ದುದ್ದ ಹೊರಹೊಲಯದ ಅರಣ್ಯ ಪ್ರದೇಶದಲ್ಲಿ ಶವ ಪತ್ತೆ , ಕಾಣೆಯಾಗಿದ್ದ ಲಿಖಿತ್ ಇನ್ನಿಲ್ಲ

0

ಹಾಸನ: ಕಿಡ್ನಾಪ್ ಅಗಿದ್ದ ಯುವಕ
ಶವವಾಗಿ ಪತ್ತೆ. , ಹಾಸನ ನಗರದ ಹೊಯ್ಸಳ ನಗರದ ಲಿಖಿತ್ ಗೌಡ ಲೇವಾದೇವಿ ವಿಚಾರಕ್ಕೆ ಕಿಡ್ನಾಪ್ ಅಗಿದ್ದ ,‌ಕಾಣೆಯಾಗಿದ್ದ ವರದಿ ಹಾಸನ ಜಿಲ್ಲಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯಾಗಿತ್ತು , ಸಾಲ ತೆಗೆದುಕೊಂಡವರು ವಾಪಸ್ ಹಣ ಕೊಡುವುದಾಗಿ ಕರೆದುಕೊಂಡು ಹೋಗಿದ್ದರು. ಇಂದು 8 ಫೆ. 2023 ಬುಧವಾರ ಬೆಳಿಗ್ಗೆ ದುದ್ದ ಹೊರವಲಯದ ಕಾಡಿನಲ್ಲಿ ಪತ್ತೆಯಾದ ಲಿಖಿತ್ ಗೌಡ ಶವ ,

ಡಿವೈಎಸ್.ಪಿ. ಭಾಸ್ಕರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹಣಕಾಸು ವಿಷಯಕ್ಕೆ ಯುವಕನನ್ನು ಕಿಡ್ನಾಪ್ ಮಾಡಿರುವ ಪ್ರಕರಣ ಹೊಯ್ಸಳ ನಗರದಲ್ಲಿ ನಡೆದಿತ್ತು . , ಕಿಡ್ನಾಪ್ ಆಗಿರುವ ಯುವಕ ಲಿಖಿತ್‌ಗೌಡ (26) ಅಲಿಯಾಸ್ ಬಂಗಾರಿಯ ಸುಳಿವು ನಾಲ್ಕು ದಿನವಾದರು ಪತ್ತೆಯಾಗಿರಲಿಲ್ಲ. , ಈ ಬಗ್ಗೆ ಪೊಲೀಸ್ ಠಾಣೆಯಲ್ಲು ಪ್ರಕರಣ ದಾಖಲಾಗಿತ್ತು  ,‌ ಹಾಸನ್  ನ್ಯೂಸ್ ಸಾಮಾಜಿಕ ಜಾಲತಾಣದಲ್ಲು ಕಾಣೆಯಾದ ವರದಿ ಪ್ರಕಟವಾಗಿತ್ತು , ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತಗೌಡ ಕಳೆದ ಐದು ತಿಂಗಳ ಹಿಂದೆ ವಿವಾಹವಾಗಿದ್ದನಷ್ಟೇ .

ಟ್ಯಾಂಕರ್ ಸರ್ವಿಸ್‌ಗೆ ಬರುತ್ತಿದ್ದ ಟ್ಯಾಂಕರ್ ಚಾಲಕ ಸಾಗರ್ ನೊಂದಿಗೆ ಸ್ನೇಹ ಬೆಳೆದಿದ್ದು , ಈ ವೇಳೆ ಲಿಖಿತ್‌ ಗೌಡನಿಂದ ಸಾಗ‌ರ್ 2.5 ಲಕ್ಷ ರೂ. ಸಾಲ ಪಡೆದಿದ್ದನಂತೆ . ಇತ್ತೀಚೆಗೆ ಹಣ ವಾಪಾಸ್ ನೀಡದಿದ್ದಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ . ಇದರಿಂದ ಕೋಪಗೊಂಡ ಲಿಖಿತ್‌ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್‌ಹಾಕಿ, ಸಾಗರ್‌ನ ಸ್ಕೂಟರ್ ತೆಗೆದುಕೊಂಡು ಬಂದಿದ್ದನಂತೆ . ಇದೇ ಕಾರಣಕ್ಕೆ ಇಬ್ಬರ ನಡುವೆ ಪುನಃ ಜಗಳ ನಡೆದು. , ಫೆ.5 ರಂದು ಸಂಜೆ 6.30 ಸುಮಾರಿಗೆ ಹಣ ಕೊಡುವುದಾಗಿ ಸಾಗರ್ ಹಾಗೂ ಸ್ನೇಹಿತರು ಓಮಿನಿ ಕಾರಿನಲ್ಲಿ ಲಿಖಿತ್‌ಗೌಡನನ್ನು ಕರೆದುಕೊಂಡು ಹೋಗಿದ್ದರು . ಅಂದಿನಿಂದಲೂ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು . ಅದೇನಾಗಿದೆ ಗೊತ್ತಿಲ್ಲ , ಆದರೆ ನಗರಾದ್ಯಂತ ಈ ಬಗ್ತೆ ಬಿಸಿ ಬಿಸಿ ಚರ್ಚೆಯಾಗ್ತಿತ್ತು‌ .

ಇದರಿಂದ ಆತಂಕ ಗೊಂಡ ಲಿಖಿತ್‌ ಗೌಡ ಪತ್ನಿ ಹಾಗೂ ಪೋಷಕರು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರಯ, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುವ ವೇಳೆ ನಗರದ ಹೊರ ವಲಯದಲ್ಲಿ ಶವ ಪತ್ತೆಯಾಗಿ , ಲಿಖಿತ್ ಅವರೇ ಅದು ಎಂದು ಕನ್ಫರ್ಮ್ ಆಯಿತು., ಹಣಕಾಸು ವಿಚಾರಕ್ಕೆ ಕಿಡ್ನಾಪ್ ಆಗಿರುವ ಲಿಖಿತ್ ಗೌಡ ಅವರ ಕುಟುಂಬದವರನ್ನು ಬಡಾವಣೆ ಠಾಣೆಗೆ ಕರೆದು ವಿಚಾರ ನಡೆಸಲಾಗಿ ,

ಸಾಗರ್ ಲಿಖಿತ್ ಹಾಗೂ ನವೀನ್ ನಡುವೆ ಜಗಳ ನಂತರ ಪ್ರಕರಣ ಯಾವ ತಿರುವು ಪಡೆದಿದೆ ಎಂಬುದರ ಬಗ್ಗೆ ಎಲ್ಲಾ ಪೊಲೀಸರ ಆಯಾಮಗಳಿಂದಲೂ ತಿನಿಖೆ ಮುಂದುವರೆಸಿದ್ದು ಪ್ರಕರಣ ಕುರಿತು ನಿಖರ ಮಾಹಿತಿ ಕಲೆಹಾಕಿ . ಸಂಕ್ಷಿಪ್ತ ವರದಿ ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಿಂದ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಯಬೇಕಿದೆ .

LEAVE A REPLY

Please enter your comment!
Please enter your name here