ಬೈಕಿನಲ್ಲಿ 3 ಜನ ಹುಡುಗರು ಬಸ್ ನಿಲ್ಲಿಸುವಂತೆ ಹೇಳಿದ್ದಾರೆ , ನಂತರ ನಡೆದಿದ್ದೆ ಬೇರೆ

0

ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕು ಪಾಳ್ಯ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ  1 ಫೆಬ್ರವರಿ 2023 ಬುಧವಾರ  ನಡೆದಿದೆ.

ಬೇಲೂರು ತಾಲೂಕು ಅಡಗೂರು ಗ್ರಾಮದ ವೆಂಕಟೇಶ ಎಂಬುವರು ಧರ್ಮಸ್ಥಳ ಡಿಪೋದಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದು

ಫೆ.1 ರಂದು ಮಧ್ಯಾಹ್ನ ಬಸ್‌ಗೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಹೊರಟಿದ್ದರು. ಚಾಲಕ ಓಂಕಾರಪ್ಪ ಬಸ್‌ ಚಾಲನೆ ಮಾಡುತ್ತಿದ್ದರು. ಪಾಳ್ಯ ಸಮೀಪದ ಎನ್.ಹೆಚ್ 75 ರಲ್ಲಿ ಸಕಲೇಶಪುರ ಕಡೆಯಿಂದ ಹಾಸನ ಕಡೆಗೆ ಹೋಗುತ್ತಿದ್ದಾಗ ಎರಡು ಬೈಕಿನಲ್ಲಿ 3 ಜನ ಹುಡುಗರು ಬಂದು ಚಾಲನೆ ಮಾಡುತ್ತಿದ್ದ ಡ್ರೈವರ್‌ಗೆ ಬಸ್ ನಿಲ್ಲಿಸುವಂತೆ ಹೇಳಿದ್ದಾರೆ . ,

ಚಾಲಕ ಬಸ್ ನಿಲ್ಲಿಸದೇ ಮುಂದೆ ಪಾಳ್ಯದ ಬಸ್ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಿದಾಗ ಮೂರು ಜನ ಹುಡುಗರು ಬಂದು ಬಸ್‌ನಲ್ಲಿದ್ದ ವೆಂಕಟೇಶ ಅವರನ್ನು ಹೊರಗೆ ಎಳೆದು ಕೊಂಡು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಮೈಕೈಗೆ ಹೊಡೆದು ನೆಲಕ್ಕೆ ಕೆಡವಿ ತುಳಿದು ನಂತರ ಪರಾರಿಯಾಗಿದ್ದಾರೆ ಎನ್ನಲಾಗಿದೆ .

ಚಾಲಕ ಓಂಕಾರಪ್ಪ ಮತ್ತು ಪ್ರಯಾಣಿಕರು ಜಗಳ ಬಿಡಿಸಿದ್ದು, ಗಲಾಟೆ ಮಾಡಿರುವ ಅಪರಿಚಿತ 3 ಜನ ಹುಡುಗರ ವಿರುದ್ಧ ಕ್ರಮ ಜರುಗಿಸಬೇಕೆಂದು ವೆಂಕಟೇಶ ಅವರು ಆಲೂರು ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡಿದ್ದಾರೆ . ಇನ್ನು ಈ ಬಗ್ಗೆ ಯುವಕರ ಹೇಳಿಕೆ ಸಿಕ್ಕಿಲ್ಲ . ತನಿಖೆ ನಂತರವಷ್ಟೆ ತಿಳಿಯಬೇಕಿದೆ .

LEAVE A REPLY

Please enter your comment!
Please enter your name here