ಸಾಮಾಜಿಕ ಜಾಲತಾಣದ ಮೂಲಕ ಫ್ರೆಂಡ್‌ ಆಗಿ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಹಾಸನದ ಮಂಜುಳಾ ಹಾಗೂ ಪತಿ ವಿಜಯಪುರ ಪೊಲೀಸರ ಬಲೆಗೆ

0

ವಿಜಯಪುರ ಜಿಲ್ಲೆಯ ಯುವಕನೊಬ್ಬನಿಗೆ ಹಾಸನದ ಫೇಸ್‌ಬುಕ್‌ ಗೆಳತಿಯಿಂದ ಉಂಟಾಗಿದ್ದ 40 ಲಕ್ಷ ರೂ. ಪಂಗನಾಮ ಪ್ರಕರಣದ ಆರೋಪಿ ಮಹಿಳೆಯನ್ನು ವಿಜಯಪುರ ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ.,ಸಾಮಾಜಿಕ ಜಾಲತಾಣದ ಮೂಲಕ ಫ್ರೆಂಡ್‌ ಆಗಿ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಹಾಸನದ ಮಂಜುಳಾ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಆದರೆ, ಈ ವಂಚನೆಯ ಹಿಂದೆ

ಗಂಡನ ಕೈವಾಡವಿದೆ ಎಂಬ ಸತ್ಯ ಹೊರಬಂದಿದ್ದು, ಇಡೀ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.ವಿಜಯಪುರ ಮೂಲಕ ಯುವಕನೊಬ್ಬ ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದ ಅವನಿಗೆ 30 ಸಾವಿರ ಸಂಬಳ ಬರುತ್ತಿತ್ತು. ಈತನಿಗೆ ಫೇಸ್‌ಬುಕ್‌ ಮೂಲಕ ಫ್ರೆಂಡ್‌ಶಿಪ್‌ ರಿಕ್ವೆಸ್ಟ್‌ ಕಳುಹಿಸಿ ಪರಿಚಯ ಮಾಡಿಕೊಂಡ ಹಾಸನ ಮೂಲದ ಮಂಜುಳಾ ಪ್ರೀತಿಯ ನಾಟಕವಾಡಿದ್ದಳು. ತಾನು ಐಎಎಸ್‌ ಓದುತ್ತಿರುವುದಾಗಿ ತಿಳಿಸಿ ಲಕ್ಷ ಲಕ್ಷ ಹಣವನ್ನು ಯುವಕನಿಂದ ಪಡೆದಿದ್ದಳು. ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ರೂ. ಹಣ, ಒಂದು ಪ್ಲಾಟ್ ಸೇರಿ ಎಲ್ಲವನ್ನು ಮಾರಿ ಹಣ ಕಳುಹಿಸಿದ್ದನು. ಹೀಗೆ ಹಣಕ್ಕಾಗಿ ಪೀಡಿಸುವುದು ಹೆಚ್ಚಾದಾಗ

ನಾನು ಆನ್ಲೈನ್ ವಂಚನೆಗೆ ಒಳಗಾಗಿದ್ದೇನೆ ಎಂದು ವಿಜಯಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದನು,ಎರಡು ವಾರದಲ್ಲಿ ಪ್ರಕರಣ ಬೇಧಿಸಿದ ಪೊಲೀಸರು: ಕಳೆದ ನ.15ರಂದು ವಂಚನೆಗೊಳಾದ ಯುವಕ ದೂರು ದಾಖಲಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದರು. ಸಾಮಾಜಿಕ ಜಾಲತಾಣದ ಜಾಡು ಹಾಗೂ ಪೋಲನ್‌ ನಂಬರ್ ಟ್ರೇಸ್‌ ಮಾಡಿಕೊಂಡು ಹೋದ ಪೊಲೀಸರು ಎರಡು ವಾರದಲ್ಲಿ ಹಾಸನದ ಬೆಡಗಿ ಮಂಜುಳಾ ಅವರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಫೇಸ್‌ಬುಕ್‌ ಮೂಲಕ ವಂಚನೆ ಮಾಡಿದ ಸ್ವಾಮಿ ಮತ್ತು ಮಂಜುಳಾ ದಂಪತಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ದಾಸರಹಳ್ಳಿ ಗ್ರಾಮದವರು. ಗಂಡ, ಹೆಂಡತಿ‌ ಸೇರಿಯೆ ವಿಜಯಪುರ ಸಿಂದಗಿ ಪಟ್ಟಣದ ಪರಮೇಶ್ವರ್ ಹಿಪ್ಪರಗಿ ಎಂಬಾತನಿಗೆ ವಂಚನೆ ಮಾಡಿದ್ದಾರೆ. ಬೆತ್ತಲೆ ಸ್ನಾನ ಮಾಡುವಂತೆ ಒತ್ತಾಯಿಸಿ ವಂಚಕಿ

