Home Hassan Taluks Belur ಬದುಕಿರುವ ವೃದ್ಧೆಯ ಮರಣ ಪ್ರಮಾಣ ಪತ್ರ , ಸ್ವತಃ ನೋಡಿದ ಅಜ್ಜಿಗೆ ಶಾಕ್ : ದೂರು...

ಬದುಕಿರುವ ವೃದ್ಧೆಯ ಮರಣ ಪ್ರಮಾಣ ಪತ್ರ , ಸ್ವತಃ ನೋಡಿದ ಅಜ್ಜಿಗೆ ಶಾಕ್ : ದೂರು ದಾಖಲು

0

ಬದುಕಿರುವ ವೃದ್ಧೆಯ ಮರಣ ಪ್ರಮಾಣ ಪತ್ರ , ಸ್ವತಃ ನೋಡಿದ ಅಜ್ಜಿಗೆ ಶಾಕ್ : ದೂರು ದಾಖಲು

ಮರಣ ದೃಢೀಕರಣ ಪತ್ರ

ಹಾಸನ : ಬದುಕಿರುವ ಅಜ್ಜಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ದೃಢೀಕರಣ ಪತ್ರ ನೀಡಿರುವ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. , ಇವರು

ಜೀವಂತವಾಗಿದ್ದರೂ 2020ರಲ್ಲೇ ತಹಶೀಲ್ದಾರ್‌ ಕಚೇರಿ ಕೆಲ ಅಧಿಕಾರಿಗಳು ಇವರ ಮರಣದ ಬಗ್ಗೆ ಪ್ರಮಾಣ ಪತ್ರ ನೀಡಿದ್ದರು ಎಂದು ಮುದಿಗೆರೆ ಗ್ರಾಮದ ಪಾರ್ವತಮ್ಮ ಎಂಬುವವರು ಬೇಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .,

ಅಜ್ಜಿ ಹೇಳುವುದೇನು ??
” ಒಟ್ಟು 5 ಜನ ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಅವರಿಗೆಲ್ಲ ಆಸ್ತಿ ವಿಭಾಗ ಮಾಡಿಕೊಟ್ಟಿದ್ದು . ನನ್ನ ಜೀವನಕ್ಕೆಂದು 32 ಗುಂಟೆ ಜಮೀನನ್ನು ಸ್ವಂತಕ್ಕೆ ಇಟ್ಟುಕೊಂಡಿದ್ದೆ. ಬಳಿಕ ಹೊರ ಊರಲ್ಲಿ ಬೇಕರಿ ಮಾಡಿಕೊಂಡಿದ್ದ ಮಕ್ಕಳ ಜೊತೆ  ಇರಲು ಹೋಗಿದ್ದೆ. ನಾನು ಏಪ್ರಿಲ್‌ 10ರಂದು ತೀರಿ ಹೋಗಿದ್ದೇನೆಂದು 2020ರ ಏಪ್ರಿಲ್‌ 20ರಂದು ನೋಂದಣಿ ಮಾಡಿಸಿ, ಅದೇ ವರ್ಷ ಅಕ್ಟೋಬರ್‌ 14ರಂದು ಮರಣ ದೃಢೀಕರಣ ಪತ್ರವನ್ನೂ ಅದ್ಯಾರೋ ಪಡೆಯಲಾಗಿದೆ’ ಎಂದು ಪ್ರಕರಣದಲ್ಲಿ ವಿವರಿಸಿದ್ದಾರೆ  , ನನ್ನ ಮೈದುನನ ಮಕ್ಕಳು ನನ್ನ ಹೆಸರಿನಲ್ಲಿರುವ 32 ಗುಂಟೆ ಜಮೀನನ್ನು ಲಪಟಾಯಿಸುವ ಉದ್ದೇಶದಿದ್ದ, ಈ ಕೃತ್ಯ ಎಸಗಿರುವುದು ನನಗೆ ಕಳೆದ ಹತ್ತು ದಿನಗಳ ಹಿಂದೆ ತಿಳಿಯಿತು. ಅವರ ವಿರುದ್ದ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ’ ಎಂದು ಪಾರ್ವತಮ್ಮ ಸ್ಪಷ್ಟ ಪಡಿಸಿದ್ದಾರೆ . ಪ್ರಕರಣ ತನಿಖೆ ಹಂತದಲ್ಲಿದೆ .‌

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version