“ಬೇಲೂರು ಕೇಶವನ ದೇಗುಲ ಭಕ್ತರಿಗೆ ಮುಕ್ತ”

0

ಕೊರೊನಾ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ ವಿಶ್ವ ಪ್ರಸಿದ್ಧ ಬೇಲೂರು ಚನ್ನಕೇಶವ ದೇಗುಲ ವಿಶೇಷ ಪೂಜೆಯೊಂದಿಗೆ ಬಾಗಿಲು ತೆರೆಯಲಾಯಿತು.

ಕೊರೊನಾ ಎರಡನೇ ಅಲೆಯ ತೀವ್ರ ವ್ಯಾಪಕತೆಯ ನಿಯಂತ್ರಣಕ್ಕಾಗಿ ಕೇಂದ್ರ ಪುರಾತತ್ತ್ವ ಇಲಾಖೆ ಸ್ಮಾರಕ, ದೇಗುಲ ಮತ್ತು ಸಂಗ್ರಹಾಲಯಗಳಿಗೆ ಸಾರ್ವಜನಿಕರ ಪ್ರವೇಶದ ನಿರ್ಭಂಧವನ್ನು ಹಾಕಿತ್ತು. ಆದರೆ ಈಗ ಕೋವಿಡ್ ಪ್ರಕರಣಗಳ ಇಳಿಮುಖದಿಂದ ಸಂಬಂಧಿಸಿದ ಸರ್ಕಾರ ಮತ್ತು ಇಲಾಖೆ ಲಾಕ್ ಡೌನ್ ಸಡಿಲಿಸಿದ ಹಿನ್ನೆಲೆಯಲ್ಲಿ ಬೇಲೂರು ಚನ್ನಕೇಶವ ದೇಗುಲದ ಬಾಗಿಲನ್ನು ವಿಶೇಷ ಪೂಜೆಯೊಂದಿಗೆ ಧ್ವಾರವನ್ನು ತೆರೆಯುವ ಮೂಲಕ ಭಕ್ತರಿಗೆ ಕೇಶವನ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.ಕೋವಿಡ್ ಎರಡನೇ ಅಲೆಯ ವ್ಯಾಪಕತೆ ದಿನ ಕಳೆದಂತೆ ತೀವ್ರಗತಿಯಲ್ಲಿನ ಅಂಶವನ್ನು ಮನಗೊಂಡ ಸರ್ಕಾರ ದೇಗುಲಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಕಳೆದ ಮೇ.೧೫ ನಿರ್ಬಂಧ ಹಾಕಿದ್ದು, ದೇಗುಲದ ಗರ್ಭಗುಡಿಯಲ್ಲಿ ನಡೆಯುವ ಎಲ್ಲಾ ಪೂಜೆಗಳಿಗೆ ಅವಕಾಶ ನೀಡಿತ್ತು.

ದೇಶಗಳಲ್ಲಿ ಕೋವಿಡ್ ಸಂಖ್ಯೆ ಇಳಿಮುಖವಾದ ಬಳಿಕ ಕೇಂದ್ರ ಪುರಾತತ್ತ್ವ ಇಲಾಖೆ ಜೂನ್ ೧೫ ರಲ್ಲಯೇ ಸುತ್ತೋಲೆಯನ್ನು ಅಯಾ ರಾಜ್ಯಕ್ಕೆ ನೀಡಿ ಪುರಾತತ್ತ್ವ ಇಲಾಖೆಗೆ ಸಂಬಂಧಿಸಿದ ಸ್ಮಾರಕ, ದೇಗುಲ ಮತ್ತು ವಸ್ತು ಸಂಗ್ರಹಾಲಯಗಳನ್ನು ತೆರೆಯಬಹದು ಮತ್ತು ಪ್ರವಾಸೋದ್ಯಮವನ್ನು ಬಲಪಡಿಸಬೇಕು. ಅಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದೆ ಎಂಬ ಆದೇಶದ ಅನ್ವಯ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಯಾಥಸ್ಥಿತಿಯಲ್ಲಿವೆ ಎಂದು ಸದ್ಯ ಲಾಕ್ ಡೌನ್ ಸಡಲಿಕೆ ಮತ್ತು ದೇಗುಲದ ಬಾಗಿಲು ತೆರಯುಲು ಅವಕಾಶ ನೀಡಿರಲಿಲ್ಲ. ಆದರೆ ಜುಲೈ ೧೨ ರಂದು ರಾಜ್ಯ ಸರ್ಕಾರ ಅಧಿಕೃತವಾಗಿ ಲಾಕ್ ಡೌನ್ ಕೋವಿಡ್ ನೀತಿ ನಿಯಮಗಳೊಂದಿಗೆ ವಾಪಸು ಪಡೆದ ಬಳಿಕ ಎಚ್ಚೇತ್ತ ಜಿಲ್ಲಾಡಳಿತ ದೇಗುಲದ ಬಾಗಿಲು ತೆರಯಲು ಮತ್ತು ಪ್ರತಿದಿನ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದಂತೆ

