ಅರೇಹಳ್ಳಿ ಗ್ರಾಮದಲ್ಲಿ ಹೊಸ ಕೋವಿಡ್ ಕೆರ್ ಸೆಂಟರ್ ಪ್ರಾರಂಭ ಇಲ್ಲಿ ಜನರಿಗೆ ಇಸೋಲೇಷನ್ ಜೊತೆಗೆ ಊಟ ತಿಂಡಿಯ ವ್ಯವಸ್ಥೆ – ಲಿಂಗೇಶ್ (ಬೇಲೂರು ಶಾಸಕರು)

0

ಬೇಲೂರು : ದಿನೇ ದಿನೇ ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಮೇ10ರಂದು ಕೋವಿಡ್ ಕೆರ್ ಸೆಂಟರ್ ಪ್ರಾರಂಭಿಸಲಾಗಿದ್ದು ಇದರ ವೀಕ್ಷಣೆಗೆ ಇಲ್ಲಿನ ಶಾಸಕರಾದ ಸನ್ಮಾನ್ಯ ಶ್ರೀ ಲಿಂಗೇಶ್ ಅವರು ಮಂಗಳವಾರ ಗ್ರಾಮಕ್ಕೆ ಭೇಟಿನೀಡಿದ್ದರು. ಕೋವಿಡ್ ಕೆರ್ ಸೆಂಟರ್ ವೀಕ್ಷಿಸಿ ಇಲ್ಲಿನ ಸೌಲಭ್ಯ ಹಾಗೂ ಕೊರತೆಗಳನ್ನು ವಿಚಾರಿಸಿ ಮಾತನಾಡಿದ ಅವರು ಅರೇಹಳ್ಳಿ ಸಮುದಾಯ ಕೇಂದ್ರ ನನ್ನ ತಾಲೂಕಿನ ಅತ್ಯುತ್ತಮವಾದ ಕೇಂದ್ರಗಳಲ್ಲಿ ಒಂದು ಎಂದು ಹೆಮ್ಮೆಯಿಂದ ಹೇಳಿಕೊಳ್ಳತ್ತೇನೆ ಅದರಲ್ಲಿಯೂ ಹೆರಿಗೆಗೆ ಸಂಭಂದಿಸಿದಂತೆ ಅತ್ಯುತ್ತಮ ವೈದ್ಯ ಹಾಗೂ ಸವಲತ್ತು ಕಲ್ಪಿಸುವ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಇಂದಾಗಿ ಅಡ್ಡಿ ಉಂಟಾಗುತ್ತಿತ್ತು ಇದರಿಂದಾಗಿ ಗ್ರಾಮದಲ್ಲಿ ಕೋವಿಡ್ ಕೆರ್ ಸೆಂಟರ್ ಪ್ರಾರಂಭಿಸಿದ್ದೇವೆ ಇಲ್ಲಿ ಜನರಿಗೆ ಇಸೋಲೇಷನ್ ಜೊತೆಗೆ ಊಟ ತಿಂಡಿಯ ವ್ಯವಸ್ಥೆಯು ಸಹ ಕಲ್ಪಿಸಲಾಗಿದೆ ಇದನ್ನು ಜನರು ಸದುಪಯೋಗ ಪಡಿಸಿಕೊಳ್ಳಿ ಎಂದರು, ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲರೂ ಸಹ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ಮಾಸ್ಕ್ ಸ್ಯಾನಿಟೈಜ಼ರ್ ಕಡ್ಡಾಯವಾಗಿ ಬಳಸಿ ಹಾಗೂ 45 ವರ್ಷ ಮೇಲ್ಪಟ್ಟವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು, ಕೋರೋನ ದಿಂದ ಭಯ ಬೇಡ ಎಚ್ಚರವಿರಲಿ, ಆದಷ್ಟು ಬೇಗ ಈ ಪ್ರದೇಶದಿಂದ ಹಾಗೂ ದೇಶದಿಂದ ಮಹಾಮಾರಿಯನ್ನು ಮುಕ್ತಗೊಳಿಸಲು ನಿಮ್ಮ ಸಹಕಾರ ಇರಲಿ ಎಂದು ಸಲಹೆ ನೀಡಿದರು. #covidupdateshassan #arehalli #belur @ks.lingesh_jds_mla_belur

LEAVE A REPLY

Please enter your comment!
Please enter your name here