ಸರ್ಕಾರದ ಪರ ವಕೀಲರು : ‘ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲು ಮಾರ್ಗ ನಿರ್ಮಾಣ ಯೋಜನೆ ಕೈಬಿಡಲಾಗಿದ್ದರೂ, ಚಿಕ್ಕಮಗಳೂರು-ಬೇಲೂರು ಮತ್ತು ಹಾಸನಕ್ಕೆ ಪರ್ಯಾಯ ರೈಲು ಮಾರ್ಗ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಇದು ಸಕಲೇಶಪುರದ ಮೂಲಕ ಮಂಗಳೂರು ತಲುಪಲಿದೆ. ಇದರಿಂದ, ಯಾವುದೇ ಸಮಸ್ಯೆಯಾ ಗುವುದಿಲ್ಲ’
ನ್ಯಾಯಪೀಠ : ‘ತಾಂತ್ರಿಕ ಅಂಶಗಳು, ಹಣಕಾಸಿನ ಸ್ಥಿತಿಗತಿ, ಆಡಳಿತಾತ್ಮಕ, ಸಾಮಾಜಿಕ ಮತ್ತಿತರ ವಿಚಾರಗಳನ್ನು ಪರಿಗಣಿಸಿ ರೈಲು ಮಾರ್ಗ ನಿರ್ಮಾಣ ಯೋಜನೆಯನ್ನು ರೈಲ್ವೇ ಇಲಾಖೆ ಕೈಗೆತ್ತಿಕೊಳ್ಳುತ್ತದೆ. ನೀತಿ-ನಿರೂಪಣೆ ವಿಚಾರಗಳು ಮತ್ತು ಸರ್ಕಾರದ ಯಾವುದೇ ಇಲಾಖೆ ಅಥವಾ ಶಾಸನಬದ್ಧ ಸಂಸ್ಥೆಯ ದೈನಂದಿನ ಚಟುವಟಿಕೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ’ ‘ಈ ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ’ ;
ಆದೇಶ :
‘ಯೋಜನಾ ವೆಚ್ಚದಲ್ಲಿ ಭಾರಿ ಹೆಚ್ಚಳವಾಗಿರುವುದರಿಂದ, ರೈಲು ಮಾರ್ಗ ನಿರ್ಮಾಣ ಮುಂದುವರಿ ಸುವುದು ಕಾರ್ಯಸಾಧುವಲ್ಲ’ ಎಂಬ ಕಾರಣ ನೀಡಿದ್ದ ಸರ್ಕಾರ ಯೋಜನೆಯ ಪ್ರಸ್ತಾವನೆಯನ್ನು 2019ರ ಜನವರಿ 17ರಂದು ಕೈಬಿಟ್ಟಿತ್ತು.
ಆದ್ದರಿಂದ ಹಾಸನ ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರ ತಾಲ್ಲೂ ಕುಗಳ ನಡುವೆ ರೈಲು ಮಾರ್ಗ ನಿರ್ಮಾ ಣದ ಪ್ರಸ್ತಾವನೆಯನ್ನು ಕೈಬಿಟ್ಟಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತಂತೆ ಹಾಸನ ಜಿಲ್ಲೆಯ ಎಚ್.ಸಿ. ನಂದೀಶ್ ಹಾಗೂ ಎಸ್.ವಿ. ಪರಮೇಶ್ವರಯ್ಯ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.