚಾಲಕ , ನಿರ್ವಾಹಕತ ಅರೋಗ್ಯದ ಕಾಳಜಿ ವಹಿಸಬೇಕಿದೆ

ಅಪಘಾತ ಆದಾಗ ಗಾಯಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯ ಬೇಕಾದುದು ಕರ್ತವ್ಯ. ಅಥವಾ ತುರ್ತು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು.

ಇದು ಯಾವುದನ್ನೂ ಕೂಡ ಮಾಡದೆ ಮೂಗಲ್ಲಿ ರಕ್ತ ಸುರಿಯುತ್ತಿದ್ದವರನ್ನು ರಸ್ತೆಯಲ್ಲಿ ಬಿಟ್ಟು ಹೋದ ಚಾಲಕ ಹಾಗೂ ಸಕಲೇಶಪುರ ಟಿ. ಸಿ ಬಗ್ಗೆ ತನಿಖೆ ನಡೆಸಿ . ಈ ರೀತಿ ಮುಂದೆ ಯಾರಿಗು ಆಗದಂತೆ ಗಮನ ವಹಿಸಬೇಕಿದೆ