ಕೋರೋನಾ ವಾರಿಯರ್ಸ್ ಗಳಿಗೆ ಆಹಾರದ ಕಿಟ್ ಹುಲ್ಲಳ್ಳಿ ಸುರೇಶ್

0

ಜಾವಗಲ್: ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರೊನಾ ಸಂಕಷ್ಟ ಸಮರ್ಥವಾಗಿ ನಿಭಾಯಿಸಲು ಶ್ರಮಿಸಿದ್ದಾರೆ ಮತ್ತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ’ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಹುಲ್ಲಳ್ಳಿ ಸುರೇಶ್ ಹೇಳಿದರು.
ಜಾವಗಲ್ ಹೋಬಳಿಯ ಕಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಕೋರೋನಾ ವೈರಸ್ ಮಹಾಮಾರಿ ವಿರುದ್ದ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ ಕೋರೋನಾ ವಾರಿಯರ್ಸ್ ಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಶಿಕ್ಷಕಿಯರಿಗೆ, ಕಾರ್ಯಕರ್ತೆಯರಿಗೆ, ಗ್ರಾಮ ಪಂಚಾಯಿತಿ ನೌಕರರಿಗೆ, ನೀರು ಗಂಟಿಗಳಿಗೆ, ಹಾಗೂ ಅಂಗವಿಕಲರಿಗೆ ದಿನಸಿ ಪದಾರ್ಥಗಳ ಕಿಟ್ ಗಳನ್ನು ಹಾಗೂ ಸುರಕ್ಷತೆಗೆ ಸ್ವೆಟರ್ ಹಾಗೂ ಛತ್ರಿಗಳನ್ನು ಗೇರುಮರ ವೃತ್ತದಲ್ಲಿ ವಿತರಣೆ ಮಾಡಿ ಮಾತನಾಡಿ ಆರೋಗ್ಯ, ಪೊಲೀಸ್‌, ಕಂದಾಯ, ಶಿಕ್ಷಣ ಸೇರಿದಂತೆ ಎಲ್ಲಾ ಇಲಾಖೆಗಳು ಸಂಕಷ್ಟದ ಸಮಯದಲ್ಲಿ ಸಹಕರಿಸಿದ್ದರಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಾಯಿತು. ಹಲವಾರು ಸಂಘ ಸಂಸ್ಥೆಗಳು ಕೊರೊನಾ ಸಂದರ್ಭದಲ್ಲಿ ದಾಸೋಹ ಕೇಂದ್ರಗಳು ಮತ್ತು ಆಹಾರ ಕಿಟ್‌ಗಳನ್ನು ವಿತರಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಲಸೆ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿದ್ದಾರೆ’ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷರಾದ ಅಡಗೂರು ಆನಂದ್, ಉಪಾಧ್ಯಕ್ಷರಾದ ಅಶೋಕ್, ಪ್ರಧಾನ ಕಾರ್ಯದರ್ಶಿಯಾದ ದಿಲೀಪ್ ಕುಮಾರ್, ಎಪಿಎಂಸಿ ಸದಸ್ಯರಾದ ರೇಣುಕಾ ಪ್ರಸಾದ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಬಸವರಾಜ್, ರಮೇಶ್, ಪ್ರಧಾನ ಕಾರ್ಯದರ್ಶಿಯಾದ ಮೋಹನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಮೇಶ್, ಕುಮಾರ್, ಅಂಬರೀಶ್, ಶಿವು, ಭಾನು, ಪವಿತ್ರ, ಚಂದ್ರು, ರಾಜಣ್ಣ, ಭೈರಣ್ಣ, ಮುಖಂಡರುಗಳಾದ ಕಲ್ಯಾಣಪ್ಪ, ವಾಸಣ್ಣ, ಕುಮಾರ್, ಅಶೋಕ್, ಪ್ರಭು, ಶಿವಕುಮಾರ್, ಮಂಜುನಾಥ್, ಚಂದ್ರಶೇಖರ್, ಚೇತನ್, ಅರುಣ್, ದೇವರಾಜ್, ಕುಮಾರ್, ಸೋಮಶೇಖರ್, ವಿಜಯ್ ಕುಮಾರ್, ಪ್ರಸನ್ನ, ನಂದೀಶ್, ನವೀನ್, ಸತೀಶ್, ಮಹೇಶ್, ವಿನಯ್, ಸೋಮಶೇಖರ್, ಬಸವರಾಜ್, ಪ್ರಣೀತ್, ಚಂದನ್, ಶಿವಕುಮಾರ್, ಚೇತನ್,
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here