ಮುಖದ ಕಾಂತಿಗೆ ದಾರಿ ಹುಡುಕುತ್ತಿದ್ದೀರಾ ಐಸ್ ಕ್ಯೂಬ್ಸ್ ನಿಮ್ಮಗೆ ಹೊಳೆಯುವ ಚರ್ಮ ನೀಡುತ್ತೆ. ಹೇಗೆ ಎಂದು ಯೋಚಿಸುತ್ತಿದ್ದೀರಾ ?

0

ಒಳ್ಳೆಯ ಸೌಂದರ್ಯಕ್ಕೆ ಈ ಚಿಕ್ಕ ಐಸ್ ಕ್ಯೂಬ್ಸ್ ಹೇಗೆ ಸಹಾಯಕಾರಿ?
ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಬಳಸುವ ಐಸ್ ಕ್ಯೂಬ್ ನಿಮ್ಮ ತ್ವಚೆಗೆ ಬಹಳ ಹೊಳಪು ಮತ್ತು ಕಾಂತಿ ನೀಡುತ್ತದೆ ಐಸ್ ನಲ್ಲಿ ಇರುವ ಸೋಡಿಯಂ ಪಾಲಿಯಾಕ್ರಿಲೇಟ್. ನಿಮ್ಮ ತ್ವಚೆಗೆ ಬಹಳ ಉಪಯೋಗಕಾರಿ..

ಪ್ರತಿ ದಿನ ಬೆಳಗ್ಗೆ ಐಸ್ ಕ್ಯೂಬ್ ಗಳನ್ನು ಬಿಳಿ ಹಾಗೂ ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿಕೊಂಡು ನಯವಾಗಿ ಮುಖಕ್ಕೆ ೧೫-೨೦ ನಿಮಿಷ ಮಸಾಜ್ ಮಾಡಿಕೊಂಡರೆ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.ನೇರವಾಗಿ ಐಸ್ ಕ್ಯೂಬ್ ಬಳಕೆ ಮಾಡಿದರೆ ಮುಖದ ಚರ್ಮ ಒಡೆಯುವ ಸಾಧ್ಯತೆ ಇದೆ .

ಪ್ರಯೋಜನಗಳು

◻️ ಐಸ್ ಕ್ಯೂಬ್ ಗಳು ನಿಮ್ಮ ಚರ್ಮದ ಮೇಲೆ ಇರುವ ರಂಧ್ರಗಳನ್ನು ಮುಚ್ಚಿಕೊಳ್ಳಲು ಸಹಾಯ ಮಾಡುತ್ತದೆ.
◻️ಮಕ್ಕಳಿಗೆ ಹಾಗೂ ದೊಡ್ಡವರಿಗೆ ಬಾರಿ ಮೊಬೈಲ್ ಬಳಕೆಯಿಂದ ಕಣ್ಣುಗಳು ಊದಿಕೊಳ್ಳುತ್ತದೆ ಅಂತಹ ಸಮಯದಲ್ಲಿ ಐಸ್ ಕ್ಯೂಬ್ ಗಳನ್ನು ಶುದ್ಧ ಬಟ್ಟೆಯ ಮೇಲೆ ಹಾಕಿ ಕಣ್ಣುಗಳಿಗೆ ಮಸಾಜ್ ಮಾಡಿಕೊಂಡರೆ ಓದಿದ ಕಣ್ಣು ಸಾಮಾನ್ಯ ಸ್ಥಿತಿಗೆ ಬರುತ್ತದೆ .
◻️ಎಣ್ಣೆಯ ತ್ವಚೆ ಹೊಂದಿದವರು ಐಸ್ ಕ್ಯೂಬ್ಸ್ ಬಳಸಿದರೆ ಚರ್ಮವನ್ನು ಉತ್ತಮವಾಗಿ ಮಾಡಿಕೊಳ್ಳಬಹುದು.
◻️ ನಿಮ್ಮ ಚರ್ಮ ಸೂರ್ಯನ ಕಾಂತಿಗೆ ಸುಟ್ಟುಹೋಗಿದ್ದರೆ ಐಸ್ ಕ್ಯೂಬ್ ಬಳಕೆಯಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

◻️ಮುಖದ ಮೇಲೆ ಗುಳ್ಳೆಗಳು ಅದರಿಂದ ಆಗುವ ಕಲೆಗಳು ಹಾಗೂ ಕುತ್ತಿಗೆ ಭಾಗದಲ್ಲಿ ಇರುವ ಕಪ್ಪು ಚರ್ಮ ಸಮಸ್ಯೆ ಇದರ ಬಳಕೆಯಿಂದ ನಿವಾರಣೆಯಾಗುತ್ತದೆ.

ಐಸ್ ಕ್ಯೂಬ್ ಬಳಸಿ ನಿಮ್ಮ ಫಲಿತಾಂಶವನ್ನು ಕಮೆಂಟ್ ಮಾಡಿ

-ತನ್ವಿ .ಬಿ .

LEAVE A REPLY

Please enter your comment!
Please enter your name here