Breaking News

ಗಮನಿಸಿ : ಬೆಂಗಳೂರು-ಮಂಗಳೂರು ರೈಲ್ವೇ ಭಾನುವಾರ ಪ್ರಯಾಣದ ವೇಳಾಪಟ್ಟಿಯಲ್ಲಿ ಬದಲಾವಣೆ

By Hassan News

March 30, 2023

ರಾಜಧಾನಿ ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚಾರ ನಡೆಸುವ ಜನರ ಹಲವು ದಿನಗಳಿಂದ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಲು ಬೇಡಿಕೆ ಹಿನ್ನೆಲೆ . ಈಗ ಇದಕ್ಕೆ ಇಲಾಖೆ ಒಪ್ಪಿಗೆ ., ಕರ್ನಾಟಕದ ಪ್ರಮುಖ ನಗರಗಳಾಗಿರುವ ಬೆಂಗಳೂರು, ಮಂಗಳೂರು ರಸ್ತೆ ಮಾರ್ಗದಲ್ಲಿ ಉಭಯ ನಗರಗಳ ನಡುವೆ ಸಂಚಾರ ನಡೆಸುವುದು ಎಷ್ಟು ತ್ರಾಸದಾಯಕ ಎಂಬುದು ಎಲ್ಲರಿಗೂ ತಿಳಿದಿದೆ . ಹಾಗಾಗಿ ಬಹಳಷ್ಟು ಜನರು ರೈಲು ಸೇವೆಯನ್ನು ಅವಲಂಬಿಸಿದ್ದಾರೆ ಹಾಗೂ ಸಮಾಧಾನಕರ‌ ಪಯಣ ಇದಾಗಿದೆ . ವಾಣಿಜ್ಯ, ಶೈಕ್ಷಣಿಕ, ಉದ್ಯೋಗ ಹೀಗೆ ಹಲವಾರು ವಿಷಯಗಳಿಗೆ ಜನರು ಈ ಎರಡು ನಗರಗಳಿಗೆ ಹೆಚ್ಚು ಜನರು ಪ್ರಯಾಣ ಮಾಡುತ್ತಲೇ ಇರುತ್ತಾರೆ ., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಹಲವಾರು ಧಾರ್ಮಿಕ ಕೇಂದ್ರಗಳಿವೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇವರಿಗೆಲ್ಲ ಅನುಕೂಲವಾಗುವಂತೆ

ಹಗಲು ಹೊತ್ತಿನಲ್ಲಿ ರೈಲು ಸಂಖ್ಯೆ 16575/16576 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ನಡುವೆ ಗೋಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಆರಂಭಿಸಲಾಗಿತ್ತು. ಮೊದಲು ಈ ರೈಲು ಮಂಗಳೂರಿನಿಂದ ಬೆಳಗ್ಗೆ 11.30ಕ್ಕೆ ಹೊರಟು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು ರಾತ್ರಿ 8.45ಕ್ಕೆ ತಲುಪುತ್ತಿತ್ತು. ಈ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿ ., ರೈಲ್ವೆ ಇಲಾಖೆ ಒಪ್ಪಿಗೆ ನೀಡಲಾಗಿ ; ನೈಋತ್ಯ ರೈಲ್ವೆ ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದು . ಜುಲೈ 16ರಿಂದ ಅನ್ವಯವಾಗುವಂತೆ

ರೈಲು ಹೊಸ ವೇಳಾಪಟ್ಟಿಯಲ್ಲಿ ಸಂಚಾರ ನಡೆಸಲಿದೆ . ರೈಲು ಸಂಖ್ಯೆ 16540 ಭಾನುವಾರ ಬೆಳಗ್ಗೆ 7ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಯಶವಂತಪುರಕ್ಕೆ ಸಂಜೆ 4.30ಕ್ಕೆ ತಲುಪಲಿದೆ , ಮಂಗಳೂರು-ಯಶವಂತಪುರ ರೈಲು ಭಾನುವಾರ ಬೆಳಗ್ಗೆ 9.15ಕ್ಕೆ ಹೊರಟು ಯಶವಂತಪುರಕ್ಕೆ ರಾತ್ರಿ 8.20ಕ್ಕೆ ತಲುಪುತ್ತಿದೆ. ಆದರೆ ಈ ಸಾಪ್ತಾಹಿಕ ರೈಲಿನ ಪ್ರಯಾಣವು ಬಹಳ ಸುದೀರ್ಘ ಪ್ರಯಾಣವಾಗಿದೆ. ಜೊತೆಗೆ ವಾರದ ಮೂರು ದಿನ ಸಂಚರಿಸುವ ಗೋಮ್ಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಮಧ್ಯಾಹ್ನ ಹೊರಟು ಬೆಂಗಳೂರಿಗೆ ರಾತ್ರಿ ತಲುಪುವ ಕಾರಣ ಅಲ್ಲಿಂದ ಮುಂದೆ ತಮ್ಮ ತಮ್ಮ ಸ್ಥಳಕ್ಕೆ ಹೋಗುವವರಿಗೆ ಕಷ್ಟವಾಗುತ್ತಿದೆ. ಇದರಿಂದ ಪ್ರಯಾಣಿಕರು

ಈ ಎರಡು ರೈಲುಗಳನ್ನು ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಬೆಂಗಳೂರಿಗೆ ಸಂಜೆ ಬೇಗ ತಲುಪುವಂತೆ ಬದಲಾವಣೆ ಮಾಡಬೇಕು ಎಂದು ಬೇಡಿಕೆ ಇಟ್ಟಂತೆ ., ಈಗಿರುವ ವೇಳಾಪಟ್ಟಿ ಪ್ರಕಾರ ರೈಲು ಸಂಚಾರ ನಡೆಸಿದರೆ ಮಂಗಳೂರು ಜಂಕ್ಷನ್-ಬೆಂಗಳೂರಿನ ಯಶವಂತಪುರ ನಡವಿನ 357 ಕಿ. ಮೀ. ಕ್ರಮಿಸಲು ರೈಲು 11 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತಿದೆ. ಸುಬ್ರಹ್ಮಣ್ಯ-ಸಕಲೇಶಪುರ ಘಟ್ಟ ಪ್ರದೇಶದಲ್ಲಿ ಸಕಲೇಶಪುರ ಕಡೆಯಿಂದ ಬರುವ ರೈಲುಗಳ ಜೊತೆಗೆ ಕ್ರಾಸಿಂಗ್ ಮಾಡಲು ಒಂದು ಗಂಟೆ ನಿಲ್ಲಿಸಲಾಗುತ್ತಿದೆ. ಇದರಿಂದ

ಪ್ರಯಾಣಿಕರ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ ಎಂದು ಇಲಾಖೆಗೆ ಮಾಡಿದ ಮನವಿಯಲ್ಲಿ ಉಲ್ಲೇಖಿಸಲಾಗಿ ಈ ನಿರ್ಧಾರಕ್ಕೆ ಬರಲಾಗಿದೆ .