ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಕೊನೆ ಪೇಟೆಯಿಂದ ಬಿಕ್ಕೋಡು ಹಾಗೂ ಮರಸು ಹೊಸಳ್ಳಿಗೆ ಹೋಗುವ ರಸ್ತೆಯಲ್ಲಿ ಹರಿಕೃಷ್ಣ ಬಾರ್ ಮುಂಭಾಗ ಸಮಯ ಸುಮಾರು 2:40 ರ ಸಮಯದಲ್ಲಿ ಮುಂದೆ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಹಿಂದೆ ಇಂದ ಬಂದ ಇನೋವಾ ಕಾರು ಗುದ್ದಿ ಕಾರನ್ನು ನಿಲ್ಲಿಸದೆ, ಮತ್ತು ಅತಿಯಾದ ವೇಗದ ಚಾಲನೆಯಿಂದ ಮರಸು ಹೊಸಳ್ಳಿ ಗ್ರಾಮದ ಕಡೆಗೆ ಹೋಗಿದೆ. , ಬಿಕೋಡು ರಸ್ತೆಯಲ್ಲಿ ಇಬ್ಬರು ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಇನೋವಾ ಕಾರು ಗುದ್ದಿದ ರಭಸಕ್ಕೆ ಬೈಕು ಹಾಗೂ ಸವಾರರಿಬ್ಬರು ರಸ್ತೆ ಬದಿಗೆ ಹಾರಿ ಬಿದ್ದು,
ಗಾಯ ಗೊಂಡಿದ್ದಾರೆ, ಅಲ್ಲಿದ್ದ ಸ್ಥಳೀಯರು ಅವರನ್ನು ಮತ್ತೊಂದು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದರು. , ಅಪಘಾತ ನಡೆಸಿದ ಕಾರು ಚಾಲಕ ಕಾರನ್ನು ನಿಲ್ಲಿಸದೆ ಅಪಘಾತವಾದ ಸ್ಥಳದಿಂದ ಇನ್ನೂ ಅತಿಯಾದ ವೇಗದಲ್ಲಿ ಮರಸು ಹೊಸಳ್ಳಿ ಗ್ರಾಮದ ಕಡೆಗೆ ವೇಗವಾಗಿ ಚಲಿಸಿ, ಮರಸು ಹೊಸಳ್ಳಿ ಗ್ರಾಮದ ನಾಗರಾಜು ಎಂಬುವರ ಮನೆಗೆ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಮನೆಯ ಗೋಡೆ ಮುರಿದು ಬಿದ್ದು ಮತ್ತೊಂದು ರೂಮಿನ ಗೋಡೆಯು ಬಿರುಕು ಬಿಟ್ಟಿದೆ. ಅದೃಷ್ಟ ವಶಾತ್ ಮನೆಯ ರೂಮಿನಲ್ಲಿ ಮಲಗಿದ್ದ ಮಗುವಿನ ತಾಯಿ ಹಾಗೂ ಮಗು
ಗಾಭರಿಯಾಗಿದ್ದು, ಯಾವುದೇ ರೀತಿಯ ಅಪಾಯವಾಗಿಲ್ಲ. ಮನೆಯಲ್ಲಿದ್ದ ಪೋಷಕರು ಗುದ್ದಿದ ಶಬ್ದ ಕೇಳಿ ಗಾಬರಿಯಿಂದ ಹೊರಗೆ ಬಂದು ನೋಡಿದಾಗ ಇನೋವಾ ಕಾರು ಮನೆಗೆ ಗುದ್ದಿದ್ದು ಚಾಲಕನು ಅಲ್ಲೇ ಪ್ರಜ್ಞ ಹೀನ ಸ್ಥಿತಿಯಲ್ಲಿ ಇದ್ದದ್ದನ್ನು ಕಂಡ ಅಕ್ಕಪಕ್ಕದ ಮನೆಯವರು ಹಾಗೂ ಕಾರು ಚಾಲಕನನ್ನು ಎಚ್ಚರಿಸಿದ್ದಾರೆ. ಗ್ರಾಮಸ್ಥರು ಅದೇ ಸ್ಥಳದಲ್ಲಿ ಪ್ರಾಥಮಿಕ ಶಾಲೆಯು ಇದ್ದು ಶಾಲೆ ಬಿಡುವ ಸಮಯವಾಗಿದ್ದು
ಬಾರಿ ಅನಾಹುತ ತಪ್ಪಿದಂತಾಗಿದೆ. ಈ ಸಂದರ್ಭದಲ್ಲಿ ನಷ್ಟಕ್ಕೆ ಒಳಗಾದ ಮನೆಯ ಮಾಲೀಕರು ಹಾಗೂ ಸಂಬಂಧ ಪಟ್ಟವರು ನಷ್ಟವನ್ನು ತುಂಬಿ ಕೊಡುವಂತೆ ಮಾಧ್ಯಮದ ಮುಂದೆ ಕೋರಿಕೊಂಡರು.