ಕೊಟ್ಟೂರು ಮೂಲಕ ವಿಶೇಷ ರೈಲು ಓಡಾಟ ಆರಂಭ, ರಾಜ್ಯದ ನಮ್ಮ ಅರಸೀಕೆರೆಯಿಂದ ಹಾದು ಹೋಗಲಿದೆ ಈ ಟ್ರೈನ್

0

ಹಾಸನ / ವಿಜಯನಗರ : ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು  ಓಡಿಸುತ್ತಿದ್ದು, ಯಶವಂತಪುರದಿಂದ ಹೊರಡುವ ರೈಲು ಅರಸೀಕೆರೆ ಜಂಕ್ಷನ್ ಮೂಲಕ ಕೊಟ್ಟೂರು ರೈಲು ಮಾರ್ಗದ ಮೂಲಕ ಹಾದು ಹೋಗಲಿದೆ. ಈ ಮೂಲಕ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಿದಂತಿದೆ .,‌ಕೊಟ್ಟೂರು ರೈಲು ಮಾರ್ಗ ಹೊಂದಿ ಹಲವು ದಶಕಗಳು ಕಳೆದರೂ ಕೇವಲ ದಾವಣಗೆರೆ -ಹರಿಹರ -ಹೊಸಪೇಟೆ ಮಾರ್ಗಕ್ಕೆ ಮಾತ್ರ

ಸೀಮಿತಗೊಂಡಿತ್ತು. ಇದನ್ನು ಮನಗಂಡ ಇಲ್ಲಿನ ನಾಗರಿಕರು ಕೊಟ್ಟೂರು ರೈಲು ಮಾರ್ಗದ ಮೂಲಕ ಮತ್ತಷ್ಟು ರೈಲು ಓಡಾಟ ಮಾಡಬೇಕು ಎಂಬ ಒತ್ತಾಯಿಸಿದರು. ವರ್ಷದ ಹಿಂದೆ ಯಶವಂತಪುರ-ವಿಜಯಪುರ ರೈಲು ಸಹ ಓಡಾಟ ಆರಂಭಿಸಿದೆ. ಅದು ಇಲ್ಲಿನ ಜನತೆಯಲ್ಲಿ ಹೊಸ ಬಗೆಯ ಆಶಯಗಳು ಹುಟ್ಟಿ ಹಾಕಿದವು ಇದೀಗ ಯಶವಂತಪುರದಿಂದ ವಿಶ್ವಾಮಿತ್ರ ವರೆಗೆ ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು ಓಡಿಸುತ್ತಿದ್ದು . ಈ ರೈಲು ಬೆಳಗ್ಗೆ ಯಶವಂತಪುರವನ್ನು 8.15AM ಗೆ ಬಿಟ್ಟು

ತುಮಕೂರು, ಅರಸಿಕೆರೆ, ಚಿಕ್ಕಜಾಜೂರು, ದಾವಣಗೆರೆ ಮೂಲಕ ಮಧ್ಯಾಹ್ನ 2.40ಕ್ಕೆ ಬಂದು 2.42ಕ್ಕೆ ಮುಂದೆ ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಪುಣೆ, ಮಾರ್ಗದ ಮೂಲಕ ಸಂಚರಿಸಿ ಬೆಳಗಿನ ಜಾವ 4.30ಕ್ಕೆ ವಿಶ್ವಾಮಿತ್ರವನ್ನು ತಲುಪಲಿದೆ ಎಂದು ರೈಲ್ವೆ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿರುತ್ತದೆ . ಈ ರೈಲು ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಮತ್ತು

ಹೊಸಪೇಟೆಯಲ್ಲೂ ನಿಲುಗಡೆಯಾಗಬೇಕು ಎಂಬ ಒತ್ತಾಯ ಕೇಳಿ ಬರುತ್ತಿದ್ದು , ರೈಲ್ವೆ ಮಂಡಳಿ ಇದಕ್ಕೆ ಸ್ಪಂದಿಸುತ್ತಾರ ಕಾದು ನೋಡ ಬೇಕಿದೆ .

LEAVE A REPLY

Please enter your comment!
Please enter your name here