ವಿಡಿಯೋ ಮಾಡಿಕೊಂಡಿದ್ದಳು. ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಇಟ್ಟು ಹಂತ ಹಂತವಾಗಿ ಲಕ್ಷಾಂತರ ರೂ. ಹಣವನ್ನು ಕಿತ್ತುಕೊಂಡಿದ್ದಾರೆ, ಪತ್ನಿಯ ಕಾರ್ಯಕ್ಕೆ ಗಂಡನಿಂದ ಸಾಥ್: ಫೇಸ್‌ಬುಕ್‌ ಮೂಲಕ ಗೆಳತಿಯಾಗಿ ಯುವಕನಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಅದೇನೆಂದರೆ ಇಡೀ ವಂಚನೆಯ ಹಿಂದೆ ಫೇಸ್‌ಬುಕ್‌ ಗೆಳತಿಯ ಗಂಡನ ಕೈವಾಡವೂ ಇದೆ ಎಂಬುದು ತಿಳಿದುಬಂದಿದೆ. ವಂಚಕಿಯ ವಿಚಾರಣೆ ವೇಳೆ ತನ್ನ ಗಂಡನೂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಹಿಳೆ ಬಾಯಿ ಬಿಟ್ಟಿದ್ದಾರೆ. ಆಕೆಯ ಪತಿ ಸ್ವಾಮಿ ಹಾಗೂ ತಾನು ಸೇರಿಯೆ ಯುವಕನ ಬೆತ್ತಲೆ ಪೋಟೋ ಇಟ್ಟುಕೊಂಡು ವಂಚನೆ ಮಾಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ತಾನು ಐಎಎಸ್ ಮಾಡುತ್ತಿರುವುದಾಗಿ ಹೇಳಿ ಪರಮೇಶ್ವರ ಗೆಳೆತನ ಮಾಡಿದ್ದ ಹಾಸನದ ಮಂಜುಳಾ, ಅವರನ್ನು ವಂಚಿಸಿ 40 ಲಕ್ಷ ಹಣವನ್ನು ತನ್ನ ಪೆಡರಲ್ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಳು ಎಂದು ಹೇಳಿದ್ದಾರೆ, ವಂಚನೆ ಹಣದಲ್ಲಿ ಐಷಾರಾಮಿ ಜೀವನ: ವಿಜಯಪುರ ಯುವಕನಿಂದ ವಂಚನೆ ಮೂಲಕ ವಸೂಲಿ ಮಾಡಿದ 40 ಲಕ್ಷ ರೂ. ಹಣದಲ್ಲಿ ಆರೋಪಿ ಮಂಜುಳಾ

100 ಗ್ರಾಂ ಬಂಗಾರ, ಹುಂಡೈ ಕಾರು, ಬೈಕ್ ಖರೀದಿ ಮಾಡಿದ್ದಳು. ಜೊತೆಗೆ, ಆ ಯುವಕ ಕಳುಹಿಸುತ್ತಿದ್ದ ಹಣದಲ್ಲಿಯೇ ಅವರ ಊರಲ್ಲಿ ಹೊಸದಾದ ಮನೆಯೊಂದನ್ನು ನಿರ್ಮಾಣ ಮಾಡುತ್ತಿದ್ದಳು. ಆದರೆ, ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಯ್ಯಲು ಪ್ರಯತ್ನಿಸಿದ ಮಂಜುಳಾ ಹಾಗೂ ಪತಿಯ ಬಂಧನದ ಬಳಿಕ ಅಸಲಿ ಪ್ರಕರಣ ಬಯಲಿಗೆ ಬಂದಿದೆ., ವಕನ ಬೆತ್ತಲೆ ಪೋಟೋ ಇಟ್ಟುಕೊಂಡು ಹಾಸನದ ಪೇಸ್ಬುಕ್ ಗೆಳತಿಯಿಂದ ವಂಚನೆ ಎಸಗಿದ ಪ್ರಕರಣ ಸಂಬಂಧ ಮಹಿಳೆಯನ್ನು ವಿಜಯಪುರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ

