ಇತ್ತೀಚಿನ ಸಂಶೋಧನೆ ಕಾಫಿ ಬಗ್ಗೆ ಏನು ಹೇಳಿತು? ತಿಳಿಯಬೇಕೇ?

0

ಮುಂಜಾನೆ ಎದ್ದಕೂಡಲೇ ಬಹುತೇಕ ಮನೆಗಳಲ್ಲಿ  ಕೇಳುವ ಶಬ್ದ ‘ ಅಮ್ಮ ಕಾಫಿ’. ಕಾಫಿ ಹಲವರಿಗೆ ಪೆಟ್ರೋಲ್ ಇದ್ದಂತೆ. ಕಾಫಿ ಇಲ್ಲದಿದ್ದರೆ ನಮ್ಮ  ಈ ಗಾಡಿ ಮುಂದೆ ಸಾಗೋಲ್ಲ. ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸುವವರು ಹಲವರಿದ್ದಾರೆ. ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ದಿನಕ್ಕೆ ಮಿತ ಪ್ರಮಾಣದಲ್ಲಿ ಕಾಫಿ ಸೇವಿಸಿವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.  ಶೇ. 53.51 ರಷ್ಟು ಭಾರತೀಯರು ಪ್ರತಿದಿನ ಕಾಫಿ ಸೇವಿಸುತ್ತಾರೆ.

ಹಾಗಿದ್ರೆ ನಿಮಗೆ ಇಷ್ಟವಾದ ಕಾಫಿಯಿಂದ ಆಗುವ ಉಪಯೋಗಗಳನ್ನು ತಿಳಿದುಕೊಳ್ಳಿ

• ತೂಕ ಇಳಿಸಿಕೊಳ್ಳಲು ಸಹಾಯಕಾರಿ:
                     ಕಾಫಿಯಲ್ಲಿ ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಧಿಕ ಪ್ರಮಾಣದಲ್ಲಿದೆ, ಇದು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಲಾಭಕಾರಿ. ಇದರಲ್ಲಿರುವ ಕೆಫಿನ್ ಅಂಶ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆಗೊಳಿಸಲು ಉಪಯೋಗಕಾರಿ ಹಾಗಾಗಿ ತೂಕ ಇಳಿಸಿಕೊಳ್ಳಲು ನೆರವಾಗುವುದು.

• ಮೆದುಳಿನ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ:
                   ಕಾಫಿಯಲ್ಲಿ ಕೆಫಿನ್ ಅಂಶವಿರುವ ಎಲ್ಲರಿಗೂ ತಿಳಿದ ವಿಚಾರ. ಕೆಫಿನ್ ಅಂಶ ನಮ್ಮ ಮೆದುಳನ್ನು ಚುರುಕಾಗಿ ಮಾಡುತ್ತದೆ ಇದರಿಂದ ಮೆದುಳಿನ ಶಕ್ತಿ ಮಟ್ಟವೂ ಹೆಚ್ಚಾಗುತ್ತದೆ ನಮ್ಮ ಮನಸ್ಥಿತಿ ಶಾಂತವಾಗಿರುತ್ತದೆ ಮತ್ತು ಮೆದುಳು ಅನೇಕ ಕಾರ್ಯಗಳನ್ನು ಸುಲಭವಾಗಿ ಮಾಡಲು ಸಹಾಯಮಾಡುತ್ತದೆ.

• ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ:
                      ಕಾಫಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಭಾರಿ ಪ್ರಮಾಣದಲ್ಲಿದೆ. ಹಾಗಾಗಿ ಇದು ಕ್ಯಾನ್ಸರ್ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಉಪಯೋಗವಾಗುತ್ತದೆ. ದಿನದಲ್ಲಿ 2-3 ಕಪ್ ಕಾಫಿ ಕುಡಿದರೆ ಕ್ಯಾನ್ಸರ್ ರೋಗವನ್ನು ದೂರವಿಡಬಹುದು.

• ಟೈಪ್ 2 ಡಯಾಬಿಟಿಸ್ ಸಮಸ್ಯೆಯನ್ನು ತೊಲಗಿಸುತ್ತದೆ:
                  ಕಾಫಿ ಕುಡಿಯುವುದರಿಂದ ಶೇ. 42 ರಷ್ಟು ಟೈಪ್ 2 ಡಯಾಬಿಟಿಸ್ ಬರುವ ಸಂಭವ ಕಡಿಮೆಯಾಗಲಿದೆಯಂತೆ. ಇದರಲ್ಲಿರುವ ಕೆಫೀನ್ ಅಂಶ ಈ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ.

           ಹಾಗಾಗಿ ಮಿತ ಪ್ರಮಾಣದ ಕಾಫಿ ಸೇವನೆ ದೇಹಕ್ಕೆ ಬಹಳ ಒಳ್ಳೆಯದು ಅತಿಯಾಗಿ ಸೇವಿಸಿದರೆ ಅದರಿಂದ ಹಲವಾರು ಅಡ್ಡಪರಿಣಾಮಗಳು ನಮಗೆ ಬರಬಹುದು ಹಾಗಾಗಿ ದಿನಕ್ಕೆ 2- 3 ಕಪ್ ಕಾಫಿ ಕುಡಿದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.

                                                – ತನ್ವಿ. ಬಿ

LEAVE A REPLY

Please enter your comment!
Please enter your name here