ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ತಾಲ್ಲೂಕು ಪಂಚಾಯತ ಈ.ಓ ನಟರಾಜು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ನಾಗಪ್ಪ ಅವರೊಂದಿಗೆ ಇಂದು ಕಸಬಾ ಹೋಬಳಿ ಹಾರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕ ರಿಗೆ ಜಾಗೃತಿ ಮೂಡಿಸಿದರು.
ಕೋವಿಡ್ ಮಹಾಮಾರಿ ಗ್ರಾಮೀಣ ಭಾಗದಲ್ಲಿ ವೇಗವಾಗಿ ಹರಡುತ್ತಿದೆ. ಇದಕ್ಕೆ ಸಾರ್ವಜನಿಕರ ಅಜಾಗರೂಕತೆ ಮತ್ತು ಹೋಮ್ ಐಸೋಲೇಷನ್ ಕಾರಣವಾಗಿದೆ.
ಆದ್ದರಿಂದ ಸಾರ್ವಜನಿಕ ರು ಜಾಗರೂಕರಾಗಬೇಕು, ಕಡ್ಡಾಯವಾಗಿ ಸೋಂಕಿತರು ಕೇರ್ ಸೆಂಟರ್ ಗಳಿಗೆ ದಾಖಲಾಗುವಂತೆ ನೋಡಿಕೊಳ್ಖಿ, ಎಲ್ಲಾ 5 ವಸತಿಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಮಾಡಿದ್ದು ಅಲ್ಲಿಗೆ ಹೋಗಲು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಮಾಡಲಾಗಿದೆ. ಇವುಗಳ ಸದುಪಯೋಗ ಮಾಡಿಕೊಳ್ಳಿ ಎಂದರು.

ಇಂದು #ಹಾರನಹಳ್ಳಿಯ_ದೊಡ್ಡೆನಹಳ್ಳಿ ಕೋವಿಡ್ ಸೆಂಟರ್ ಗೆ ಭೇಟಿ ನೀಡಿ ಕೋರೊನ ಸೊಂಕೀತರಿಗೆ ಧೈರ್ಯ ತುಂಬಿ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು,,
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗಿಜಿಹಳ್ಳಿ ಶೇಖರ್ ತಾಲೂಕು ಪಂಚಾಯತ್ ಸದಸ್ಯರಾದ ಧರ್ಮಶೇಖರ್ ಉಪಸ್ಥಿತರಿದ್ದರು,, https://m.facebook.com/story.php?story_fbid=3921100864666485&id=195025720607370
ವ್ಯಾಕ್ಸಿನ್ ಅನ್ನು ಎಲ್ಲರೂ ಕಡ್ಡಾಯವಾಗಿ ತೆಗೆದುಕೊಳ್ಳಿ ಎಂದರು. ಕಡ್ಡಾಯ ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆ ಮಾಡಿ ಎಂದರು..
ಈ ಸಂದರ್ಭದಲ್ಲಿ , ಮುಖಂಡರುಗಳಾದ ಗೀಜಿಹಳ್ಳಿ ಶೇಖರಣ್ಣ, ತಿರುಪತಿಹಳ್ಳಿ ದರ್ಮೇಶ್ ಯಳವಾರೆ ನಾಗರಾಜು, ಬೋರನಕೊಪ್ಪಲು ಸ್ವಾಮಿ, ವಿಠಲಾಪುರ ಚಂದ್ರು ಹಾರನಹಳ್ಳಿ ಗ್ರಾ.ಪಂ. ಸದಸ್ಯರುಗಳು ಆಶಾ ಕಾರ್ಯಕರ್ತೆ ಯರು. ಹಾಗೂ ಗ್ರಾಮಸ್ಥರು ಹಾಜರಿದ್ದರು….