ಸಾವಿನ ಮನೆಯಲ್ಲೂ ಬಿಡಲಿಲ್ಲ ಕಳ್ಳತನ ; 4ಜೊತೆ ಓಲೆ , ಉಂಗುರ ದುಡ್ಡು ಬೆಳ್ಳಿ ದೀಪ…

0

ಹಾಸನ: ಅಂತ್ಯಕ್ರಿಯೆಗೆ ಹೋಗಿದ್ದವರ ಮನೆಗೆ ಹಾಕಿದ್ದ ಬೀಗ ಮುರಿದು 99,500 ರೂ. ಬೆಲೆ ಬಾಳುವ ಚಿನ್ನ-ಬೆಳ್ಳಿಯ ಆಭರಣ ಹಾಗೂ ರೇಷ್ಮೆ ಸೀರೆ ಕಳವು ಮಾಡಿರುವ ಘಟನೆ ಹಾಸನ  ಜಿಲ್ಲೆಯ ಅರಸೀಕೆರೆ ತಾಲೂಕಿನ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿ ನಡೆದಿದೆ. , ಭಾರತಿ ನಾಯಕ್ ಎಂಬುವರು 4 ತಿಂಗಳಿನಿಂದ ಬಡಾವಣೆಯ ಬಿ.ಇಡಿ. ಕಾಲೇಜಿನ ಹಿಂಭಾಗದ ವಿಳಾಸದಲ್ಲಿ

ಬಾಡಿಗೆ ಮನೆ ಮಾಡಿಕೊಂಡು ಪತಿ ಭೀಮಾನಾಯ್ಕ ಅವರೊಂದಿಗೆ ವಾಸವಾಗಿದ್ದರು. ಆದರೆ ಭೀಮಾನಾಯ್ಕ ಅವರ ಕಾಲಿಗೆ ಗ್ಯಾಂಗ್ರಿನ್ ಆಗಿದ್ದರಿಂದ ಫೆ.3 ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. , ಅಂತ್ಯಕ್ರಿಯೆಯನ್ನು ಸ್ವಂತ ಊರಾದ ಕಡೂರು ತಾಲೂಕು ಸಿಂಗಟಗೆರೆಯಲ್ಲಿ ನೆರವೇರಿಸಿ ಫೆ.16ರಂದು ಹೆಂಜಗೌಡನಹಳ್ಳಿ ಮನೆಗೆ ಬಂದಾಗ ನೋಡಿದಾಗ

ಕಳ್ಳರು, ಬಾಗಿಲು ಬೀಗ ಒಡೆದು ಬೀರುವಿನ ಲಾಕರ್ ಕೀ ಮುರಿದು 99,500 ರೂ. ಬೆಲೆಬಾಳುವ 12 ಗ್ರಾಂ ತೂಕದ 4 ಜೊತೆ ಚಿನ್ನದ ಓಲೆಗಳು, 6 ಗ್ರಾಂ ತೂಕದ ಬಂಗಾರದ ಉಂಗುರ, ಎರಡು ರೇಷ್ಮೆ ಸೀರೆಗಳು ಮತ್ತು ದೇವರ ಮನೆಯಲ್ಲಿದ್ದ ಸುಮಾರು 150 ಗ್ರಾಂ ತೂಕದ ಬೆಳ್ಳಿಯ ದೀಪದ ಕಂಬ ಕದ್ದು ಪರಾರಿಯಾಗಿದ್ದಾರೆ. ಘಟನೆಗೆ

ಸಂಬಂಧಿಸಿ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here