“ಪಿಯುಸಿ ವಿಜ್ಞಾನ ಕೋರ್ಸ್ ಯಶಸ್ವಿಗಾಗಿ ಹಾಸನದ ಎಪಿಜೆ ಅಕಾಡೆಮಿ”

0

“ಪಿಯುಸಿ ವಿಜ್ಞಾನ ಕೋರ್ಸ್ ಯಶಸ್ವಿಗಾಗಿ ಹಾಸನದ ಎಪಿಜೆ ಅಕಾಡೆಮಿ”
ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು SSLC ಪೂರೈಸಿದ ನಂತರ ನೆರೆಯ ಜಿಲ್ಲೆ ಮತ್ತು ರಾಜ್ಯಗಳಿಗೆ ಪಿಯುಸಿ ಶಿಕ್ಷಣಕ್ಕಾಗಿ ಹೋಗುವುದು ವಾಡಿಕೆ. ಇದರಿಂದ ಪ್ರತಿಭೆ ಪಲಾಯನ ಆಗುವುದರ ಜೊತೆಗೆ ಪಾಲಕರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಈ ಚಿತ್ರಣವನ್ನು ಬದಲಾಯಿಸಿ ನಮ್ಮ ಜಿಲ್ಲೆಯಲ್ಲೇ ಉತ್ಕೃಷ್ಟ ಗುಣಮಟ್ಟದ ಪಿಯುಸಿ ವಿಜ್ಞಾನ ಕೋರ್ಸ್ ಶಿಕ್ಷಣ ನೀಡಬೇಕೆಂದು ಪಣತೊಟ್ಟಿರುವ ಸಂಸ್ಥೆಯೇ ಹಾಸನದ ಎಪಿಜೆ ಅಕಾಡೆಮಿ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕಳೆದ ಹತ್ತು ವರ್ಷಗಳಿಂದ “After PUC What Next” ಎಂಬ ಶೀರ್ಷಿಕೆಯಲ್ಲಿ ರಾಜ್ಯದ ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿರುವ “Motivating Master” ಎಂಬ ವೃತ್ತಿಪರ ತಂಡವು ಎಪಿಜೆ ಅಕಾಡೆಮಿಯ ಸಂಸ್ಥಾಪಕ ವೃಂದ ಎಂಬುದು ಒಂದು ವಿಶೇಷ.
ಎಪಿಜೆ ಸೌಲಭ್ಯಗಳು ಮತ್ತು ವಿಶೇಷತೆಗಳು:
ಮಾಜಿ ರಾಷ್ಟ್ರಪತಿ ಮತ್ತು ವಿಜ್ಞಾನಿ ಶ್ರೀ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು ಬದ್ಧವಾದ ಕಲಿಕೆ ಹಾಗೂ ಸಂಶೋಧನಾತ್ಮಕ ಮನೋಭಾವನೆ ಉಂಟಾಗಲಿ ಎಂಬ ಧ್ಯೇಯದೊಂದಿಗೆ ಎಪಿಜೆ ಅಕಾಡೆಮಿ 2019ರಲ್ಲಿ ಹಾಸನ ನಗರದಲ್ಲಿ ಆರಂಭವಾಗಿದೆ.

ಪ್ರಾಂಶುಪಾಲರಾಗಿರುವ ಪ್ರೊಫೆಸರ್ ರಾಮಣ್ಣ ಇವರು ರಸಾಯನಶಾಸ್ತ್ರ ವಿಭಾಗದಲ್ಲಿ 35 ವರ್ಷಗಳ ಅನುಭವ ಹೊಂದಿರುವ ಪ್ರಾಧ್ಯಾಪಕರಾಗಿದ್ದಾರೆ.
ಪ್ರತಿ ವಿಷಯಗಳಲ್ಲಿ ಕನಿಷ್ಠ ಎಂಟು ವರ್ಷ ಬೋಧನ ಅನುಭವ ಇರುವ ನುರಿತ ಬೋಧಕ ಸಿಬ್ಬಂದಿ ಉತ್ತಮ ಮಾರ್ಗದರ್ಶನ ನೀಡುವ ದಕ್ಷ ಆಡಳಿತ ಮಂಡಳಿಯನ್ನು ಹೊಂದಿದೆ.
ಸುಸಜ್ಜಿತವಾದ ಉತ್ತಮ ಗಾಳಿ, ಬೆಳಕು, ಸ್ಥಳವಕಾಶ ಇರುವ ಕೊಠಡಿಗಳನ್ನು ಹೊಂದಿದ್ದು. ಪ್ರತಿ ತರಗತಿಗಳನ್ನು 40 ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಪ್ರತಿ ಹದಿನೈದು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನು Mentor ಆಗಿ ನೇಮಿಸಲಾಗುವುದು.
ಪ್ರತಿ ಬೋಧನಾ ಕೊಠಡಿಯೂ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳಿಂದ ಕೂಡಿರುತ್ತದೆ(ಇದರಿಂದ ಕ್ಲಿಷ್ಟ ವಿಷಯಗಳ ಗ್ರಹಿಕೆ ಸರಳವಾಗುತ್ತದೆ).

