ಹಾಸನ ತಾಲೂಕಿನ ಪಾರಸನಹಳ್ಳಿಯಲ್ಲಿ ಪ್ರೇಮಿ ಜೊತೆಗಿದ್ದ ವಿಚ್ಚೇದಿತ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಪ್ರಕರಣ ಸಂಬಂಧ ಅವಿನಾಶ್ ಎಂಬುವವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದರು. , ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಮೂಲದ ಕಾವ್ಯ (25) ಮೃತಪಟ್ಟ ಮಹಿಳೆಯಾಗಿದ್ದು ಇದೀಗ
ಅವಿನಾಶ್ ಪ್ರೇಯಸಿ ಕಾವ್ಯ ಅವರನ್ನು ಕೊಂದು ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವ ಆರೋಪ ಕೇಳಿ ಬಂದಿದೆ. ಮಗಳನ್ನು ಕೊಲೆ ಮಾಡಿ ಅವಿನಾಶ್ ಎಂಬುವವನೇ ಹೂತು ಹಾಕಿದ್ದಾನೆಂದು ಪೋಷಕರು ಆರೋಪ ಮಾಡಿದ್ದು , ಕಾವ್ಯಳನ್ನು ಮದುವೆಯಾಗುವುದಾಗಿ ಜೊತೆಗಿಟ್ಟುಕೊಂಡಿದ್ದ ಪ್ರಿಯಕರ ಅವಿನಾಶ್ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ. ತಹಸೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಪೊಲೀಸರು ಶವ ಹೊರ ತೆಗೆದು
ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು . ಎರಡು ವರ್ಷಗಳ ಹಿಂದೆ BBM(ಡಿಗ್ರಿ) ಓದುವಾಗ ಪ್ರೀತಿಸಿ ಮದುವೆಯಾಗಿದ್ದ ಕಾವ್ಯ ನಂತರ ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಗಂಡನಿಂದ ವಿಚ್ಚೇಧನ ಪಡೆದಿದ್ದರು , ಬಳಿಕ ಪಾರಸನಹಟ್ಟಿಯ ಅವಿನಾಶ್‌ನನ್ನು ಪ್ರೀತಿಸಿ ಆತನ ಮನೆಯಲ್ಲೇ ವಾಸವಾಗಿದ್ದಳು . ಕಳೆದ ಹದಿನೈದು ದಿನಗಳಿಂದ ಇದ್ದಕ್ಕಿದ್ದಂತೆ
ಕಾವ್ಯ ಕಾಣಿಯಾಗಿದ್ದು ಕಾವ್ಯಳನ್ನು ಕೊಲೆಮಾಡಿ ಹೂತು ಹಾಕಿರೋದಾಗಿ ಹೇಳಲಾಗಿದೆ ಅವಿನಾಶ್‌ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.