ಹಾಸನ ಅಡಿಷನಲ್ ಎಸ್ ಪಿ ನಂದಿನಿ ಅವರಿಗೆ ಡಾಕ್ಟರೇಟ್ ಪದವಿ

0

ಹಾಸನ : ಜಿಲ್ಲಾ ಹೆಚ್ಚುವರಿ ಪೊಲೀಸ್ ಮುಖ್ಯಾಧಿ ಕಾರಿ ಬಿ.ಎನ್.ನಂದಿನಿ ಅವರು ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ರಕ್ಷಣೆ ಅಪರಾಧ ಮತ್ತು ನ್ಯಾಯ ಪರಿಕಲ್ಪನೆ’ ಎಂಬ ವಿಷಯದ ಮೇಲೆ ಬರೆದ ಮಹಾ ಪ್ರಬಂಧಕ್ಕೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಹೆಚ್‌ಡಿ) ಪದವಿ ನೀಡಿದೆ. ಮಂಡ್ಯ ಜಿಲ್ಲೆಯ ಬಿಳಗುಲಿ ನಂಜುಂಡಸ್ವಾಮಿ ಚಂದ್ರಮ್ಮ ದಂಪತಿಯ ಪುತ್ರಿ ಹಾಗೂ ಪ್ರದೀಪ್ ಅವರ ಪತ್ನಿ ನಂದಿನಿ ಅವರು ಮಹಾ ಪ್ರಬಂಧ ಬರೆಯಲು ಶಿವಮೊಗ್ಗದ ಸಹ್ಯಾದ್ರಿ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಅವರು ಮಾರ್ಗದರ್ಶಕರಾಗಿದ್ದರು.

#hassan #hassannews #hassansp #hassanpolicenews

LEAVE A REPLY

Please enter your comment!
Please enter your name here