ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ : ಬೂವನಹಳ್ಳಿ ಸುತ್ತ ಮುತ್ತ ಈಗಲೇ ಬೆಲೆ ಎಷ್ಟು ಗೊತ್ತಾ?

0

ಮೂರು ದಶಕದ ಹಾಸನಿಗರ ಕನಸು ಹಾಸನ ವಿಮಾನನಿಲ್ದಾಣ ; ಇದೀಗ ಕಾಮಗಾರಿ ಪ್ರಾರಂಭದ ಮೂಲಕ ನಗರ ಸಮೀಪದ ಬೂವನಹಳ್ಳಿಯ ಭೂಮಿಗೆ ಬಂಗಾರದ ಬೆಲೆ ಬಂದು ರೈತಾಪಿ ವರ್ಗದ ಬದುಕು ಒಂದೆಡೆ ಹಸನುಗೊಳ್ಳುವ ಬಹುದೊಡ್ಡ ನಿರೀಕ್ಷೆ ಗರಿಗೆದರಿದರೆ ಮತ್ತೊಂದೆಡೆ ಜಮೀನು ಮಾರಾಟದ ನಂತರದ ಪಾಡೇನು ಎಂಬು ಇದೆ . ಇದಕ್ಕೆ ಇತರೆಡೆ ಇದೇ ರೈತರು ಜಮೀನು ಖರೀದಿಸಿ ಕೃಷಿ ಮುಂದುವರೆಸಿದರೆ ಒಳ್ಳೆಯದು ಏನ್ ಅಂತಿರಾ??

• ಬೂವನಹಳ್ಳಿ = 1514.18 ಚ.K.M. ಭೌಗೋಳಿಕ ವಿಸ್ತೀರ್ಣ ಹೊಂದಿದ್ದರೆ
6,500 ಜನಸಂಖ್ಯೆ , ಅಂದಾಜು 600 ಮನೆ, ಕಟ್ಟಡ , ಪಂಚಾಯಿತಿಗೆ ವಾರ್ಷಿಕ 66 ಲಕ್ಷರೂ. ಆದಾಯ ಪ್ರಸ್ತುತ ಗುಂಟೆ ಜಮೀನಿಗೆ ಬೆಲೆ 15ರಿಂದ 18 ಲಕ್ಷ ರೂ.

ಜಿಲ್ಲಾ ಕೇಂದ್ರ ಹಾಸನಕ್ಕೆ ಹೊಂದಿಕೊಂಡಂತೆ ಇರುವ ಬೂವನಹಳ್ಳಿ ಹೆಸರಿನೊಂದಿಗೆ ಹಳ್ಳಿ ಎಂಬುದನ್ನು ಸೇರ್ಪಡೆ ಮಾಡಿಕೊಂಡಿರುವುದನ್ನು ಹೊರತುಪಡಿಸಿದರೆ ರಾಜಕೀಯವಾಗಿಯು ಪ್ರಬಲವಾಗಿರುವ ಗ್ರಾಮದಿಂದ ಬಿ.ವಿ.ಕರೀಗೌಡರು ಈ ಹಿಂದೆ ಶಾಸಕರಾಗಿದ್ದು ನೆನಪಿರಲಿ. ಜಿಪಂ ಸದಸ್ಯ ಕ್ಷೇತ್ರವನ್ನು ಹೊಂದಿದ್ದ ಗ್ರಾಮ ಸಾಕಷ್ಟು ಅಭಿವೃದ್ಧಿ ಕಂಡಿದೆ . ಇತ್ತೀಚೆಗಷ್ಟೇ ನಗರಸಭೆ ವ್ಯಾಪ್ತಿಗೆ ಒಳಪಟ್ಟು ಮುಂದಿನ ಹಾಸನ ನಗರ ಪಾಲಿಕೆ ಚುನಾವಣೆಗೆ ಒಳಪಡಲಿದೆ

