ಚಿಕಿತ್ಸೆಗಾಗಿ ಬಂದಂತಹ ರೋಗಿಗಳ ಸಮ್ಮುಖದಲ್ಲಿ ರೋಗಿಗಳಿಗೆ ಕಲ್ಪಿಸಲಾಗುವ ಸೌಲಭ್ಯಗಳನ್ನು ವಿಸ್ತಾರವಾಗಿ ತಿಳಿಸಿದ – ಡಾ. ಮಮತಾ (ಸರ್ಕಾರಿ ಆರೋಗ್ಯ ಅಧಿಕಾರಿ )

0

ಪ್ರಾಥಮಿಕ ಆರೋಗ್ಯ ಕೇಂದ್ರ, ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ(ಹೆಚ್ ಆರ್ ಎಸ್) ಮತ್ತು ಗ್ರಾಮ ಪಂಚಾಯಿತಿ ಅರೇಹಳ್ಳಿಯ ಸಹಯೋಗದಿಂದ ಇಂದು (10 ಮೇ 2021)ಕೋವಿಡ್ ಕಾಯಿಲೆಗೆ ತುತ್ತಾದಂತಹ ರೋಗಿಗಳ ಚಿಕಿತ್ಸೆಗಾಗಿ

ಒಂದು ಪ್ರತ್ಯೇಕ ವಿಭಾಗವನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗವಿರುವ ಅರೇಹಳ್ಳಿಯ ಸರಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ

ಸರಕಾರಿ ಆರೋಗ್ಯ ಅಧಿಕಾರಿಗಳಾದ ಡಾ|| ಮಮತಾರವರು ಚಿಕಿತ್ಸೆಗಾಗಿ ಬಂದಂತಹ ರೋಗಿಗಳ ಸಮ್ಮುಖದಲ್ಲಿ ರೋಗಿಗಳಿಗೆ ಕಲ್ಪಿಸಲಾಗುವ ಸೌಲಭ್ಯಗಳನ್ನು ವಿಸ್ತಾರವಾಗಿ ತಿಳಿಸಿದರು.

ಶ್ರೀ ಸಂತೋಷ್ ಪಿ ಡಿ ಒ ಅರೇಹಳ್ಳಿ ಮತ್ತು ಪಂಚಾಯಿತಿ ಸಿಬ್ಬಂದಿಗಳು, ಹೆಚ್ ಆರ್ ಎಸ್ ನ ಹಾಸನ ವಲಯ ಸಂಚಾಲಕರಾದ ಮುಜೀಬುರ್ರಹ್ಮಾನ್ ಮತ್ತು ಕಾರ್ಯಕರ್ತರು, ಅರೇಹಳ್ಳಿ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here