State News

ಚಾರ್ಮಾಡಿ ಘಾಟಿಯಲ್ಲಿ ಇಂದಿನಿಂದ ಯಾವ ವಾಹನಗಳು ತೆರಳಬಹು / ಯಾವ ವಾಹನಗಳು ತೆರಳುವಂತಿಲ್ಲ ಮಾಹಿತಿ ಇಲ್ಲಿದೆ 👇

By

April 10, 2021

ಚಾರ್ಮಾಡಿಯಲ್ಲಿ ಕೆಲವುಲಘು ವಾಹನ ಸಂಚಾರಕ್ಕೆ ಅನುಮತಿ

ಹಾಸನ / ಚಿಕ್ಕಮಗಳೂರು / ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟ್‌ನ 76 ಕಿ.ಮೀನಿಂದ 86.20 ಕಿ.ಮೀ ತನಕ ಲಘು ಹಾಗೂ ಭಾರಿ ವಾಹನಗಳ ಸಂಚಾರಕ್ಕೆ ಶುಕ್ರವಾರ ದಿಂದ ಜಾರಿಗೆ ಬರುವಂತೆ ಅನುಮತಿ ನೀಡಿ, ಭಾರಿ ವಾಹನಗಳ ಸಂಚಾರವನ್ನು నిರ್ಬಂಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಸಂಚರಿಸಬಹುದಾದ ಲಘು ವಾಹನ ಗಳು(ಗುಂಪು-ಎ): ಸಾರ್ವಜನಿಕರು ಸಂಚರಿಸುವ ಕೆಎಸ್‌ಆರ್‌ಟಿಸಿ ಕೆಂಪು ಬಸ್ಸು, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೋ ಟ್ರಾವೆಲರ್, ಆಂಬುಲೆನ್ಸ್ , ಕಾರು, ಜೀಪು, ವ್ಯಾನ್, XUV(ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು.

ನಿರ್ಬಂಧಿಸಲಾದ ಭಾರಿ ವಾಹನಗಳು (ಗುಂಪು–ಬಿ): ಬುಲೆಟ್ ಟ್ಯಾಂಕರ್ ಗಳು, ಷಿಪ್ ಕಾರ್ಗೋ ಕಂಟೈನರ್ ಹಾಗೂ ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್, ಮಲ್ಟಿ ಆಕ್ಸಲ್ ಟ್ರಕ್ , ಟ್ರಕ್ ಟ್ರೆಲರ್ , KSRTC ರಾಜಹಂಸ ಮತ್ತು ಎಲ್ಲ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನ ಗಳು. ಈ ರಸ್ತೆಯಲ್ಲಿ ಅವಶ್ಯವಿರುವ ಕಡೆ ಸೂಚನಾಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿ ನೇಮಕ ಗೊಳಿಸಲು ಪೊಲೀಸ್ ವರೀಷ್ಟಾಧಿಕಾರಿ ಅವರಿಗೆ ತಿಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. #charmadighattoday