ಒಂದು ಕಾಲದಲ್ಲಿ ಕೃಷಿಗಷ್ಟೇ ಮೀಸಲಾಗಿದ್ದ ಬೂವನಹಳ್ಳಿ ಸುತ್ತಲಿನ ಬೂವನ ಜಮೀನನ್ನು ಮೂರು ದಶಕದ ಹಿಂದೆ ಕಾರ್ಗೋ ವಿಮಾನ ನಿಲ್ದಾಣ, ಗಾಲ್ಫ್ ನಿರ್ಮಾಣಕ್ಕೆ ಸರಕಾರ 982 ಎಕರೆ ಭೂಮಿ ಅಗತ್ಯ ಎಂದು ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಇದೀಗ 536 ಎಕರೆ ಸಾಕೆಂಬ ನಿರ್ಧಾರಕ್ಕೆ ಬಂದಿರುವ ಹಿನ್ನೆಲೆ ಸ್ವಾಧೀನ ಪಡಿಸಿಕೊಂಡಿರುವ 446 ಎಕರೆ ಭೂಮಿಯನ್ನು ರೈತರಿಗೆ ಹಿಂತಿರುಗಿಸಲು ಸರಕಾರ ಡಿನೋಟಿಫೈ ಮಾಡಿರುವುದು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ ಹಾಲು ಉತ್ಪಾದಕ ಸಹಕಾರ ಸಂಘದ ಹಲವು ಸದಸ್ಯರು ಹಾಗೂ ಗ್ರಾಮದ ಬಹುತೇಕರು

ತಮ್ಮ ಭೂಮಿ ಕಳೆದುಕೊಂಡು, ಪರಿಹಾರದ ಹಣ ಕೈಸೇರದೆ ಅತಂತ್ರವಾಗಿದ್ದ ಜನರಿಗೆ ಇದೀಗ ಮರಳಿ ಭೂಮಿ ಕೈಸೇರುವ ಹೊಸ ಭರವಸೆ ಮೂಡಿಸಿದ್ದು . ಮಕ್ಕಳ ಮದುವೆ, ಭವಿಷ್ಯದ ಹೊಂಗನಸು ನನಸು ಮಾಡಿಕೊಳ್ಳಲು ಇದು ಸಕಾಲ ಎಂಬ ಉದ್ದೇಶದಿಂದ ಸರಕಾರ ಕೊಡುವ ಕಡಿಮೆ ಮೊತ್ತದ ಪರಿಹಾರದ ಹಣದ ಬದಲು ಭೂಮಿ ಮರಳಿಸಿದರೆ ಸಾಕು ನಮ್ಮ ಬದುಕಿನ ಚಿತ್ರಣವೇ ಬದಲಾಗುತ್ತದೆ ಎಂಬ ಕನಸು ಮತ್ತೊಂದೆಡೆ ಗರಿಗೆದರಿದೆಯಂತೆ.

ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭವಾದ ಬಳಿಕ ಬೂವನಹಳ್ಳಿಯನ್ನು ಹೊರಗಿನವರು ನೋಡುವ ದೃಷ್ಟಿ ಇದೀಗ ಬೇರೆನೆ ಆಗಿಬಿಟ್ಟಿದೆ ‌, ಇನ್ನು ವಿಮಾನ ನಿಲ್ದಾಣ ಆದ ಬಳಿಕ ಕೇಳಬೇಕ ?

ಇನ್ನೊಂದಡೆ ರಿಯಲ್ ಎಸ್ಟೇಟ್ , ಕುಬೇರ ಮಹಾಶಯರು ಅಲ್ಲಿನ ಮನೆ, ನಿವೇಶನಕೊಳ್ಳಲು ಮುಂದಾಗುತ್ತಿದ್ದಾರೆ. ಹೊರಗಿನ ಉದ್ಯಮಿಗಳ ದೃಷ್ಟಿಯೂ ಇತ್ತ ನೆಟ್ಟಿರೋದಂತು ಸುಳ್ಳಲ್ಲ .

