Arsikere

ಎರಡು ಬೈಕ್‌ಗಳಲ್ಲಿ ಮೂವರು ಅಪರಿಚಿತ ಖದೀಮರು ಎಂಟ್ರಿಕೊಟ್ಟು ಮಾಡಿದ್ದು ಜಗನ್ನಾಟಕ

By Hassan News

February 22, 2023

ಹಾಸನ : ಅಯ್ಯೋ! , ಕಳ್ಳರಿದ್ದಾರೆ, ಅಲ್ಲಿ ಕೊಲೆ ಮಾಡಿ ಆಭರಣ ಕಳವು ಮಾಡಿದ್ದಾರೆ ಎಂದು ಅವಳಷ್ಟಕ್ಕೆ ಅವಳು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯನ್ನು ನಾಟಕೀಯವಾಗಿ ಬೆದರಿಸಿ ಆಕೆಗೆ ಸಹಾಯ ಮಾಡುವ ನೆಪದಲ್ಲಿ  ಕುತ್ತಿಗೆಯಲ್ಲಿದ್ದ 45 ಗ್ರಾಂ ಚಿನ್ನದ ಮಾಂಗಲ್ಯ ಸರ ಪಡೆದು, ನಕಲಿ ಸರ ನೀಡಿ ಪರಾರಿ ಯಾಗಿರೋ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆ

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದ ಬಳಿ ಕಳೆದ ಫೆ.11 ರಂದು ಮಧ್ಯಾಹ್ನ ಗ್ರಾಮದ ಜಮೀನಿನಲ್ಲಿ ಪದ್ಮ ಎಂಬುವರು ಕೆಲಸ ಮಾಡುತ್ತಿದ್ದ . ಈ ವೇಳೆ ನಡೆದಿದೆ , ಎರಡು ಬೈಕ್‌ಗಳಲ್ಲಿ ಮೂವರು ಅಪರಿಚಿತ ಖದೀಮರು ಎಂಟ್ರಿಕೊಡಿದ್ದು . ಅವರಲ್ಲಿ ಒಬ್ಬ ಮೊದಲಿಗೆ‌ ಬಂದು ಪಕ್ಕದ ಗ್ರಾಮದ ಬಳಿ ಕಳ್ಳರು ಒಬ್ಬರು ಹೆಂಗಸನ್ನು ಕೊಲೆ ಮಾಡಿ, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ವಡವೆಗಳನ್ನು ಕಸಿದು ಪರಾರಿಯಾಗಿದ್ದಾರೆ, ನೀವೂ ಒಂಟಿಯಾಗಿ ಜಮೀನು ಕೆಲಸ ಮಾಡುತ್ತಿದ್ದೀರಾ, ನಿಮ್ಮ ಕತ್ತಿನಲ್ಲೂ ಚಿನ್ನದ ಮಾಂಗಲ್ಯ ಸರವಿದೆ, ಆಮೇಲೆ ಕೆಲಸ ಮಾಡಿಕೊಂಡರೆ ಆಯಿತು, ಈಗ ಮನೆಗೆ ಹೋಗಿ ಎಂದು ಹೇಳಿದ್ದಾನೆ. , ಅದನ್ನೆ ನಂಬಿದ ಆಕೆ ,

ನಂತರ ಆ ಉಳಿದ ಇಬ್ಬರು ಒಬ್ಬರಿಗೊಬ್ಬರು ಸಹಾಯ ಮಾಡುವ ಹಾಗೆ ನಟಿಸಿ, ಅಮ್ಮ ನೀವು ಮುಂದೆ ಒಬ್ಬರೇ ಹೋದರೆ ನಿಮ್ಮನ್ನು ಕೊಲೆ ಮಾಡಿ, ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಹೋಗುವ ಸಾಧ್ಯತೆ ಇದೆ. , ನಾವು ನಿಮ್ಮ ಹಿಂದೆಯೇ ಬಂದು ಊರಿನವರೆಗೆ ಬಿಟ್ಟು ಬರುತ್ತೇವೆ. ನಿಮ್ಮ ಬಳಿ ಇರುವ ಚಿನ್ನದ ಮಾಂಗಲ್ಯ ಸರ ಬಿಚ್ಚಿಕೊಡಿ ಎಂದು ಹೇಳಿ, ಚಿನ್ನದ ಸರ ಬಿಚ್ಚಿಸಿ ಪೇಪರ್‌ನಲ್ಲಿ ಸುತ್ತಿ ಮತ್ತೊಬ್ಬನಿಗೆ ಕೊಟ್ಟಿದ್ದಾನೆ. , ಜೀವ ಭಯದಿಂದ ಹೆದರಿದ ಮಹಿಳೆ, ಈ ಮೂವರು ಕಳ್ಳರು ಎಂದು ತಿಳಿಯದೆ ಅವರು ಹೇಳಿದಂತೆ ಮಾಡಲು ಹೋಗಿ ಮೌಲ್ಯಯುತ ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ . ಸ್ವಲ್ಪ ಹೊತ್ತಿನಲ್ಲೇ ತಗೋ ತಾಯಿ ನಿನ್ನ ಮಾಂಗಲ್ಯ ಸರ ಎಂದು ಪೇಪರ್ ಸುತ್ತಿದ ರೀತಿಯಲ್ಲೇ ನಕಲಿ ಸರ ಕೊಟ್ಟು ಇಲ್ಲಿಂದ ನೀನು ಮನೆಗೆ ಹೋಗು, ನಾವು ಹೋಗಬೇಕು ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ ಚಾಲಾಕಿ ಖದೀಮರು . ಬಳಿಕ

ಪೇಪರ್ ನಲ್ಲಿದ್ದ ಮಾಂಗಲ್ಯ ಸರ ಹೊರತೆಗೆದು ಕುತ್ತಿಗೆಗೆ ಹಾಕಿಕೊಳ್ಳಲು ನೋಡಿದಾಗ ಅದು ನಕಲಿ ಎಂದು ಗೊತ್ತಾಗಿದೆ. ಕಳುವಾಗಿರುವ ಮಾಂಗಲ್ಯ ಸರ ಅಂದಾಜು ಈಗಿನ ಬೆಲೆ 1.75 ಲಕ್ಷ ರೂ. ಬೆಲೆ ಬಾಳಲಿದೆ ಎನ್ನಲಾಗಿದ್ದು, ಪದ್ಮ ಅವರು ನೀಡಿದ ದೂರು ಆಧರಿಸಿ ಬಾಣಾವಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಲಹೆ : ಯಾರೇ ಅಪರಿಚಿತರು ಏನೇ ಹೇಳಿದರು , ನಿಮ್ಮ ಎಚ್ಚರದಿಂದ ನೀವು ಇರಿ .