ಜಿಲ್ಲೆಯಲ್ಲಿಂದು ಮಾ.15 ಹೊಸದಾಗಿ 16 ಕೋವಿಡ್ ಪ್ರಕರಣಗಳು ಪತ್ತೆ ಹೆಚ್ಚಿನ ಮಾಹಿತಿ 👇 #covidupdateshassan

0

ಹಾಸನ.ಮಾ.15(ಹಾಸನ್_ನ್ಯೂಸ್ !, ಜಿಲ್ಲೆಯಲ್ಲಿಂದು ಹೊಸದಾಗಿ 16 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 28,852 ಏರಿಕೆಯಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ 76 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ 28,308 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 468 ಮಂದಿ ಸಾವನ್ನಪ್ಪಿದಾರೆ.

ಇಂದು ಪತ್ತೆಯಾದ 16 ಕೋವಿಡ್ ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನಲ್ಲಿ  6 ಮಂದಿ, ಅರಸೀಕೆರೆ ತಾಲ್ಲೂಕಿನಲ್ಲಿ  4 ಮಂದಿ  ಅರಕಲಗೂಡು ತಾಲ್ಲೂಕಿನಲ್ಲಿ  2 ಮಂದಿ  ಬೇಲೂರು ತಾಲ್ಲೂಕಿನಲ್ಲಿ  2 ಮಂದಿ ಸಕಲೇಶಪುರ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಒಬ್ಬರಿಗೆ  ಕೋವಿಡ್ ಪ್ರಕರಣಗಳು ದೃಡಪಟ್ಟಿದೆ. -ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್

LEAVE A REPLY

Please enter your comment!
Please enter your name here