ಬೆಂಗಳೂರು, ಮಂಗಳೂರು ನಡುವೆ ಹಾಸನ ಇರುವ ಇಲ್ಲಿ ಭೂಮಿ ಕೊಂಡ ಕಾರಣ ಭವಿಷ್ಯದ ದಿನದಲ್ಲಿ ವಿಮಾನ ನಿಲ್ದಾಣ ಬಹುಬೇಡಿಕೆಯ ನಿಲ್ದಾಣವಾಗಬಹುದು , a best business & best weather atmosphere environmental place ಎಂತಲು . ಇಲ್ಲಿ ಭೂಮಿ ಕೊಂಡರೆ ಉದ್ಯಮಕ್ಕೆ , ಉಳಿಯಲು ಅನುಕೂಲ ಎಂಬ ಮುಂದಾಲೋಚನೆಯಿಂದ ಇಲ್ಲಿನ ಭೂಮಿ, ಹಳೆಯ ಕಟ್ಟಡಕ್ಕೆ ಬೆಲೆ ಬಂದಿದೆ.

ಈಗಲೇ ಮಿನಿಮಮ್ 15ರಿಂದ 20 ಲಕ್ಷ ರೂ.: ಬೂವನಹಳ್ಳಿಯಲ್ಲಿ ಒಂದುಗುಂಟೆಗೆ .,  ರಸ್ತೆ ಪಕ್ಕ ಇದರಂತು ಹೇಳಿದ್ದೇ ಬೆಲೆ ಎಂಬಂತಾಗಿದೆ. ಒಟ್ಟಾರೆ ಮುಂದಿನ ದಿನದಲ್ಲಿ ಬೂವನಹಳ್ಳಿಯ ಚಿತ್ರಣ ಸಂಪೂರ್ಣ ಬದಲಾಗುವುದರಲ್ಲಿ ಯಾವುದೇ ಸಂಶಯವೂ ಇಲ್ಲ.

ಎಚ್.ಡಿ.ಡಿ. ಹೆಸರಿಡಲು ಒತ್ತಾಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕನಸಿನ ಕೂಸಾದ ಹಾರುವ ವಿಮಾನ ನಿಲ್ದಾಣಕ್ಕೆ ಗೌಡರ ಹೆಸರನ್ನೇ ನಾಮಕರಣ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ತಮ್ಮ ಜೀವಿತ ಅವಧಿಯಲ್ಲಿ ನಿಲ್ದಾಣ ಮಾಡಿ ಎಂದು ಸರ್ವ ಪ್ರಯತ್ನ ಪ್ರಧಾನಿ ನರೇಂದ್ರಮೋದಿಯಿಂದ ಹಿಡಿದು ಸಂಬಂಧಿಸಿದ ಕೇಂದ್ರ ಸಚಿವರುಗಳನ್ನು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಅವರ ಮೇಲೆ ಒತ್ತಾಯದ ಫಲವಾಗಿ ನಿಲ್ದಾಣವಾಗುತ್ತಿದ್ದು, ದೇವೇಗೌಡರ ಹೆಸರನ್ನೇ ಇಡುವುದು ಸೂಕ್ತ ಎಂಬ ಅಭಿಪ್ರಾಯ ಕೂಡ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. , ಇದರೊಂದಿಗೆ ಬೇರೆ ಹೆಸರುಗಳ ತಲುಕಿಕೊಂಡಿವೆ

ನಮ್ಮ ಹಾಸನ ಅಭಿವೃದ್ಧಿ ಯತ್ತ ಸಾಗಲೊಂದು , ಮುಂದುವರೆಯಲೊಂದ ವಿಮಾನ ನಿಲ್ದಾಣ ಬೇಕು ನಿಜ , ಅಂತೆಯೇ‌ ಕೃಷಿಯೇ ಮೊದಲ ಕಾಯ ನಮ್ಮ ಹಾಸನಿಗರದ್ದು ., ಇದಕ್ಕೆ ಅದರ ಎರಡರಷ್ಟು ಮಹತ್ವ ಬಂದರೆ ಸಾಕು

LEAVE A REPLY

Please enter your comment!
Please enter your name here