ಹಾಸನದಿಂದ ಸಕಲೇಶಪುರ ತಾಲ್ಲೂಕು ಹೊಸಕೆರೆ ಗ್ರಾಮಕ್ಕೆ ಬೈಕಿನಲ್ಲಿ ಬರುತ್ತಿದ್ದಾಗ ಬೈಕ್ ಸವಾರ ಸಾವು

0

ಹಾಸನದಿಂದ ಸಕಲೇಶಪುರ ತಾಲ್ಲೂಕು ಹೊಸಕೆರೆ ಗ್ರಾಮಕ್ಕೆ ಬೈಕಿನಲ್ಲಿ ಬರುತ್ತಿದ್ದಾಗ, ಸಕಲೇಶಪುರದಿಂದ ಹಾಸನಕ್ಕೆ ತೆರಳುತ್ತಿದ್ದ ಕಾರೊಂದು ನೇರವಾಗಿ ಬೈಕಿಗೆ ಡಿಕ್ಕಿ ಹೊಡೆದಿದೆ .,‌ ಪರಿಣಾಮ ಕಾರು ಮೋಟಾರು ಬೈಕಿಗೆ ಡಿಕ್ಕಿ ಹೊಡೆದ ಈ ಘಟನೆಯಲ್ಲಿ ಬೈಕ್ ಸವಾರ ಜೆ. ವಿನೋದಕುಮಾರ್ (22ವರ್ಷ) ಸ್ಥಳದಲ್ಲಿ ಮೃತಪಟ್ಟ ಘಟನೆ ಸೋಮವಾರ (13ಮಾರ್ಚ್2023) ಸಂಜೆ ರಾಷ್ಟ್ರೀಯ ಹೆದ್ದಾರಿ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಾವನೂರು ಬಳಿ ಸಂಭವಿಸಿದೆ. , ಮೃತನಿಗೆ

ತಂದೆ, ತಾಯಿ, ಸಹೋದರ ಇದ್ದಾರೆ. ಮಗನ‌ಕಳೆದು‌ಕೊಂಡ ಪೋಷಕರ ಆಕ್ರಂದನ ಮುಗಿಲು‌ ಮುಟ್ಟಿತ್ತು , ಆಲೂರು ಪಟ್ಟಣ ಪೊಲೀಸರು ಪ್ರಕರಣ ದಾಖಲಾಗಿದೆ

ಹೊಳೇನರಸೀಪುರದಲ್ಲಿ ಕುಳಿತಿದ್ದ ವ್ಯಕ್ತಿಗೆ ಹೃದಯಾಘಾತ

ಹಾಸನ ಜಿಲ್ಲೆಯ ಹೊಳೆನರಸೀಪುರ ದ ಕಾರ್ಯಾಲಯ ಬಡಾವಣೆಯ ನಿವಾಸಿ ದಿವಂಗತ ಅಣ್ಣಾಜಿ ಪುತ್ರ ವಿರೂಪಾಕ್ಷ (41)

ಹೃದಯ ಘಾತದಿಂದ ಮೃತಪಟ್ಟ ಮತ್ತೊಂದು ಘಟನೆ ಮಂಗಳವಾರ ( 13ಮಾರ್ಚ್ 2023 ) ಸೋಮವಾರ ಸಂಜೆ ಸ್ನೇಹಿತನ ಅಂಗಡಿಯ ಮುಂದೆ ಕುಳಿತು ಫೋನ್‍ನಲ್ಲಿ ಮಾತನಾಡುವ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾದರು. ಎಂಎ ಪದವೀಧರರಾಗಿದ್ದ ವಿರುಪಾಕ್ಷ ಅವಿವಾಹಿತರಾಗಿದ್ದರು. , ಸ್ನೇಹಿತರ ಮಕ್ಕಳಿಗೆ ಉಚಿತ ಮನೆ ಪಾಠ ಮಾಡುತ್ತಾ ಜನಾನುರಾಗಿಯಾಗಿದ್ದರು. ಮಂಗಳವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಯಿತು

LEAVE A REPLY

Please enter your comment!
Please enter your name here