ಮಾನ್ಯ ಶಾಸಕರ ಮನವಿಗೆ ಸ್ಪಂದಿಸಿ ಇಂದು ‘ಹಾಸನಕ್ಕೆ 3700 ಕೋ ವ್ಯಾಕ್ಸಿನ್’ ಒದಗಿಸಿದ ರಾಜ್ಯ ಸರ್ಕಾರ,

0

ಕೊರೋನಾ ಮಹಾಮಾರಿ ವಿರುದ್ಧ ನಿರಂತರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ ಸಾರಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕೋವಿಡ್ ಲಸಿಕಾ ಅಭಿಯಾನ ಮೊದಲನೇ ಹಂತವು ಯಶಸ್ವಿಯಾಗಿ ಸಾಗುತ್ತಿದ್ದು, ಅದರಂತೆ ಮುಂದುವರೆದು ಹಾಸನದ ಮಾನ್ಯ ಶಾಸಕರಾದ ಪ್ರೀತಮ್ ಜೆ. ಗೌಡರವರು

ಹಾಸನಕ್ಕೆ ಕೋ ವ್ಯಾಕ್ಸಿನ್ ತುರ್ತಾಗಿ ಬೇಕಾಗಿರುವ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಹಾಸನಕ್ಕೆ 3700 ಕೋ ವ್ಯಾಕ್ಸಿನ್ ಅನ್ನು ರಾಜ್ಯ ಸರ್ಕಾರವು ಇಂದು ನೀಡಿದೆ. ಇದರಿಂದಾಗಿ ಹಾಸನದಲ್ಲಿ ಮೊದಲ ಹಂತದ ಕೋ ವ್ಯಾಕ್ಸಿನ್ ಹಾಕಿಸಿಕೊಂಡು 2ನೇ ಲಸಿಕೆಗೆ ಕಾಯುತ್ತಿದ್ದವರು ಇಂದಿನಿಂದ ಅಂದರೆ 05/05/2021 2ನೇ ಬಾರಿ ಕೋವಿಡ್ ವ್ಯಾಕ್ಸಿನ್ ಪಡೆಯಲು ಅರ್ಹರಿದ್ದವರು ಕೋವಿಡ್ ವ್ಯಾಕ್ಸಿನ್‌ ಕೇಂದ್ರಕ್ಕೆ ತೆರಳಿ ಪಡೆಯಬಹುದಾಗಿದೆ ಹಾಗೂ ತುರ್ತಾಗಿ ಕೋ ವ್ಯಾಕ್ಸಿನ್

ಅನ್ನು ಒದಗಿಸಿದ ಮಾನ್ಯ ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರಿಗೆ ಹಾಸನದ ಜನತೆಯ ಪರವಾಗಿ ಮಾನ್ಯ ಶಾಸಕರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here