ಕೋವಿಡ್ ಭೀತಿ ಹಿನ್ನೆಲೆ ಚನ್ನರಾಯಪಟ್ಟಣದ ಸಹೃದಯಿ ಬ್ರದರ್ಸ್ ಟೀಮ್ ಯುವಕರಿಂದ ಸಹಾಯ

0

ಹಾಸನ : (ಹಾಸನ್_ನ್ಯೂಸ್ !, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬ್ರದರ್ಸ್ ಟೀಮಿನ ವತಿಯಿಂದ
ದಿನಾಂಕ 29/5/2021.ರಸ್ತೆ ಬದಿ ಇರುವ ಜನರಿಗೆ ವಾಹನ ಚಾಲಕರಿಗೆ ಹಾಗೂ ನಿರ್ಗತಿಕರಿಗೆ 200 ಊಟದ ಪ್ಯಾಕ್ ನೀಡಿದರು
ದಿನಾಂಕ 1/6/2021 ರಂದು ಗುಡಿಸಲು ವಾಸಿಗಳಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ವಲಸೆ ಕಾರ್ಮಿಕರಿಗೆ ನೂರಕ್ಕೂ ಹೆಚ್ಚು ಆಹಾರ ಸಾಮಗ್ರಿಗಳು ದಿನ ಉಪಯೋಗಿ ಸಾಮಾಗ್ರಿಗಳನ್ನು ನೀಡಿರುವುದು,
ದಿನಾಂಕ‌ 5/6/2021ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 50 ಗಿಡಗಳನ್ನು ಶಾಲಾ ಆವರಣಗಳಲ್ಲಿ ನೆಡುವ ಮುಖಾಂತರ ಜನಸಾಮಾನ್ಯರಿಗೆ ಬಡವರಿಗೆ ಔಷಧಿ ಸಾಮಗ್ರಿಗಳನ್ನು ನೀಡಿರುವುದು,
ದಿನಾಂಕ 9/6/2021 ರಂದು ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಪೌರಕಾರ್ಮಿಕರಿಗೆ ಹೊರರಾಜ್ಯದ ನಿರಾಶಿತ ಕಾರ್ಮಿಕರಿಗೆ ಐನೂರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಿರುವುದು.
ಬ್ರದರ್ಸ್‌ ಟೀಮಿನ ಕಾರ್ಯಕ್ರಮವಾಗಿರುತ್ತದೆ
ಸ್ವಾರ್ಥ ಇಲ್ಲದ ನಿಸ್ವಾರ್ಥ ಸೇವೆ ಬ್ರದರ್ಸ್ ಟೀಮಿನ ಗುರಿ ಕೋವಿಡ್ ಮುಕ್ತ ಭಾರತಕ್ಕೆ ಎಲ್ಲರೂ ಸಹಕರಿಸೋಣ ಎಂದು ಈ ಮೂಲಕ ಸಂದೇಶ ನೀಡಿದ ಸಹೃದಯಿ ಯುವ ಚನ್ನರಾಯಪಟ್ಟಣ ತಂಡ ಕ್ಕೆ ಹಾಸನ ಜನತೆಯ ಪರವಾಗಿ ಧನ್ಯವಾದಗಳು

LEAVE A REPLY

Please enter your comment!
Please enter your name here