ದಾಸವಾಳ ಹೂವು ನೋಡಲು ಎಷ್ಟು ಸುಂದರವೋ ಅದರ ಎಲೆಗಳು ಕೂಡ ಅಷ್ಟೇ ಉಪಯೋಗಕಾರಿ.
ನಮ್ಮ ಭಾರತ ದೇಶದಲ್ಲಿ ದಾಸವಾಳದ ಎಲೆಗಳನ್ನು ಔಷಧಿಯಾಗಿ ಪ್ರಾಚೀನಕಾಲದಿಂದಲೂ ಉಪಯೋಗಿಸುತ್ತಿದ್ದಾರೆ. ಹಾಗಾಗಿ ದಾಸವಾಳ ಎಲೆಗಳ
ಉಪಯೋಗಗಳು ಹಲವಾರು.

ಉಪಯೋಗಗಳು
ಕ್ಯಾನ್ಸರ್ ,ಶೀತ, ಕೆಮ್ಮಿಗೆ ದಾಸವಾಳ ಎಲೆಗಳು ಔಷಧಿ:
ದಾಸವಾಳ ಎಲೆಗಳಲ್ಲಿ ವಿಟಮಿನ್ ಸಿ ಅಂಶ ಬಹಳ ಹೆಚ್ಚಿದೆ ಹಾಗಾಗಿ ಇದನ್ನು ಬಿಸಿ ನೀರಿನಲ್ಲಿ ಹಾಕಿ ಸೇವಿಸಿದರೆ ನಮಗೆ ಕ್ಯಾನ್ಸರ್ ರೋಗದಿಂದ, ಶೀತ ಮತ್ತು ಕೆಮ್ಮಿನಿಂದ ನಿವಾರಣೆ ಸಿಗುತ್ತದೆ.
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ:
ಹಲವರಿಗೆ ಆರೋಗ್ಯವಾಗುವ ಕಾರಣ ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟ.ದಾಸವಾಳ ಎಲೆಗಳು ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ನಮಗೆ ಒಳ್ಳೆಯ ಆರೋಗ್ಯ ನೀಡಲು ಸಹಾಯ ಮಾಡುತ್ತದೆ.

ಕೂದಲು ಉದುರುವ ಸಮಸ್ಯೆಯನ್ನು ತೊಲಗಿಸುತ್ತದೆ:
ಹೆಂಗಸರು ಕೂದಲು ಉದುರುವುದನ್ನು ನಿಲ್ಲಿಸಲು ಹಲವಾರು ಪ್ರಯತ್ನಗಳನ್ನು ಪಡುತ್ತಿರುತ್ತಾರೆ.ಈ ದಾಸವಾಳ ಎಲೆಗಳನ್ನು ಪೇಸ್ಟ್ ರೀತಿಯಲ್ಲಿ ಮಾಡಿ ಶಾಂಪು ಹಚ್ಚಿದ ನಂತರ ಇದನ್ನು ಹಚ್ಚಿದರೆ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ದಾಸವಾಳ ಎಲೆ ಬಹಳ ಉಪಯೋಗಕಾರಿ ಹಾಗಾಗಿ ಇದನ್ನು ಬಳಸಿ ನಿಮ್ಮ ಆರೋಗ್ಯ ಸಮಸ್ಯೆಯನ್ನು ಪರುಮಾಡಿಕೊಳ್ಳಿ.
– ತನ್ವಿ. ಬಿ.
