ನಾನು ಈ ಸಂದರ್ಭದಲ್ಲಿ ಹಾರ ಹಾಕಿಸಿಕೊಳ್ಳಲು ಬಂದಿಲ್ಲ ಇದು ಕಷ್ಟದ ಸಮಯ ನಾನು ರಾಜಕೀಯ ಮಾಡಲು ಬಂದಿಲ್ಲ

0

ಕಣಕಟ್ಟೆ ಹೋಬಳಿಗೆ ಭೇಟಿ ನೀಡಿದ ಶಿವಲಿಂಗೇಗೌಡ್ರು

ಇಂದು ಕಣಕಟ್ಟೆ ಹೋಬಳಿಯ ರಾಂಪುರ ಗ್ರಾಮಕ್ಕೆ ಬಂದ ಶಾಸಕರು ಕೋರಾನದಿಂದ ಮೃತಪಟ್ಟ ಪಾಪಣ್ಣ ಅವರ ಮನೆಗೆ ಭೇಟಿ ನೀಡಿದ ಶಾಸಕರು ಭೇಟಿ ನೀಡುವಾಗ ಶಿವಲಿಂಗೇಗೌಡರ ಬೆಂಬಲಿಗರು ಶಾಸಕರಿಗೆ ಹೂವಿನ ಹಾರ ಹಾಕಲು ಬಂದಾಗ ಶಾಸಕರು ಇಲ್ಲ ನಾನು ಈ ಸಂದರ್ಭದಲ್ಲಿ ಹಾರ ಹಾಕಿಸಿಕೊಳ್ಳಲು ಬಂದಿಲ್ಲ ಇದು ಕಷ್ಟದ ಸಮಯ ನಾನು ರಾಜಕೀಯ ಮಾಡಲು ಬಂದಿಲ್ಲ ಆ ಹೂವಿನ ಹಾರವನ್ನು ದೇವರಿಗೆ ಹಾಕು ಎಂದು ಸ್ಥಳದಲ್ಲೇ ನಿಂತು ದೇವರಿಗೆ ಹಾರ ಹಾಕಿಸಿ ಮೃತರಾದ ಪಾಪಣ್ಣ ಅವರ ಮನೆಗೆ ಭೇಟಿ ನೀಡಿ ಆ ತಾಯಿಯ ಕಷ್ಟ ಕೇಳಿ ಸ್ವತಃ ಶಾಸಕರ ಕಣ್ಣಲೇ ನೀರು ತುಂಬಿ ಬಂತು ಆ ತಾಯಿಗೆ ಧೈರ್ಯ ಹೇಳಿ ದಿನಸಿ ಕಿಟ್, ಹಣ್ಣು ಹಂಪಲು, ಹತ್ತು ಸಾವಿರ ಹಣ ನೀಡಿ ಯಾವುದಕ್ಕೂ ಹೆದರಬೇಡಿ ತಾಯಿ ನಿಮ್ಮ ಜೊತೆ ನಾನಿದ್ದೆನೆ ನಿಮ್ಮ ಋಣ ನನ್ನ ಮೇಲಿದೆ ಎಂದು ಧೈರ್ಯ ತುಂಬಿದರು. ರಾಂಪೂರ ಗ್ರಾಮದಲ್ಲಿ ಗಲಾಟೆ ಆದಾಗ ರಾತ್ರೊ ರಾತ್ರಿ ಬರುವ ಸಂತೋಷ್ ಇಂತಹ ಕಷ್ಟದಲ್ಲಿ ಜನರ ಜೊತೆ ನಿಲ್ಲುವವರು ಶಿವಲಿಂಗೇಗೌಡ್ರೆ ಎಂದು ಜನ ಮಾತನಾಡತೊಡಗಿದ್ದರೆ..
ಒಟ್ಟು ಕಣಕಟ್ಟೆ ಹೋಬಳಿಯ 45 ಕುಟುಂಬ ಮಾಡಾಳು, ಕೆ ಪಾಳ್ಯ, ಬೆಂಡಿಗೊಂಡನಹಳ್ಳಿ, ಕಡ್ಲೆಮಗೆ, ಮೇಟಿಕುರ್ಕೆ, ರಾಂಪುರ, ಮೇಳೆನಹಳ್ಳಿ, ಕಲ್ಗುಂಡಿ, ಜೆಸಿಪುರ, ಇನ್ನೂ ಇತರ ಗ್ರಾಮಗಳಿಗೆ ತೆರಳಿ ಮೃತಪಟ್ಟ ಎಲ್ಲ ಕುಟುಂಬಕ್ಕು ತಲಾ ಹತ್ತು ಸಾವಿರ ಹಣ, ಹಣ್ಣು ಹಂಪಲು ದಿನಸಿ ಕಿಟ್ ವ್ಯಯಕ್ತಿಕವಾಗಿ ಹಣ ನೀಡಿದರು…
ಈ ಸಂದರ್ಭದಲ್ಲಿ ರಾಂಪುರ ಗ್ರಾ.ಪ. ಅದ್ಯಕ್ಷ ಸುರೇಶ್. ಶಶಿವಾಳ ಗಂಗಾಧರ್, ಮೇಳೆನಳ್ಳಿ ಸಂತೋಷ್,ಮಂಜಣ್ಣ,ರಾಜಣ್ಣ,ಕರುಣಕರ,ಪ್ರದೀಪ್, ನಟರಾಜ್,ಬಸಪ್ಪ,ಮರುಳಸಿದ್ದೆಗೌಡ,ಲೋಕೇಶ್,ಸ್ವಾಮಿ,
ಕಾರ್ತಿಕ್,ನಾಗಣ್ಣ ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here