ಜಿಲ್ಲೆಯಲ್ಲಿಂದು ಹೊಸದಾಗಿ 7 ಪ್ರಕರಣಗಳು ಪತ್ತೆ | ಜಿಲ್ಲಾಸ್ಪತ್ರೆಯಲ್ಲಿ 64 ಮಂದಿ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ☑

0

ಹಾಸನ : ಮಾ 02 (ಹಾಸನ್_ನ್ಯೂಸ್ !, ಜಿಲ್ಲೆಯಲ್ಲಿಂದು ಹೊಸದಾಗಿ 7 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 28,741 ಏರಿಕೆಯಾಗಿದೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ 64 ಮಂದಿ ಸಕ್ರಿಯ ಸೋಂಕಿತರು ಮಾತ್ರ ಹಾಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ 28,210 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 467 ಮಂದಿ ಸಾವನ್ನಪ್ಪಿದಾರೆ.

ಇಂದು ಪತ್ತೆಯಾದ 7 ಕೋವಿಡ್ ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನಲ್ಲಿ 3,  ಅರಕಲಗೂಡು ತಾಲ್ಲೂಕಿನಲ್ಲಿ  2 ಮಂದಿಗೆ, ಚನ್ನರಾಯಪಟ್ಟಣ ಹಾಗೂ   ಬೇಲೂರು ತಾಲ್ಲೂಕಿನಲ್ಲಿ ತಲಾ ಒಬ್ಬರಿಗೆ   ಕೋವಿಡ್ ದೃಡಪಟ್ಟಿದೆ – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್

LEAVE A REPLY

Please enter your comment!
Please enter your name here