ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್‍ಪಾಸ್ ವಿತರಣೆ

0

ಹಾಸನ ಡಿ.18 (ಹಾಸನ್_ನ್ಯೂಸ್): ವಿಕಲಚೇತನರಿಗೆ ರಿಯಾಯಿತಿ ದರದ ಬಸ್‍ಪಾಸ್‍ನ್ನು 2020ನೇ ಸಾಲಿನಲ್ಲಿ ವಿತರಿಸಲಾಗಿರುವ ವಿಕಲಚೇತನರ ಬಸ್‍ಪಾಸ್‍ಗಳನ್ನು ಫೆ.28 ರವರೆಗೆ ಮಾನ್ಯ ಮಾಡಲಾಗಿದ್ದು, ಡಿ.26 ರಿಂದ ಫೆ.28 ರೊಳಗೆ ಅಂಗವಿಕಲರ ಗುರುತಿನ ಚೀಟಿ, ಭಾವಚಿತ್ರ, ಹಳೆಯ ಬಸ್‍ಪಾಸ್, ಆಧಾರ ಕಾರ್ಡ ಹಾಗೂ ಇತರೆ ಅಗತ್ಯ ದಾಖಲಾತಿಗಳೊಂದಿಗೆ ರೂ.660/-ಗಳನ್ನು ಸಂಬಂಧಪಟ್ಟ ತಾಲ್ಲೂಕಿನ ಬಸ್ ನಿಲ್ದಾಣದಲ್ಲಿ ಪಾವತಿಸಿ 2021ನೇ ಸಾಲಿಗೆ ನವೀಕರಿಸಿಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, 9ನೇ ಕ್ರಾಸ್, ಶಂಕರಮಠ ರಸ್ತೆ, ಕೆ.ಆರ್.ಪುರಂ, ಹಾಸನ ದೂ.ಸಂ:08172-264546/259946 ಅಥವಾ ಸಂಬಂಧಪಟ್ಟ ತಾಲ್ಲೂಕು ವಿವಿದೋದ್ದೋಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯೂ.) ರವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here