ಕೊಲೆ ಮಾಡಿ ಪೊಲೀಸರ ಕಣ್ತಪ್ಪಿಸಿ ಬಸ್ ನಲ್ಲಿ ತೆರಳುವಾಗ ತಗಲಾಕ್ಕೊಂಡ ಕೊಲೆಗಾರ

0

ಹಾಸನ ನಗರದ ಪೆನ್‌ಷನ್ ಮೊಹಲ್ಲಾದ ನಿವಾಸಿಗಳಾದ ಆನಂದ್ ಉರುಫ್ (ಕಯಃಕಯಃ) ಮತ್ತು ಡಿಂಪಲ್ ಎಂಬ ದಂಪತಿಗಳು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇರೆ ಬೇರೆ ಜೀವನ ನಡೆಸುತ್ತಿದ್ದರು , ಆದರೆ

ಇವರು ಪದೇ ಪದೇ ತಮ್ಮ ಮಗುವಿನ ವಿಚಾರಕ್ಕಾಗಿ ಜಗಳ ನಡೆಸುತ್ತಿದ್ದರು. ಕಳೆದ ಡಿ.3 ರಂದು ಸಂಜೆ 6.30ರ ಸಮಯದಲ್ಲಿ ಆಟೋ ಚಾಲಕನಾಗಿರುವ ಪತಿ ಆನಂದ್ ತಮ್ಮ ಪತ್ನಿ ಡಿಂಪಲ್ ಅವರನ್ನು ಆಟೋದಲ್ಲಿ ಕರೆದುಕೊಂಡು ಚನ್ನರಾಯಪಟ್ಟಣ ಮಾರ್ಗ ತೆರಳುತ್ತಿದ್ದ ವೇಳೆ ಆಕೆಯನ್ನು ರಾಡಿನಿಂದ ಹೊಡೆದು ಕೊಲೆ ಮಾಡಿ ಚೀಲದಲ್ಲಿ ಯಾರಿಗೂ ಗುರುತು ಸಿಗದಂತೆ ಬಿಸಾಡಿ ಹೋಗುವ ಆ ಸಂದರ್ಭದಲ್ಲಿ

ಸ್ಥಳೀಯ ಸಾರ್ವಜನಿಕರು ನೋಡಿ , ಅಲ್ಲಿಂದ ಗಾಬರಿಯಿಂದ ಆ ಜನ ಕಂಡ ತಕ್ಷಣ ಮೃತ ದೇಹವನ್ನು ಬಿಟ್ಟು ಪರಾರಿಯಾಗಿದ್ದನಂತೆ… ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಹಿಳೆಯ ಗುರುತನ್ನು ಪತ್ತೆ ಹಚ್ಚಿ ನಂತರ ಆರೋಪಿಯನ್ನು ಹುಡುಕಲು 4 ವಿಶೇಷ ತಂಡಗಳನ್ನು ರಚಿಸಲಾಗಿ.,  ಆರೋಪಿ ಆನಂದ್ ಉರುಫ್ ಕಯಃಕಯಃ ನನ್ನು ಪೊಲೀಸರಿಗೆ ತಲೆ ಮರೆಸಿಕೊಂಡು ಬಸ್ಸಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ.,

ವಶಕ್ಕೆ ಪಡೆದು ಸಮಗ್ರ ತನಿಖೆ ನಡೆಸುತ್ತಿದೆ , ಈ ಇಬ್ಬರು ಮದುವೆಯಾಗಿ ಒಂದು ಚಿಕ್ಕಮಗುವಿದ್ದು, ಸಂಸಾದರಲ್ಲಿ ಕಲಹವಾದ ಹಿನ್ನೆಲೆಯಲ್ಲಿ ಇಬ್ಬರು ಪ್ರತ್ಯೇಕ ಜೀವನ ನಡೆಸುತ್ತಿದ್ದರು. ಮಗು ತಂದೆಯ ಜೊತೆ ಇದ್ದು, ಅದನ್ನು ನೋಡಲು ಆಗಾಗ ಬರುತ್ತಿದ್ದ ಪತ್ನಿಯೊಂದಿಗೆ ಜಗಳವಾಡುತ್ತಿದ್ದರಂತೆ… ಕುಪಿತಗೊಂಡ ಗಂಡ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here