Channarayapattana

20 ಶಾಲಾ ಕಟ್ಟಡ ನಿರ್ಮಾಣಕ್ಕೆ 2.70 ಕೋಟಿ ಬಿಡುಗಡೆ

By

September 07, 2022

20 ಶಾಲಾ ಕಟ್ಟಡ ನಿರ್ಮಾಣಕ್ಕೆ 2.70 ಕೋಟಿ ಬಿಡುಗಡೆ: ಶಾಸಕ

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಇಪ್ಪತ್ತು ಶಾಲಾ ಕಟ್ಟಡಗಳ ನಿರ್ಮಾಣಕ್ಕೆ 2 ಕೋಟಿ 70 ಲಕ್ಷ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರುತಾಲ್ಲೂಕಿನ ಬಾಗೂರು ಹೋಬಳಿ ಚನ್ನೇನಹಳ್ಳಿ ಗ್ರಾಮದಲ್ಲಿ ನೂತನ ಹಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡ ಹಾಗೂ ಕಾಂಪೌAಡ್ ಉದ್ಘಾಟಿಸಿ ಅವರು ಮಾತನಾಡಿದರು. ಚನ್ನೇನಹಳ್ಳಿಯಲ್ಲಿ ಇನ್ನೊಂದು ಶಾಲಾ ಕಟ್ಟಡ ನಿರ್ಮಾಣ ಮಾಡಲು ಹಣ ಬಿಡುಗಡೆಯಾಗಿದೆ. ಶಾಲೆಗಳ ಅಭಿವೃದ್ಧಿಗೆ ಪೋಷಕರು ಹಾಗೂ ಮುಖಂಡರು ಸಹಕರಿಸಿ ಎಂದು ಮನವಿ ಮಾಡಿದರುಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸಿ.ಜೆ.ಕುಮಾರ್, ಶಿಕ್ಷಣಾಧಿಕಾರಿ ಎನ್.ಜೆ ಸೋಮನಾಥ್, ಮುಖ್ಯ ಶಿಕ್ಷಕ ಎಚ್.ಪಿ.ಕುಮಾರಸ್ವಾಮಿ, ರಾಮಚಂದ್ರು, ಸತೀಶ್, ನಟೇಶ್, ಸಿ.ಎಂ.ಚಿಕ್ಕೇಗೌಡ, ಸಿದ್ದೇಗೌಡ, ಹೆಚ್.ಡಿ. ದಿನೇಶ್, ಪಿಡಿಒ ಸಂತೋಷ್ ಮೊದಲಾದವರಿದ್ದರು.