ಹುಂಡಿ ಕದ್ದೊಯ್ದ ಕಳ್ಳರು, ಕಾಣಿಕೆ ಹಣ ದೋಚಿ ಖಾಲಿ ಹುಂಡಿ ಬಿಸಾಕಿ ಹೋದರು

0

ಹಾಸನ : ದೇಗುಲದಲ್ಲಿದ್ದ ಹುಂಡಿ ಕದ್ದೊಯ್ದ ಕಳ್ಳರು, ಅದನ್ನು ಒಡೆದು ಕಾಣಿಕೆ ಹಣವನ್ನೆಲ್ಲ ದೋಚಿ ಖಾಲಿ ಹುಂಡಿಯನ್ನು ಸ್ಥಳದಲ್ಲೇ ಬಿಸಾಕಿ ಹೋಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಅಂಬೇಡ್ಕರ್ ನಗರದ ಚಿಕ್ಕಮ್ಮ-ದೊಡ್ಡಮ್ಮ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. , ದೇಗುಲದ ಅರ್ಚಕ ಬುಧವಾರ ಸಂಜೆ ಪೂಜೆ ಸಲ್ಲಿಸಿ ಎಂದಿನಂತೆ ಮುಂಬಾಗಿಲಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಗುರುವಾರ ಬೆಳಗಿನ ಜಾವ

2 ರಿಂದ 3 ಗಂಟೆ ಸಮಯದಲ್ಲಿ ಕಳ್ಳರು ದೇಗುಲದ ಬಾಗಿಲ ಬೀಗ ಮುರಿದು ಒಳ ನುಗ್ಗಿ ಗರ್ಭಗುಡಿ ಮುಂಭಾಗದಲ್ಲಿದ್ದ ಹುಂಡಿ ಹೊತ್ತೊಯ್ದಿದ್ದಾರೆ.
ನಂತರ ಅಂಬೇಡ್ಕರ್ ನಗರದ ವಿಜಯ ರೈಸ್ ಮಿಲ್ ಹಿಂಭಾಗಕ್ಕೆ ತೆರಳಿ ಅಲ್ಲೂ ಕೊಠಡಿಯೊಂದರ ಬೀಗ ಒಡೆದು ಹಾರೆ ಮತ್ತು

ಮಚ್ಚಿನಿಂದ ಹುಂಡಿ ಬೀಗ ತೆರೆದು ಹುಂಡಿಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು ಮಾಹಿತಿ ನೀಡಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ಸಿಸಿ ಟಿವಿ ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here