ಒಂದೊಮ್ಮೆ ಸೋಂಕು ಬಂದರೆ ಉದಾಸೀನ ಮಾಡದೆ ಕೋವಿಡ್ ಕೇರ್ ಸೆಂಟರ್ ಅಥವಾ ಚಿಕಿತ್ಸಾ ಕೇಂದ್ರ ಕ್ಕೆ ಕೂಡಲೆ ಹೋಗಲು ಕಿವಿ ಮಾತು – ಅರಸೀಕೆರೆ ಶಿವಲಿಂಗೇಗೌಡ (ಶಾಸಕ)

0

ಗಂಡಸಿ ಹೋಬಳಿ ಕೆಂಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಇಂದು ಭೇಟಿ ನೀಡಿ ಕೋವಿಡ್ ಸ್ಥಿತಿ ಗತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕೋವಿಡ್ ಸೋಂಕು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ.ಇದರ ನಿಯಂತ್ರಣ ಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಕೋವಿಡ್ ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿ ಇರದೆ ಕೋವಿಡ್ ಕೇರ್ ಕೇಂದ್ರ ಗಳಲ್ಲಿ ದಾಖಲಾಗಲು ಒತ್ತಾಯಿಸಿದರು.. ಹೆಚ್ಚಿನ ಪ್ರಮಾಣದ ಚಿಕಿತ್ಸೆ ಅವಶ್ಯಕತೆ ಇದ್ದರೆ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಸೂಚಿಸುವಂತೆ ವೈಧ್ಯಾಧಿಕಾರಿಗಳಿಗೆ ಸೂಚಿಸಿದರು.
ಸಮಾನ ಅಂತರ,‌ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಉಪಯೋಗಿಸುವುದರಿಂದ ಕೊರೋನಾ ಬರದ ಹಾಗೆ ತಡೆಯಬಹುದು ಎಂದರು.


ಒಂದೊಮ್ಮೆ ಸೋಂಕು ಬಂದರೆ ಉದಾಸೀನ ಮಾಡದೆ ಕೋವಿಡ್ ಕೇರ್ ಸೆಂಟರ್ ಅಥವಾ ಚಿಕಿತ್ಸಾ ಕೇಂದ್ರ ಕ್ಕೆ ಕೂಡಲೆ ಹೋಗಲು ಕಿವಿ ಮಾತು ಹೇಳಿದರು.
ಸ್ಥಳಿಯ ವೈಧ್ಯರು, ಸಿಬ್ಬಂದಿ, ಗ್ರಾ.ಪಂ.ಅಧಿಕಾರಿಗಳು, ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಸಹಾಯಕಿಯರ, ಗ್ರಾ.ಪಂ.ಸದಸ್ಯರು ಇವರೆಲ್ಲಾ ಒಟ್ಟಾಗಿ ಸೇವೆ ಸಲ್ಲಿಸಿದರೆ ಕೊರೋನಾ ಹೆಮ್ಮಾರಿಯನ್ನು ಓಡಿಸಲು ಸಾಧ್ಯ ಎಂದರು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ತಾ.ಪಂ.ಈ.ಓ ನಟರಾಜು, ತಾಲ್ಲೂಕು ಆರೋಗ್ಯಾಧಿಕಾರಿ ನಾಗಪ್ಪ, ಬಿ.ಇ.ಓ ಮೋಹನ್, ವೈದ್ಯರಾದ ಮಾನಸ
ತಾ.ಪಂ.ಮಾಜಿ ಸದಸ್ಯ ಮುಖಂಡರಾದ ಹೊಸೂರು ಗಂಗಾಧರ, ಕೃಷ್ಣೇಗೌಡ, ಕೆಂಕೆರೆ ಕೇಶವಮೂರ್ತಿ, ಪರಮೇಶ, ಬಸವರಾಜು, ಮಲ್ಲಾಪುರ ಮಂಜುರಾಜು ಹಾಗೂ ಪಿ.ಡಿ.ಓ ಭಾಗವಹಿಸಿದ್ದರು.
ಇವುಗಳ ಜೊತೆಗೆ ಕೊಂಡೆನಾಳು ಮತ್ತು ಬಾಗೀವಾಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಿದರು..

LEAVE A REPLY

Please enter your comment!
Please enter your name here