ಸೋಮವಾರ ಬೆಳಿಗ್ಗೆ ೭ ಗಂಟೆಗೆ ವಿಶ್ವ ಪ್ರಸಿದ್ಧ ಬೇಲೂರು ಚನ್ನಕೇಶವಸ್ವಾಮಿ ದೇಗುಲದ ರಾಜಗೋಪುರ ಬಾಗಿಲನ್ನು ವಿಶೇಷ ಪೂಜೆಯೊಂದಿಗೆ ಬಾಗಿಲು ತೆರೆಯಲಾಯಿತು. ದ್ವಾರ ಪೂಜೆಯನ್ನು ಇಲ್ಲಿನ ದೇಗುಲದ ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿಭಟ್ಟರ್ ಮತ್ತು ಶ್ರೀನಿವಾಸಭಟ್ಟರ್ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಕೆ.ಎಸ್.ಲಿಂಗೇಶ್ ಮತ್ತು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ಇನ್ನಿತರರು ವೇದಘೋಷದೊಂದಿಗೆ ದೇಗುಲದ ದ್ವಾರದ ಮೂಲಕ ಪ್ರವೇಶಿಸಿ ಕೇಶವನ ದರ್ಶನ ಪಡೆದರು.

ಶಾಸಕ ಕೆ, ಎಸ್.ಲಿಂಗೇಶ್ ಮಾತನಾಡಿ ಕೋವಿಡ್ ಎರಡನೇ ವ್ಯಾಪಕತೆಯಿಂದ ಬೇಲೂರು ಚನ್ನಕೇಶವದೇಗುಲ ಬಾಗಿಲು ಮುಚ್ಚಲಾಗಿತ್ತು. ಅದರೆ ಕೋವಿಡ್ ಸಂಖ್ಯೆ ಇಳಿಮುಖವಾದಂತೆ ಕೇಂದ್ರ ಸರ್ಕಾರ ಲಾಕ್ ಡೌನ್ ಸಡಲಿಸಿ ದೇಗುಲಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಕೋವಿಡ್ ಮೂರನೇ ಅಲೆ ದೇಶಕ್ಕೆ ವ್ಯಾಪಕವಾಗದೆ ಪ್ರಜೆಗಳು ಸೌಖ್ಯದಿಂದ ಇರಲಿ ಎಂದು ನಾವುಗಳು ಭಕ್ತಿ ಭಾವದಿಂದ ಚಲುವ ಚನ್ನಿಗ ಬೇಲೂರು ಚನ್ನಕೇಶವ ಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಸತತ ಎರಡು ವರ್ಷದಿಂದ ಚನ್ನಕೇಶವ ಜಾತ್ರಾ ಮಹೋತ್ಸವ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತವಾಗಿತ್ತು. ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಸಲು ಭಗವಂತನು ಅನುವು ಮಾಡಲಿ ಎಂದು ಹೇಳಿದ ಅವರು ಜನರು ಯಾವ ಕಾರಣಕ್ಕೂ ಕೋವಿಡ್ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ಮಾತನಾಡಿ ಕೋವಿಡ್ ನೀತಿ ನಿಯಮಗಳೊಂದಿಗೆ ದೇಗುಲದ ಪ್ರವೇಶವನ್ನು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ.ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರಕ್ಕಾಗಿ ದೇಗುಲದ ಪ್ರವೇಶ ದ್ವಾರದಿಂದ ದರ್ಶನ ಪಡೆಯುವ ತನಕ ಬಾಕ್ಸ್ ಹಾಕಿದೆ. ಜನರು ಈ ಬಗ್ಗೆ ಗಮನ ನೀಡಬೇಕು. ವಿಶೇಷವಾಗಿ ದಾಸೋಹ ನಡೆಸಲು ನಮಗೆ ಅಧಿಕೃತ ಆದೇಶ ಬಂದಿಲ್ಲದ ಕಾರಣದಿಂದಲೇ ಜಿಲ್ಲಾಡಳಿತದ ಸೂಚನೆ ಬಳಿಕವೇ ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ ಎಂದ ಅವರು ಶಾಸಕರು ಕೂಡ ಇಂದಿನ ಕಾರ್ಯದಲ್ಲಿ ಭಾಗಿಯಾಗಿದ್ದು ಸಂತಸದ ವಿಷಯವೆಂದರು.

LEAVE A REPLY

Please enter your comment!
Please enter your name here