ಫೇಸ್ಬುಕ್ ಪರಿಚಯ , ಲಿವಿಂಗ್ ರಿಲೇಶನ್‌ಶಿಪ್‌ ಕೊಲೆಯಲ್ಲಿ ಅಂತ್ಯ

0

ಹಾಸನ : ನಗರದ ಬೇಲೂರು ರಸ್ತೆ, ಗುಡ್ಡೆನಹಳ್ಳಿಯಲ್ಲಿ ವಾಸವಾಗಿರುವ ಸಿರಿ 23 ವರ್ಷ ಎಂಬುವರೆ ಕೊಲೆ ಆಗಿರುವ ದುರ್ಧೇವಿ. ಕೊಲೆ ಮಾಡಿ ಕಣ್ಣು ತಪ್ಪಿಸಿಕೊಂಡಿರುವ ಆದಿ 26 ವರ್ಷ ಎಂದು ತಿಳಿದು ಬಂದಿದೆ. ಕಳೆದ ಒಂದು ತಿಂಗಳಷ್ಟೆ ಗುಡ್ಡೆನಹಳ್ಳಿಯಲ್ಲಿ ಮನೆ ಮಾಡಿಕೊಂಡು ಗಂಡ ಮತ್ತು ಹೆಂಡತಿ ಇಬ್ಬರೂ ಒಂದೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಇಬ್ಬರೂ ಕೆಲಸ ಮಾಡಿಕೊಂಡು ಒಟ್ಟಿಗೆ ಮನೆಗೆ ತೆರಳುತ್ತಿದ್ದರು. ಆದ್ರೆ

ಇಬ್ಬರಲ್ಲಿ ಏನು ವಿರಸ ಉಂಟಾಯಿತೊ ಇಲ್ಲವೇ ಇತರೆ ಕಾರಣಕ್ಕೆ ಇಬ್ಬರಲೂ ವಾಗ್ವಾದ ನಡೆದಿರಬಹುದೆ ಎಂದು ಹೇಳಲಾಗಿದೆ. ಗುರುವಾರದಂದು ಮನೆಯ ಬಾಗಿಲು ಹಾಕಿಕೊಂಡು ಗಂಡನಾದ ಆದಿಯು ತನ್ನ ಹೆಂಡತಿ ಕುತ್ತಿಗೆಗೆ ತಂತಿಯಿಂದ ಬಿಗಿದು ಉಸಿರುಗಟ್ಟಿಸಿ ಸಾಯಿಸಿ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ಗಂಡ ಆದಿಯು ನಂತರ ತನ್ನ ತಂಗಿಗೆ ಕರೆ ಮಾಡಿ ಸಾಯಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಇದಾದ ಬಳಿಕ ತಂಗಿಯು ಈ ಮನೆ ಮಾಲೀಕರಿಗೆ ಕರೆ ಮಾಡಿ ಈ ಮನೆಯಲ್ಲಿ ಆತ್ಮಹತ್ಯೆ ಆಗಿದೆ ಎಂದು ಹೇಳಲಾಗಿದೆ. ಬಂದು ನೋಡಿದಾಗ

ಕೊಲೆ ಆಗಿರುವ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಎಎಸ್ಪಿ ತಮ್ಮಯ್ಯ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಬೆರಳಚ್ಚುಗಾರರು, ಪೊಲೀಸ್ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದರು. ಈವೇಳೆ ಕೆಲ ಮಹತ್ವದ ದಾಖಲೆಗಳು ಸಿಕ್ಕಿದ್ದು, ಆರೋಪಿಯನ್ನು ಶೀಘ್ರದಲ್ಲೆ ಬಂಧಿಸುವ ವಿಶ್ವಾಸವ್ಯಕ್ತಪಡಿಸಿದ್ದಾರೆ ., ಸಿರಿ ಹಾಗೂ ಆದಿ ಇಬ್ಬರೂ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಕೊಲೆ ಮಾಡಿ ಆದಿ ಪರಾರಿ ಆಗಿದ್ದಾನೆ. , ಸಿರಿ ಬೆಂಗಳೂರಿನ ವಿಜಯನಗರ ಮೂಲದವಳಾದರೆ, ಆರೋಪಿ ಆದಿ

ಮಾರನಾಯಕನಹಳ್ಳಿ ಗ್ರಾಮದವನು. ಸಿರಿಸ್‌-ಆದಿ ಎಂಟು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿ, ಒಂದು ತಿಂಗಳ ಹಿಂದಷ್ಟೇ ಗುಡ್ಡೇನಹಳ್ಳಿ ಗ್ರಾಮಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರು ಒಂದೇ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. , ಸದ್ಯ ಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ

ಶ್ವಾನ ದಳ, ಎ‌ಎಸ್‌ಪಿ ತಮ್ಮಯ್ಯ, ಡಿವೈಎಸ್‌ಪಿ ಉದಯ್‌ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here