ರಸ್ತೆಯ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಚೌಡನಹಳ್ಳಿ ಗ್ರಾಮದ ಕಮಲ ಅವರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು

0

ಬೇಲೂರು: ಬಿಕ್ಕೋಡು ರಸ್ತೆಯ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಚೌಡನಹಳ್ಳಿ ಗ್ರಾಮದ ಕಮಲ ಅವರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.
ತಾಲೂಕಿನ ಚೌಡನಹಳ್ಳಿ ಗ್ರಾಮದ ಕಮಲ ಅವರು ಸಂಬಂಧಿಕರೊಂದಿಗೆ ತಮ್ಮ ಗ್ರಾಮದಿಂದ ಬೇಲೂರು ಮಾರ್ಗವಾಗಿ ಬೈಕಿನಲ್ಲಿ ಬರುವ ಸಂದರ್ಭ ಸನ್ಯಾಸಿಹಳ್ಳಿ ಸಮೀಪ ಮುಖ್ಯ ರಸ್ತೆ ಸಂಪೂರ್ಣ ಗಂಡಿ ಬಿದ್ದಿರುವುದರಿಂದ ಬೈಕ್ ಸವಾರನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ ಕಮಲಾ ಅವರು

ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ. ಮಹಿಳೆ ಸಾವಿಗೆ ಹದಗೆಟ್ಟ ರಸ್ತೆಯೇ ಕಾರಣ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ನೇತೃತ್ವದಲ್ಲಿ ಗ್ರಾಮಸ್ಥರು ರಸ್ತೆಯ ಮಧ್ಯೆ ಶವ ಇಟ್ಟು ಆಕ್ರೋಶ ವಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ ಬೇಲೂರಿನ ರಾಷ್ಟ್ರೀಯ ಹೆದ್ದಾರಿ ಹಾಸನ, ಚಿಕ್ಕಮಗಳೂರು ಗೆಂಡೇಹಳ್ಳಿ ,ಮೂಡಿಗೆರೆ ಹಾಗೂ ಮುಖ್ಯವಾಗಿ ಬಿಕ್ಕೋಡು ಮಾರ್ಗವಾಗಿ ಸಕಲೇಶಪುರ ರಸ್ತೆ ಸುಮಾರು 20 ಕಿ.ಮೀ. ದೂರದಲ್ಲಿ ಒಂದು ವರ್ಷದಿಂದ ಗುಂಡಿ ಬಿದ್ದಿದ್ದರೂ ಅದೇ ರಸ್ತೆಯಲ್ಲಿ ತಿರುಗುವ ಶಾಸಕರು ಹಾಗೂ ಅಧಿಕಾರಿಗಳಾಗಲಿ ಗಮನ ಹರಿಸಿಲ್ಲ. ಇಂದು ಓರ್ವ ಬಡ ಮಹಿಳೆ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ಇದಕ್ಕೆ ಯಾರು ಯಾರು ಹೊಣೆ ಎಂದು ಪ್ರಶ್ನಿಸಿದರು.
ತಾಲೂಕಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ರಸ್ತೆಗಳ ಫೋಟೋ ತೆಗೆದು ಪ್ರಚಾರ ಮಾಡುವ ಶಾಸಕರು ಮುಖ್ಯ ರಸ್ತೆಯ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಈ ಹಿಂದೆ

ಈ ಭಾಗದಲ್ಲಿ ಗುಂಡಿಗಳಿಗೆ ಗಿಡ ನೆಟ್ಟು ಪ್ರತಿಭಟನೆ ಮಾಡಿದರೂ ಸಹ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರನ್ನು ಕೇಳಿದರೆ ಈ ರಸ್ತೆ ದುರಸ್ತಿಗಾಗಿ ಎರಡು ಕೋಟಿ ಅನುಮೋದನೆ ಆಗಿದೆ ಎನ್ನುತ್ತಾರೆ. ಅದು ಬರುವವರೆಗೂ ಆ ಗುಂಡಿ ಮುಚ್ಚಿದ್ದರೆ ಇಂದು ಬಡ ಮಹಿಳೆ ಸಾವನಪ್ಪುತ್ತಿರಲಿಲ್ಲ. ಕೇವಲ ರಸ್ತೆಗಳನ್ನು ಶಂಕುಸ್ಥಾಪನೆ ಮಾಡಿದರೆ ಗುಂಡಿಗಳನ್ನು ಮುಚ್ಚಿ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸೂಕ್ತ ಪರಿಹಾರ ಕೊಡಬೇಕು ಇಲ್ಲದಿದ್ದರೆ ಮುಂದೆ

ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಮಾತನಾಡಿ ಈ ಕುಟುಂಬಕ್ಕೆ ಇಂದು ಆಸರೆಯೇ ಇಲ್ಲದಂತಾಗಿದೆ.ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಯಾರು ಹೊಣೆ ತಕ್ಷಣವೇ ನಮ್ಮ ಪಕ್ಷದ ವತಿಯಿಂದ ಆ ಕುಟುಂಬಕ್ಕೆ 1 ಲಕ್ಷ ಹಣವನ್ನು ನೀಡಲಾಗುವುದು ಎಂದರು.
ಇದೇ ವೇಳೆ ಅಧಿಕಾರಿಗಳು ಆಗಮಿಸುವವರೆಗೂ ಯಾವುದೇ ಕಾರಣಕ್ಕೂ ಸೂಚಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಇದೇ ವೇಳೆ

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರಮೇಶ್, ಲೋಕೋಪಯೋಗಿ ಇಲಾಖೆ ಇಂಜಿಯರ್ ಪ್ರತಿಭಟನೆ ಕಾರರ ಮನವೊಲಿಸುವಲ್ಲಿ ಸಫಲರಾದರು.
ಈ ಸಂದರ್ಭದಲ್ಲಿ ಮುಖಂಡರಾದ ತೌಫಿಕ್,ಎಮ್ ಆರ್ ವೆಂಕಟೇಶ್, ಎಆರ್ ಅಶೋಕ್, ಜಮಾಲ್,ಭರತ್,ಅಶೋಕ್,ಇತರರು ಹಾಜರಿದ್ದರು.
ಯಾವುದೇ ರೀತಿಯಲ್ಲಿ ಗೊಂದಲಕ್ಕೆ ಆಸ್ಪದ ಕೊಡದಂತೆ ಪೊಲೀಸರು ಬಂದೋಬಸ್ತ್ ಮಾಡಲಾಯಿತು.

LEAVE A REPLY

Please enter your comment!
Please enter your name here