ಹಾಸನ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಾಳೆನಹಳ್ಳಿ ಹೇಮಾವತಿ ಕಾಲುವೆಯಲ್ಲಿ ಮಗುವಿನ ಮೃತ ದೇಹ ಪತ್ತೆಯಾಗಿದೆ. ಕುಂಚೆವುಕೊಪ್ಪಲು ಗ್ರಾಮದ ಕೆರೆಯಲ್ಲಿ ತಾಯಿ ಭವ್ಯಾರ ಮೃತದೇಹ ಪತ್ತೆಯಾಗಿದೆ., ಮೂರೂವರೆ ವರ್ಷದ ಹಿಂದೆಯಷ್ಟೇ ಗೆಜ್ಜೆಗಾರಹಳ್ಳಿಯ ಭವ್ಯಾ ಹಾಗೂ ಕುಂಚೇವು ಕೊಪ್ಪಲು ಶ್ರೀನಿವಾಸ್ ನಡುವೆ ವಿವಾಹವಾಗಿತ್ತು. ಆದರೆ,
ಶ್ರೀನಿವಾಸ್ ಈ ನಡುವೆ ಕೌಟುಂಬಿಕ ಕಲಹ ಕೇಳಿಬಂದಿದೆ. ಇದರಿಂದ ತೀವ್ರವಾಗಿ ಮನನೊಂದ ತಾಯಿ ತನ್ನ ಮಗುವಿನ ಜತೆ ಹೇಮಾವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದ್ದು , ಎರಡು ದಿನಗಳ ಹಿಂದೆ ಮಗುವಿನ ಜತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ ., ಮೃತರಾದವರ ಹೆಸರು ವಯಸ್ಸು ಇಂತಿದೆ , ಭವ್ಯಾ (23), ವೇದಾಂತ್ (3) ಮೃತ ದುರ್ದೈವಿಗಳು