ಪ್ರಥಮ ಪಿಯುಸಿ ಆರಂಭದಿಂದಲೇ ಪಠ್ಯದ ಬೋಧನೆ ಜೊತೆಗೆ CET/NEET/JEE ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಪ್ರತಿನಿತ್ಯ ತರಬೇತಿ ಲಭ್ಯವಿದೆ.
ನಿಯಮಿತವಾಗಿ CET/NEET/JEE ಪರೀಕ್ಷೆಗಳ “Mock Test” ಗಳನ್ನು ನಡೆಸಿ ಫಲಿತಾಂಶವನ್ನು ಪೋಷಕರ ಉಪಸ್ಥಿತಿಯಲ್ಲಿ Tripod ಮೀಟಿಂಗ್ ನಡೆಸಿ ಚರ್ಚಿಸಲಾಗುವುದು.
ವಿಜ್ಞಾನ ವಿಷಯ ಕಠಿಣ ವೆನಿಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಿ “Evening Special Classes”(Semi-Resindential) ಸೌಲಭ್ಯವನ್ನು ಕಲ್ಪಿಸಲಾಗಿದೆ.
ಪ್ರತಿ ತರಗತಿಗಳು, ಪ್ರಯೋಗಾಲಯಗಳು, ಹಾಗೂ ಕಾಲೇಜಿನ ಆವರಣ CCTV ಕಣ್ಗಾವಲಿನಲ್ಲಿ ಇರುತ್ತದೆ.

ಎಪಿಜೆ ಸಾಧನೆಗಳು:
2020- 21ನೇ ಬ್ಯಾಚಿನಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳು.
ಅಭಿನ್ S/o ಬೆಟ್ಟೇಗೌಡ,JEE Mains ಪರೀಕ್ಷೆಯಲ್ಲಿ 98.54% ನೊಂದಿಗೆ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಕುಮಾರಿ ಪ್ರಗತಿ ಎಂ ಗೌಡ D/o ಮಂಜುನಾಥ, JEE Mains ಪರೀಕ್ಷೆಯಲ್ಲಿ97.72% ಗಳಿಸಿರುತ್ತಾರೆ. ಅಭಿನ್ SSLC ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಹಾಗೂ ಪ್ರಗತಿ ಎಂ ಗೌಡ 625ಕ್ಕೆ 625 ಅಂಕಗಳನ್ನು ಗಳಿಸುವುದನ್ನು ಇಲ್ಲಿ ಸ್ಮರಿಸಬಹುದು.
ಈ ಬಾರಿಯ 2021ರ ನೀಟ್ ಪರೀಕ್ಷೆಯಲ್ಲಿ ಕನಿಷ್ಠ ಐದು ಪ್ರತಿಭಾವಂತ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ಮೆಡಿಕಲ್ ಸೀಟ್ ಗಿಟ್ಟಿಸುವ ಭರವಸೆ ಮೂಡಿಸಿ ರುತ್ತಾರೆ.

ಎಪಿಜೆ ಅಕಾಡೆಮಿಯ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಹಾಗೂ ಪಿಯುಸಿ ದಾಖಲಾತಿಗಾಗಿ ಸಂಪರ್ಕಿಸುವ ದೂರವಾಣಿ ಸಂಖ್ಯೆ9972728970/8971225417.
website:www.apjacademy.net

LEAVE A REPLY

Please enter your comment!
Please enter your name here