Arkalgud

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮುತ್ತಿಗೆ ಗ್ರಾಮದ ನಿವಾಸಿ ಶ್ರಮಕ್ಕೆ ಒಲಿದ ಪಿಹೆಚ್ ಡಿ ಪದವಿ

By Hassan News

February 27, 2023

ಸತೀಶ ಎಂ ಎಸ್ ಅವರು ಡಾ. ಕೆ ಸಿ ರವಿಶಂಕರ್ , ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಗಣಕಯಂತ್ರ ವಿಭಾಗ,ಸರ್ಕಾರಿ ಇಂಜಿನೀಯರಿಂಗ್ ಕಾಲೇಜು ಮೊಸಳೆ ಹೊಸಹಳ್ಳಿ, ಹಾಸನ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ

“ಇಂಪ್ಲಿಮೆಂಟೇಷನ್ ಆಫ್ ಎನ್ಹಾನ್ಸ್ಡ್ಸೆಕ್ಯುರಿಟಿ ಮೆಕ್ಯಾನಿಸಂಸ್ ಫಾರ್ ಹಡೂಪ್ ಬೇಸ್ಡ್ ಕ್ಲೌಡ್ ಡಾಟಾ” ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.ಹಾಸನ ಜಿಲ್ಲೆ,ಅರಕಲಗೂಡು ತಾಲೂಕು,ಮುತ್ತಿಗೆ ಗ್ರಾಮದ ನಿವಾಸಿ ಶ್ರೀಮತಿ ರತ್ನಮ್ಮ ಮತ್ತು ಶ್ರೀ ಸಣ್ಣೇಗೌಡ ರವರ ಪುತ್ರನಾದ

ಇವರು ಪ್ರಸ್ತುತ ನವಕೀಸ್ ಇಂಜಿನೀಯರಿಂಗ್ ಕಾಲೇಜು ಹಾಸನ ಇಲ್ಲಿ ಗಣಕಯಂತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.