ಗಮನಿಸಿ : ಖಾಸಗಿ ಆಸ್ಪತ್ರೆ ಗಳ CT ಸ್ಕಾನ್ 1,500₹ / ಎಕ್ಸ್ ರೇ ದರ 250₹ ಸರ್ಕಾರಿ ಆಸ್ಪತ್ರೆ ಗಳಲ್ಲಿ ” ಉಚಿತ ” ಹೆಚ್ಚಿನ ಮಾಹಿತಿ ಹೀಗಿದೆ 👇

0

ಖಾಸಗಿ ಆಸ್ಪತ್ರೆಗಳಲ್ಲಿ C T ಸ್ಕ್ಯಾನಿಂಗ್ ಗೆ 1,500₹ ದರವನ್ನು ನಿಗದಿಗೊಳಿಸಲಾಗಿದೆ.
• ಎಕ್ಸ್ ರೇ ಗೆ 250₹ ದರವನ್ನು ನಿಗಧಿಪಡಿಸಲಾಗಿದೆ.

• ನಿಗದಿಪಡಿಸಿದ್ದಕ್ಕಿಂದ ಹೆಚ್ಚಿನ ಹಣ ಪಡೆದರೆ  ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಖಡಕ್ ಎಚ್ಚರಿಕೆ 

ಈ ಕುರಿತಂತೆ ಅವರು ಆದೇಶ ಹೊರಡಿಸಿದ್ದು, ಕೆಲ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿರುತ್ತದೆ

• ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ.ಸ್ಕ್ಯಾನಿಂಗ್ ಗಾಗಿ ಒಂದೂವರೆ ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ ನೆನಪಿರಲಿ

ಇದೇ ಸಂದರ್ಭದಲ್ಲಿ ಎಕ್ಸ್-ರೇ ಗೂ ದರವನ್ನು ರಾಜ್ಯ ಸರ್ಕಾರ ನಿಗಧಿ ಪಡಿಸಿದ್ದು, ರೂ.250 ಮಾತ್ರ

ಸರಕಾರಿ ವ್ಯವಸ್ಥೆ ಅಡಿ ಸ್ಕ್ಯಾನಿಂಗ್ ಅನ್ನು ಉಚಿತವಾಗಿ ಮಾಡಲಾಗುತ್ತಿದೆ. ಸಾರ್ವಜನಿಕರು ಸರಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು – ಸಚಿವ ಸುಧಾಕರ್ ಮನವಿ

” ಇತ್ತೀಚೆಗೆ ಅನೇಕ ಪ್ರಕರಣಗಳಲ್ಲಿ ಕೊರೊನಾ ಸೋಂಕು ದೃಢಪಡಿಸಲು ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ ಎಕ್ಸ್ -ರೇ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ/ಲ್ಯಾಬ್ ಗಳಲ್ಲಿ ಸಿಟಿ ಸ್ಕ್ಯಾನ್ ಗೆ ಗರಿಷ್ಠ 1,500 ಹಾಗೂ ಡಿಜಿಟಲ್ ಎಕ್ಸ್ – ರೇಗೆ ಗರಿಷ್ಠ 250 ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ” – ಕೆ‌.ಸುಧಾಕರ್ ಆರೋಗ್ಯ /ವೈದ್ಯಕೀಯ ಶಿಕ್ಷಣ ಮಂತ್ರಿ

LEAVE A REPLY

Please enter your comment!
Please enter your name here