ಆಕೆ ಪತಿಯ ಬಂಧನಕ್ಕೂ ತನಿಖೆ ಮುಂದುವರಿದಿತ್ತು‌,‌ , ವಿಜಯಪುರ ಜಿಲ್ಲೆಯ ಯುವಕನ ಬೆತ್ತಲೆ ಪೋಟೋ ಇಟ್ಟುಕೊಂಡು ಹಾಸನ (Hassan) ದ ಪೇಸ್ಬುಕ್ ಗೆಳತಿಯಿಂದ ಲಕ್ಷಾಂತರ ರೂಪಾಯಿ ವಂಚನೆ (Cheating) ಎಸಗಿದ ಪ್ರಕರಣದ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಹಿಂದೆ ವಂಚಕಿಯ ಗಂಡನ ಕೈವಾಡವೂ ಇರುವುದು ಬೆಳಕಿಗೆ ಬಂದಿತು , ಮಹಿಳೆಯನ್ನ ಬಂಧಿಸಿದ ವಿಜಯಪುರ ಸಿಇಎನ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸತ್ಯ ಬಾಯಿಬಿಟ್ಟ ವಂಚಕಿ, ಯುವನಿಗೆ ಬೆತ್ತಲೆ ಸ್ನಾನ ಮಾಡುವಂತೆ ಒತ್ತಾಯಿಸಿ ವಿಡಿಯೋ ಕಾಲ್ ಮಾಡಿ ಸ್ಕ್ರೀನ್ ಶಾಟ್ ತೆಗೆದು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಹಾಗೂ ಈ ಪ್ರಕರಣದಲ್ಲಿ ತನ್ನ ಗಂಡನೂ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ದಾಸರಹಳ್ಳಿ ಗ್ರಾಮದ ದಂಪತಿಯಾಗಿರುವ ಮಂಜುಳಾ ಮತ್ತು ಸ್ವಾಮಿ ಒಟ್ಟು ಸೇರಿ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪರಮೇಶ್ವರ್ ಹಿಪ್ಪರಗಿ ಎಂಬಾತನಿಗೆ ವಂಚನೆ ಮಾಡಿದ್ದಾರೆ. ಆರಂಭದಲ್ಲಿ ಫೇಸ್ಬುಕ್ನಲ್ಲಿ ಪರಮೇಶ್ವರ ಹಿಪ್ಪರಗಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ ಮಂಜುಳಾ,

ಆತನ ‌ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಾಳೆ. ದಿನಗಳು ಉರುಳುತ್ತಿದ್ದಂತೆ ಅದನ್ನೇ ಬಂಡವಾಳ ಮಾಡಿಕೊಂಡು‌ ಹಣ ಪೀಕಿಸಲು ಯೋಜನೆ ರೂಪಿಸಿದ್ದಾಳೆ., ಸಲುಗೆಯಿಂದ ಮಾತನಾಡುತ್ತಿದ್ದ ಮಂಜುಳಾ, ಬೆತ್ತಲೆ ಸ್ನಾನ ಮಾಡುವಂತೆ ಯುವಕನನ್ನು ಒತ್ತಾಯಿಸಿ ವಿಡಿಯೋ ಕಾಲ್ ಮಾಡಿ ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದಾಳೆ. ಬಳಿಕ ಫೋಟೋ ಮುಂದಿಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಮಾನಕ್ಕೆ ಅಂಜಿದ ಪರಮೇಶ್ವರ

39,04,870 ಹಣವನ್ನು ಫೆಡರಲ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾನೆ. ಪರಮೇಶ್ವರ ಕಳುಹಿಸಿದ ಹಣದಲ್ಲಿ 100 ಗ್ರಾಂ ಬಂಗಾರ, ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಳು, ಜೊತೆಗೆ ದಾಸರಹಳ್ಳಿ ಗ್ರಾಮದಲ್ಲಿ ಎರಡು ಅಂತಸ್ತಿನ ಮನೆ ನಿರ್ಮಾಣ ಮಾಡುತ್ತಿದ್ದಳು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ., ಪರಮೇಶ್ವರ ಅವರಿಗೆ ವಿಡಿಯೋ ಕಾಲ್‌ ಮಾಡಿ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಒತ್ತಾಯಿಸಿ ಅವನು ಸ್ನಾನ ಮಾಡುವಾಗ ವಿಡಿಯೊ ಕಾಲ್‍ನ ಸ್ಕ್ರಿನ್‍ಶಾಟ್ ಪಡೆದು, ಹಣ ಕೊಡು ಇಲ್ಲದಿದ್ದರೆ ನಿನ್ನ ಬೆತ್ತಲೆ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಿನ್ನ ಮಾನ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಹೆದರಿಸಿದ್ದಾಳೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ , ವಂಚನೆ ಪ್ರಕರಣ ಸಂಬಂಧ ಪರಮೇಶ್ವರ ಅವರು ವಿಜಯಪುರ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವಿಶೇಷ ತನಿಖಾ ತಂಡವನ್ನು ರಚಿಸಿ ಆರೋಪಿಯ ಬಂಧನಕ್ಕೆ ತನಿಖೆ ಆರಂಭಿಸಿದ್ದರು. ತನಿಖಾ ತಂಡವು ಆರೋಪಿತರ ಮೊಬೈಲ್ ಲೊಕೇಶನ್ ಹಾಗೂ

ಮೊಬೈಲ್ ಸಿಮ್ ಮಾಹಿತಿ ಹಾಗೂ ಬ್ಯಾಂಕ್ ಕೆವೈಸಿ ಮಾಹಿತಿ ಕಲೆ ಹಾಕಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಮಂಜುಳಾಗೆ ಸಹಕಾರ ನೀಡಿದ ಆಕೆಯ ಪತಿ ಸ್ವಾಮಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here