ಸ್ನೇಹಿತರೆ ಆಮ್ಲ ಆರೋಗ್ಯಕ್ಕೆ ಬಹಳ ಉತ್ತಮವಾದದ್ದು , ಇದರಲ್ಲಿ ವಿಟಮಿನ್ ‘C’ ಹೇರಳವಾಗಿರುತ್ತದೆ , ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಇದರಲ್ಲಿ ಜ್ಯೂಸ್ , ಉಪ್ಪಿನಕಾಯಿ , ಚಟ್ನಿ ಮತ್ತು ಜಾಮ್ ಮಾಡಿ ಸೇವಿಸಬಹುದು.
ಆಮ್ಲಾ ದ ಸೇವನೆ ದಿನದ ಯಾವುದಾದರೂ ಸಮಯ ಉತ್ತಮವೇ ಆದರೆ ಮುಂಜಾನೆಯ ಕಾಲಿ ಹೊಟ್ಟೆಯಲ್ಲಿ ಸೇವನೆ ಅತ್ಯುತ್ತಮ.
- ನಿತ್ಯ ಆಮ್ಲ ಜ್ಯೂಸ್ ಸೇವನೆಯಿಂದ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ .
*ಇದರಲ್ಲಿ ವಿಟಮಿನ್ ‘C’ ಅಂಶವು ಹೇರಳವಾಗಿರುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ (ಕೊರೋನ ಸಮಯದಲ್ಲಿ ಬಹಳ ಉಪಯುಕ್ತ ) - ಕೊರೋನ ಸಮಯದಲ್ಲಿ ದಿನ ನಿತ್ಯ ಒಂದು ನೆಲ್ಲಿಕಾಯಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ದೇಹಕ್ಕೆ ದೊರೆಯುತ್ತದೆ .
- ಪಿತ್ತವನ್ನು ನಿಯಂತ್ರಣದಲ್ಲಿಡಲು ಆಮ್ಲ ಸಹಾಯಮಾಡುತ್ತದೆ .
- ಆಮ್ಲ ದೇಹದಲ್ಲಿನ ಕೆಟ್ಟಕೊಬ್ಬಿನಂಶ ತೊಲಗಿಸಿ , ಹೃದಯ ಕಾಯಿಲೆಯ ವಿರುದ್ಧ ಹೋರಾಡುತ್ತದೆ.
- ಇದರ ಸೇವನೆಯಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುತ್ತದೆ .
- ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ.
- ಅಲ್ಸರ್ ತಡೆಗಟ್ಟುವಲ್ಲಿ ಆಮ್ಲ ಸಹಾಯಕಾರಿ.
- ಮಲಬದ್ದತೆ ಸಮಸ್ಯೆಗೆ ಆಮ್ಲ ಹೆಚ್ಚು ಉಪಯೋಗಕಾರಿ .
- ದೇಹವನ್ನು ತಂಪಾಗಿಡುವಲ್ಲಿ ಆಮ್ಲ ಜ್ಯೂಸ್ ಸಹಕಾರಿಯಾಗುತ್ತದೆ .
- ಆಮ್ಲ ಸೇವನೆಯಿಂದ ಕಣ್ಣು ದೃಷ್ಟಿ ಉತ್ತಮವಾಗುತ್ತದೆ.
- ನಮ್ಮ ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುತ್ತದೆ.